ಮಧ್ಯಾಹ್ನ ೩ ಮುಕ್ಕಾಲು.
ಸುಡುವ ಬಿಸಿಲಿನ ತಾಪಕ್ಕೆ ಮೇಕ್ರಿ ವೃತ್ತದ ಬಳಿ ರಸ್ತೆಯಲ್ಲಿನ ಟಾರು ಕಾಯುತ್ತಿತ್ತು.
ಟ್ರಾಫಿಕ್ ಪೋಲೀಸರಿಗೆ ಅಪರಾಹ್ನದ ನಿದ್ದೆ ಇನ್ನೂ ಮುಗಿದಂತಿರಲಿಲ್ಲ.
ಹಾಗಾಗಿ, ಬೆಳಗಿನ ವೇಳೆಯಲ್ಲಿ ಕೆಲವೊಮ್ಮೆ ನಾಲ್ಕು ಐದು ಮಾಮಂದಿರಿರುತ್ತಿದ್ದ
ವೃತ್ತದ ಬಳಿ ಈ ಹೊತ್ತಿನಲ್ಲಿ ತೋರಿಕೆಗೂ ಒಬ್ಬ ಬಿಳಿ ಅಂಗಿಯವನಿರಲಿಲ್ಲ.
ಆಗಾಗ ಹಾಯುತ್ತಿದ್ದ ಒಂದೊಂದು ವಾಹನಗಳನ್ನು ಹೊರತುಪಡಿಸಿ,ಇನ್ನೆಲ್ಲ ಬರಿ ಶೂನ್ಯ.
ಕಾವೇರಿ ವೃತ್ತದ ಕಡೆಯಿಂದ ಬಂದು ಸೇರುವ ರಸ್ತೆಯಿಂದ ಬೂದು ಬಣ್ಣದ ಬೈಕೊಂದು ಬರುತ್ತಿತ್ತು.
ಸಾಮಾನ್ಯವೇಗದಲ್ಲಿ ಸಾಗಿ ಬರುತ್ತಿದ್ದ ಬೈಕಿನ ರಿಮ್ಮುಗಳು ಸೂರ್ಯನ ಬೆಳಕಿನಲ್ಲಿ ಫಳ ಫಳ
ಹೊಳೆಯುತ್ತಾ ನಿನ್ನೆಯೋ ಮೊನ್ನೆಯೋ service ಆದ ಗಾಡಿ ಇದೆಂದು ಸಾರಿ
ಸಾರಿ ಹೇಳುವ ಪ್ರಯತ್ನದಲ್ಲಿದ್ದಂತೆ ಭಾಸವಾಗುತ್ತಿತ್ತು.
ಸುಮಾರು ೨೦ರ ಎಡಬಲದಲ್ಲಿರಬಹುದಾದ ಅದರ ಸವಾರ ಕಡುಗೆಂಪು ಬಣ್ಣದ helmet
ಧರಿಸಿ, ಧೂಳು ಕಣ್ಣಿಗೆ ಬರದಂತೆ ಅದರ ಗ್ಲಾಸನ್ನು ಇಳಿಸಿಕೊಂಡಿದ್ದ. ಅವನು ಹಾಕಿಕೊಂಡಿದ್ದ
ಇಸ್ತ್ರಿಯ ಗೆರೆಗಳು ಇನ್ನೂ ಮಾಸಿರದ, ಉದ್ದ ತೋಳಿನ ಕಡು ಹಸಿರು ಬಣ್ಣದ ಅಂಗಿಯ ಕತ್ತಿನ
ಭಾಗದಿಂದ ಬೆಳ್ಳನೆಯ ಮೂರೆಳೆಯ ದಾರವೊಂದು ಇಣುಕುತ್ತಿತ್ತು. ಎಡಗೈಯಲ್ಲಿ ಕಟ್ಟಿದ್ದ ಬಂಗಾರದ
ಬಣ್ಣದ ವಾಚು ಆಗಾಗಲೊಮ್ಮೆ ಹೊರಗೆ ಬಂದು, ಉರಿಯುವ ಸೂರ್ಯನಿಗೆ ಬೆಚ್ಚಿದಂತೆ ಮತ್ತೆ
ತೋಳಿನೊಳಗೆ ಅಡಗಿಕೊಳ್ಳುತ್ತಿತ್ತು.
