ಈ ಹೆಸರಿನ ಕನ್ನಡ ವಾರಪತ್ರಿಕೆಯೊಂದು ಇದೆಯೆಂದು ಕೇಳಿದ್ದೇನೆ.
ಹೌದು ಬರಿ ಕೇಳಿದ್ದೇನೆ ಅಷ್ಟೆ. ಒದುವುದು ಹಾಗಿರಲಿ ಇನ್ನೂ ಆ
ಪತ್ರಿಕೆಯನ್ನು ನೋಡಿಲ್ಲ.
ಅದೇನೆ ಇರಲಿ, ಕನ್ನಡದ ಹೆಚ್ಚಿನ ವರ್ತಮಾನ/ವಾರ ಪತ್ರಿಕೆಗಳಂತೆ
'ವಿಕ್ರಾಂತ ಕರ್ನಾಟಕ'ವೂ ಕೂಡ ಅಂತರ್ಜಾಲದಲ್ಲಿ ತನ್ನದೇ ಆದ
ತಾಣವೊಂದನ್ನು ಹೊಂದಿದೆ.
(ವಿಳಾಸ: http://www.vikrantakarnataka.com)
ಇಂದು ಅವರ ತಾಣಕ್ಕೆ ಭೇಟಿಯಿತ್ತೆ.
ತಪ್ಪನ್ನು ಹುಡುಕುವ ಉದ್ದೇಶದಿಂದ ನಾನು ಹೋದವನಲ್ಲ.
ಆದರು ಕಣ್ಣಿಂದ ತಪ್ಪಿಸಿಕೊಳ್ಳಲಾರದ ಕೆಲವನ್ನು ತಿಳಿಸಲೇಬೇಕು.
ನಾನು ಗಮನಿನಿದ ಮೊದಲ ಅಂಶ, ಮುಖಪುಟದಲ್ಲೇ ದಿನಾಂಕ ತಪ್ಪಾಗಿರುವುದು.
(ಈ ಕೆಳಗಿನ ಚಿತ್ರವನ್ನು ಗಮನಿಸಿ ).

(ಅಂದಹಾಗೆ, ದಿನಾಂಕದ ವಿಚಾರವಾಗಿ ಅವರಿಗೆ ನಾನು
ಈಗಾಗಲೆ ಇ-ಪತ್ರ ಬರೆದಿದ್ದೇನೆ. ಆದರೆ ಇದುವರೆಗೆ
ಅವರಿಂದ ಯಾವ ಪ್ರತಿಕ್ರಿಯೆ ಬಂದಿಲ್ಲ.)
ನಿಮಗೆ ಕನ್ನಡ ಫಾಂಟ್ ಬಗ್ಗೆ ಸಾಕಷ್ಟು ಜ್ಞಾನವಿಲ್ಲದಿದ್ದರೆ
ಓದಲಾಗದೆ ಒದ್ದಾಡುವುದು ನಿಶ್ಚಿತ.
UNICODE Version ಗೆ ಬೇರೆ ಕೊಂಡಿಯಿದೆ. ಆದರೂ
ಬೇರೆ ಬೇರೆ ಪುಟಕ್ಕೆ ಹೋದಂತೆ ಕೆಲವೊಮ್ಮೆ ಫಾಂಟ್ ಸಮಸ್ಯೆಗಳು
ಮತ್ತೆ ಮುಖ ತೋರಿಸುತ್ತವೆ!
ಇನ್ನೂ ಸಂಪುರ್ಣ ತಾಣವನ್ನು ನೋಡಿಲ್ಲ...
ಮುಂದೊಮ್ಮೆ ಸಾಧ್ಯವಾದರೆ ಇದರ ಬಗ್ಗೆ ಮತ್ತೆ ಬರೆಯುತ್ತೇನೆ.
ಉತ್ತಮ ಕತೆ ಕಾವ್ಯ ಕವನ ಕಾದಂಬರಿ ಲೇಖನಗಳನ್ನೊಳಗೊಂಡು,
ನೈಜ ವರದಿಗಳನ್ನು ಸಕಾಲಕ್ಕೆ ಜನಮನಕ್ಕೆ ತಲುಪಿಸುವ ಸತ್ಕಾರ್ಯದಲ್ಲಿ
ಈ ಪತ್ರಿಕೆಗೆ ಯಶ ಸಿಗಲೆಂದು ನನ್ನ ಹಾರೈಕೆ.


2 comments:
ಸಂದೀಪಾ, ನೀನು ಹೇಳಿರೋದು ಸರಿ ಇದೆ. ನನಗೂ ಇದೇ ಸಮಸ್ಯೆ ಆಗಿತ್ತು..
ಹೊಸದಾಗಿ ಆರಂಭ ಆಗಿದ್ದರಿಂದ ಈ ಸಮಸ್ಯೆಗಳು ಸ್ವಲ್ಪ ದಿನ ಇರಬಹುದು. ಬೇಗನೆ ಸರಿ ಹೋದಾವು. ವಿಕ್ರ್ರಾಂತ ಕರ್ನಾಟಕ ದ ಪ್ರಯತ್ನ, ಶ್ಲಾಘನೀಯ.
@ಶ್ರೀನಿಧಿ
1. ನನ್ನ ಹೆಸರು ಸಂದೀಪಾ ಅಲ್ಲ(ಸಂದೀಪ್ ಕೂಡ ಅಲ್ಲ),
ಅದು ಸಂದೀಪ.
2. ಬಹು ಬೇಗ ಅವರು ಆ ರೀತಿಯ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆಂದು ಹಾಗು ಮುಂದೆ ಆ ರೀತಿಯ ತಪ್ಪುಗಳಾಗದಂತೆ ಎಚ್ಚರವಹಿಸುತ್ತಾರೆಂದೂ ನನ್ನ ನಂಬಿಕೆ.
ಎಲ್ಲರ ಹಾಗೆ, ನಾನು ಕೂಡ
ಕಾದು ನೋಡುವ ತತ್ವಕ್ಕೆ ಶರಣಾಗುವೆ :)
Post a Comment