Monday, September 18, 2006

ಕೇಳಿದ್ಯನೆ ಕಮ್ಲಾಕ್ಷಕ್ಕ...

ಕೇಳಿದ್ಯನೆ ಕಮ್ಲಾಕ್ಷಕ್ಕ
ಬೆಂಗ್ಳೂರಲ್ಲಿ ನಮ್ಮೂರುಡ್ರು
ನಾಳೆ ದಿನ ಚಕ್ಲಿ ಕಂಬ್ಳ
ಮಾಡ್ತ ಇದ್ವಡಾ || ಪ||

ಅಲ್ದೆ ಮತೆ ವಿಶಾಲಾಕ್ಷಿ
ಯಂಗೆ ಯಾರು ಹೇಳ್ಲೆ ಇಲ್ಲೆ
ಯಾವಾಗೆಲ್ಲಿ ಎಂತು ಅಂತ
ಗೊತ್ತೇ ಇಲ್ಯಲೆ ? || ೧||

ಗೊತ್ತೇ ಇಲ್ಯ ನಿಂಗಗರೆ!
ಊರಲ್ಲಲ್ಲ ಬೆಂಗ್ಳೂರಗೆ
ಅಲ್ಲೇ ಇಪ್ಪ ಹುಡ್ರು ಶೇರ್ ಕ್ಯಂಡ್
ಮಾಡ್ತ ಇದ್ವಡ || ೨||

ಗಿರಿನಗರ ಮಟದಗಡ
ಸಂಜಿಗ್ ನಾಕ್ ಗಂಟಿಗಡ
ಚಕ್ಲಿ ಜೊತಿಗೆ ಚುಡುವ ಕಷಾಯ
ಮಾಡುಸ್ತ್ವಡ || ೩||

ಹಾಂಗ್ ಬೇರೆ ಇದ್ದ ಮತೆ
ಹೇಳಿದ್ ಚೊಲೊ ಆತು ನೋಡು
ಯಮ್ಮನೆ ಮಾಣಿಗ್ ಪೋನ್ಮಾಡ್ ಹೇಳ್ತಿ
ಹೋಗ್ ಬಂದ್ಕಳ್ಳಿ || ೪||

ಹಬ್ಬಕ್ಕಂತು ಬಪ್ಲಕ್ಕಾಗ್ಲೆ
ಆನು ಎಂತು ಕೊಟ್ಗಳ್ಸಲ್ಲೆ
ಅಲ್ಲೆ ಕಂಬ್ಳ ಮಾಡ್ಕ್ಯಂಡ್ ತಿಂದ್ರೆ
ಅಷ್ಟೇ ಖುಶಿ || ೫||

ಯಮ್ಮನೆ ಅಮ್ಮಿ ಫೋನ್ ಮಾಡಿತ್ತು
ಅವ್ರು ಎಲ್ಲ ಹೊಂಟಿದ್ವಡ
ಎಷ್ಟ್ ಜನ ಆಗ್ತ ಯಾರ್ಯಾರ್ ಬತ್ತ
ಅಂದಾಜಿಲ್ಯಡ || ೬||

ಕೇಳಕ್ ಮರ್ತೇ ಹೋತು ನೋಡು
ಚಕ್ಲಿ ಮಾಡಕ್ ಯಾರ್ ಬತ್ವಡ?
ಯಾವ್ ಎಣ್ಯಲ್ ಕರೀತ್ವಡ
ಎಂತ ಕತ್ಯಡ? || ೭||

ಅಲ್ಯಾರಿಗೆ ಪುರ್‍ಶೊತ್ತಿರ್‍ತೆ
ಅವರಿದ್ದೇ ಅವರಿಗಾಯ್ದು
ಊರ್ ಬದಿಗೆ ಎಲ್ಲೋ
ಮಾಡ್ಶಿದ್ವಡ || ೮||

ಆಗ್ಲಿ ಬಿಡು ಚೊಲೋ ಆತು
ಸುದ್ದಿ ಕೇಳಿ ಖುಶಿ ಆತು
ಎಲ್ಲಾ ಒಟ್ಟು ಒಳ್ಳೇದಾದ್ರೆ
ಅಷ್ಟೇ ಸಾಕು || ೯||

5 comments:

Soumya said...

Aha!!! tumba chanagiddu!

Enigma said...

woow hengitha kambla!1 nage yerdu kalskoda

Alpazna said...

@soumya
ಮತ್ತೆ! ಚೆನಾಗಿರ್ದೆ?

@enigma
ಬಾಳಾ ಚೆನಾಗಾತು ಕಂಬ್ಳ!
ಚಕ್ಲಿ ಇದ್ದು ಇನ್ನು ಗಿರಿ ರೂಮಗೆ,
ಬೇಗ ಬಂದ್ರೆ ಸಿಗ್ತು.

ಫೋಟೊನಾರು ನೋಡು ಹೋಗ್ಲಿ.

Anonymous said...

ನಾನು ಬಂದಿದ್ದಿ ಚಕ್ಲಿ ಕಂಬ್ಳಕ್ಕೆ. ಚಕ್ಲಿ ಜೊತೆ ಹೋಳ್ಗೆನೂ ಇತ್ತು ಅಲ್ದಾ? last year ಚಕ್ಲಿ ಕಂಬ್ಳನೇ ಅಲ್ದಾ? ಆದರ್ಶ ಹೆಗಡೆ ‘ಹೇ ಭಗವಂತನೇ ನೀನೆ ಧಯಾಘನ’ ಹಾಡು ಹೆಳಿದಿದ್ದ. ಈ ಪದ್ಯ ಓದಿ ಎಲ್ಲಾ ನೆನ್ಪಾಗ್ತಾ ಇದ್ದು. ಪದ್ಯ ಚಂದ ಇದ್ದು. Tune ಹಾಕಿ ಹಾಡುವ್ವು, ಮಸ್ತ್ ಕೇಳ್ತು.

- ಶಾಂತಲಾ ಹೆಗಡೆ.

Alpazna said...

@ಶಾಂತಲಾ,
ಬಹಳ ಸಂತೋಷ.
ಖುಷಿ ಆತು ಪ್ರತಿಕ್ರಿಯಿಸಿದ್ದಕ್ಕೆ!