ಹೆಲ್ಮೆಟ್ಟಿನ ಗಾಜಿನೊಳಗಿಂದ ಅವನ ಕಣ್ಣಿನ ಭಾವವನ್ನು ಕಾಣುವುದು ಕಷ್ಟವಾಗಿದ್ದರೂ, ಅವನು
ಕುಳಿತ ಭಂಗಿ, ಅವನು ಬೈಕು ಓಡಿಸುತ್ತಿದ್ದ ವೇಗ ಹಾಗು ಅವನು ಹ್ಯಾಂಡಲ್ ಹಿಡಿದ ರೀತಿಯನ್ನು
ನೋಡಿದಾಗ ಅದರ ಸಾರಥ್ಯದಲ್ಲಿನ ಸಹಜತೆ ಎದ್ದು ತೋರುವಂತಿತ್ತು.
ವೃತ್ತವನ್ನು ದಾಟಿ ಜೆ ಸಿ ನಗರದ ಕಡೆಗೆ ಹೋಗುವ ರಸ್ತೆಗೆ ತಿರುಗಿದ ಅವನ ವಾಹನ ಈಗ
ಮೊದಲಿಗಿಂತಲೂ ತುಸು ನಿಧಾನವಾಗಿ ಚಲಿಸುತ್ತಿತ್ತು.
ನುಣ್ಣಗೆ ಕಾಣುತ್ತಿದ್ದ ಡಾಂಬರಿನ ರಸ್ತೆಯಲ್ಲಿ ಗಮನಿಸಿ ನೋಡಿದರೆ ಮಾತ್ರ ಕಾಣಬಹುದಾದ
ಸಣ್ಣ ಸಣ್ಣ ಬಿರುಕುಗಳಿದ್ದವು. ಹತ್ತಿರದಿಂದ ನೋಡಿದರೆ ತೆರೆದುಕೊಂಡ ಬಾಯಿಗಳಂತೆ ಕಾಣುತ್ತಿದ್ದ
ಈ ಬಿರುಕುಗಳು ಏನನ್ನೋ ಬಯಸುತ್ತಿರುವಂತೆ ತೋರುತ್ತಿತ್ತು.
ಬೈಕ್ ಸವಾರನಿಗೆ ಸ್ವಲ್ಪವೇ ದೂರದಲ್ಲಿ, ಅವನಿಗಿಂತ ಮುಂದೆ ಆಟೋ ರಿಕ್ಷಾವೊಂದು
ಆಮೆಗತಿಯಲ್ಲಿ ಹೋಗಲೋ ಬೇಡವೋ, ಹೋಗಲೋ ಬೇಡವೋ ಎಂಬಂತೆ ಹೋಗುತ್ತಿತ್ತು.
ಬೈಕು ಸವಾರನ ದೃಷ್ಟಿ ನೇರ ರಸ್ತೆಯ ಮೇಲೆ ನೆಟ್ಟಿತ್ತು. ಮುಂದೆ ನಿಧಾನವಾಗಿ ಹೋಗುತ್ತಿದ್ದ ಆಟೊ ನೋಡಿ
ಅವನು ಹಾರ್ನ್ ಮಾಡಿ ಅದನ್ನು ಅವನಿನ್ನೇನು ದಾಟಿಯೇಬಿಟ್ಟನೆನ್ನುವಷ್ಟರಲ್ಲಿ....
ಕೀಂಚ್... ಭಡ್, ಧಡಾಲ್..
......... ಆಕ್ಸಿಡೆಂಟ್ ಆಗೋಗಿದೆ!!
ಬೈಕ್ ಸವಾರನ ಕಣ್ಣಲ್ಲೀಗ ನೀಲಿ ಬಣ್ಣದಲ್ಲಿ ತೇಲುತ್ತಿರುವ ಆಟೋ ಬಾಗಿಲು,
ಗಾಳಿಯಲ್ಲಿ ತಲೆಕೆಳಗಾಗಿ ನಿಂತ ಮರ,
ತಿರುಗುತ್ತಿರುವ ರಸ್ತೆ. ಅಷ್ಟೆ!
ಸಮಯ ಸ್ತಬ್ಧವಾಗಿದೆ.
ಬಲ ಬುಜದ ಮೇಲೆ ಮನೆಯ ಮಾಡು ಕಳಚಿ ಬಿದ್ದಂತೆ, ಹಾಕಿಕೊಂಡ ಹೆಲ್ಮೆಟ್ಟಿಗೆ ಯಾರೋ ಹಿಂಭಾಗದಿಂದ
ಸುತ್ತಿಗೆಯಲ್ಲಿ ಬಲವಾಗಿ ಹೊಡೆದಂತಹ ಅನುಭವ.
ಏನಾಗುತ್ತಿದೆಯೆಂದು ಅವನಿಗೆ ಅರಿವಾಗುವುದರೊಳಗೆ ಘಟಿಸಬಾರದಾಗಿದ್ದ ಘಟನೆಯೊಂದು ಘಟಿಸಿಹೋಗಿದೆ.
ಅರೆ ಕ್ಷಣದ ಹಿಂದೆ ಬೈಕಿನ ಮೇಲೆ ಅವನಷ್ಟಕ್ಕೆ ಹೋಗುತ್ತಿದ್ದವ ಈಗ ನಡುರಸ್ತೆಯಲ್ಲಿ ಅಡ್ಡಾಗಿದ್ದಾನೆ.
ಬೈಕಿನಿಂದ ಹಾರಿದ ಅವನ ದೇಹ ಮೂರಡಿ ದೂರದಲ್ಲಿ ಮಗುಚಿ ಬಿದ್ದಿದೆ.
ಅವನ ಕಿವಿಗಳಿಗೆ ಏನೂ ಕೇಳುತ್ತಿಲ್ಲ. ಕಣ್ಣುಗಳು ಕುರುಡಾಗಿವೆ. ಒಂದರೆಕ್ಷಣ ಸುತ್ತಲಿನ ಪ್ರಪಂಚವೇ
ಮಾಯವಾದಂತೆ ಅವನಿಗನ್ನಿಸಿದೆ. ಹಾಗೆಬಿದ್ದ ದೇಹ ಮತ್ತೆ ಉರುಳುವಾಗ ಆ ಶೂನ್ಯದಲ್ಲಿ
ಪಂಚೇಂದ್ರಿಯಗಳಿಗೆ ನಿಲುಕದ ಎಂತದೋ ಒಂದು ಅವನಿಗೆ ಕಂಡಿದೆ. ಮತ್ತು ಅದನ್ನು ಅವನು ಸುಲಭವಾಗಿ
ಗುರುತಿಸಿದ್ದಾನೆ. ಅವನಿಗೆ ಅದೇನೆಂದು ಸ್ಪಷ್ಟವಾಗಿ ತಿಳಿದುಹೋಗಿದೆ. ಯಾವುದನ್ನು ಬದುಕಿರುವವರೆಗೂ
ನೋಡಲಾಗದೆಂದು ಹಾಗು ನೋಡಬಾರದೆಂದುಕೊಂಡಿದ್ದನೋ ಅದೇ ಇಂದು ಈ ಕ್ಷಣ ಅವನ ಕಣ್ಣೆದುರು
ಬಂದಿದೆ. ಅವನು ಈವರೆಗೆ ಕತೆಯಲ್ಲಿ ಓದಿದಂತೆ ಅದು ಮಿಂಚಿನಂತೆ ಸುಳಿದು ಮರೆಯಾಗಿಲ್ಲ. ಬದಲಾಗಿ
ಸಮಯವೇ ಸತ್ತು ಹೋದ ಘಳಿಗೆಯಲ್ಲಿ ಸಾವು ಮಾತುಕತೆಗೆ ಬಂದಂತೆ ಅವನೆದುರು ನಿಂತುಬಿಟ್ಟಿದೆ.
ನಿದ್ರೆಯಲ್ಲಿರುವಂತಿದ್ದ ಅವನ ಪ್ರಜ್ಞೆ, ಕನಸಿನಲ್ಲೆಂಬಂತೆ ಗುನುಗುನಿಸುತ್ತಿದೆ..
ನೀಬಂದು ನಿಂತಾಗ, ನಿಂತು ನೀ ನಕ್ಕಾಗ, ಅತ್ತೆss ನಾನಾಗ...
ಇಲ್ಲ. ಸಾವು ನಗುತ್ತಿಲ್ಲ. ಇವನು ಹೆದರಿಲ್ಲ.
ಜೀವವೇ ಇಲ್ಲದಿರುವ ತಲೆಯಲ್ಲಿ ಪ್ರಶ್ನೆಗಳಿಗೇನು ಕೊರತೆಯಿಲ್ಲ.
ಇವನು ಕೇಳುತ್ತಿದ್ದಾನೆ.
"ಸಾವಿಗೆ ಹೆದರದವರು ಬದುಕಲು ಅನರ್ಹರೆ?"
ಅವನೇಕೆ ಸಾವಿಗೆ ಹೆದರುತ್ತಿಲ್ಲವೆಂದು ಅವನಿಗೆ ಅರ್ಥವಾಗುತ್ತಿಲ್ಲ.
ಇಷ್ಟೆಲ್ಲಾ ನಡೆಯುತ್ತಿರುವಾಗ ನೀಲಿ ಬಣ್ಣದ ಲಗ್ಗೇಜ್ ಆಟೋ ತನಗೆ ಇದಾವುದೂ ಸಂಬಂದವೇ
ಇಲ್ಲವೆಂಬಂತೆ, ತಾನು ಬೀಳಿಸಿದ ವ್ಯಕ್ತಿ ಬದುಕಿದ್ದಾನೊ ಇಲ್ಲ ಸತ್ತಿದ್ದಾನೊ ಎಂದು ನೋಡುವಷ್ಟು
ಮಾನವೀಯತೆ(?) ಇಲ್ಲದ ಹಾಗೆ ಯು ಟರ್ನ್ ಮಾಡಿಕೊಂಡು ಹೋಗಿದ್ದಾಗಿದೆ.
ಪಾಂ...ಕ್.. ಪಾಂಕ್.. ಹಾರ್ನ್ ಕೇಳಿ ಕೆಟ್ಟ ಕನಸನ್ನು ಕಂಡ ಚಿಕ್ಕ ಮಗುವಿನಂತೆ
ಅವನು ಬೆಚ್ಚಿಬಿದ್ದಿದ್ದಾನೆ. ಬಿದ್ದಲ್ಲಿಂದ ಬೆಚ್ಚುತ್ತಲೇ ಎದ್ದಿದ್ದಾನೆ.
"ಸಾರ್ ಬನ್ನಿ ಸಾರ್, ಚೇಸ್ ಮಾಡೋಣ" ಎಂಬ ಸಲಹೆಯನ್ನು ನಗುತ್ತಲೇ? ತಿರಸ್ಕರಿಸಿದ್ದಾನೆ.
ರಸ್ತೆ ಮಧ್ಯೆ ಬಿದ್ದ ತನ್ನ ಬೈಕನ್ನು ಮುಟ್ಟಿದರೆ ಎಲ್ಲಿ ಅದಕ್ಕೆ ನೋವಾಗುತ್ತದೋ ಎಂಬಂತೆ ಮುಟ್ಟಿದ್ದಾನೆ.
ಅದರ ದುಸ್ತಿತಿಯನ್ನು ಕಂಡು ಮರುಗಿದ್ದಾನೆ.
ಬೈಕನ್ನು ಬದಿಗೆ ತಂದು ನಿಲ್ಲಿಸಿದವನೇ ಹೆಲ್ಮೆಟ್ ತೆಗೆದು ಬಲಗೈಲಿ ಹಿಡಿದುಕೊಂಡು, ಬೆವೆರು ಒರೆಸಿಕೊಳ್ಳಲೆಂದು
ಎಡಗೈಯಿಂದ ಜೇಬಲ್ಲಿದ್ದ ಕರ್ಚೀಫ್ ಹೊರತೆಗೆದಿದ್ದಾನೆ. ಕರ್ಚೀಫನ್ನು ಹಣೆಯ ಹತ್ತಿರದವರೆಗೂ ತೆಗೆದುಕೊಂಡು
ಹೋದವನು ಏನೋ ನೆನಪಾದವನಂತೆ ಸ್ತಬ್ಧನಾಗಿದ್ದಾನೆ. ಬುಡಕಳಚಿ ಬಾವಲಿಯಂತೆ ಜೋಲುತ್ತಿರುವ ಕನ್ನಡಿಯಲ್ಲಿ
ತನ್ನ ಬೆವರಿಲ್ಲದ ಹಣೆಯನ್ನು ಕಣ್ಣು ಮಿಟುಕಿಸುತ್ತಾ ನೋಡುತ್ತಿದ್ದಾನೆ.
"ಇಲ್ಲ ಸಾರ್ ಕಂಪ್ಲೇಂಟ್ ತಗೋಳಲ್ಲ" ಎಂಬ ಜವಾಬುಕೊಟ್ಟ ಜೆ.ಸಿ.ನಗರ ಸ್ಟೇಶನ್ನಿನ ಪೇದೆಯನ್ನು
ಭಾವರಹಿತ ಕಣ್ಣುಗಳಿಂದ ದಿಟ್ಟಿಸಿದ್ದಾನೆ.
ಬೈಕಿನ ಸೊಟ್ಟ ಹ್ಯಾಂಡಲನ್ನು ನಡುಗುವ ಕೈಗಳಿಂದ ಹಿಡಿದು ಆಫೀಸಿನತ್ತ ನಿಧಾನವಾಗಿ ನಡೆಸಿದ್ದಾನೆ.
ತನ್ನದೇ ಆದ ದುಖಃಭರಿತ, ವ್ಯಂಗ ಮಿಶ್ರಿತ ಗದ್ಗದಿತ ದ್ವನಿಯಲ್ಲಿ ಗುನುಗುತ್ತಿದ್ದಾನೆ..
ಸಾವಿಂದು... ಬಳಿಬಂದು.. ತಾಕಿತು ನನ್ನೆದೆಯ...
ಈಗ ರಾತ್ರಿ ಹನ್ನೆರಡುವರೆಗೆ ಒಂದೆ ಕೈಯಲ್ಲಿ ತಡವರಿಸುತ್ತ ಬ್ಲಾಗ್ ಟೈಪ್ ಮಾಡುವಾಗ ಅನ್ನಿಸುತ್ತಿದೆ:
ಶನಿಯಾಗಿ ಕಾಡಿತ್ತು ಮಾಯೆ!
Tuesday, September 19, 2006
Subscribe to:
Post Comments (Atom)


15 comments:
ಜಯಂತ ಕಾಯ್ಕಿಣಿಯ ಕತೆ 'ಚಂದಿರನೇತಕೆ ಓಡುವನಮ್ಮ' ನೆನಪಾಯಿತು. ಬಹುಶಃ ಮನುಷ್ಯನಿಗೆ ಜ್ಞಾನೋದಯವಾಗುವುದು, ಯಾರೋ ಬಿದ್ದುದ್ದನ್ನು ನೋಡಿದಾಗ ಅಲ್ಲ, ತಾನೇ ಬಿದ್ದಾಗ, ಅಲ್ಲವೇ? Fine, ಈಗ ಹೆಂಗಿದ್ಯೋ ಮಾರಾಯ? Any fractures?
ಬಟ್ಟಾ..... ಎನಿದು?......... ಎನಿ ಹೌ ರಿಕವರ್ ಸೂನ್......
ಹೇ ಮಗ ಹೆಂಗಿದ್ದೆ ಈಗ,ಆಫೀಸಿಗೆ ಹೊಯ್ದ್ಯಲ ಮತೆ, ಬೇಗ ಹುಷಾರಾಗು Next Month ಟ್ರೆಕ್ಕಿಂಗ್ ಹೊಗವಲ :)
@Sushrutha
'ಚಂದಿರನೇತಕೆ ಓಡುವನಮ್ಮ'? ಊಹೂಂ, ನೆನಪಾಗುತ್ತಿಲ್ಲ. ನಾನಿನ್ನು ಓದಿಲ್ಲ ಹಾಗಾದರೆ.
"ಬಹುಶಃ ಮನುಷ್ಯನಿಗೆ ಜ್ಞಾನೋದಯವಾಗುವುದು, ಯಾರೋ ಬಿದ್ದುದ್ದನ್ನು ನೋಡಿದಾಗ ಅಲ್ಲ,
ತಾನೇ ಬಿದ್ದಾಗ, ಅಲ್ಲವೇ?"
ಅಲ್ಲ, ನನ್ನ ಪ್ರಕಾರ ಖಂಡಿತಾ ಅಲ್ಲ. ಬಿದ್ದಾಗಲ್ಲ ಜ್ಞಾನೋದಯವಾಗುವುದು!
ಬಿದ್ದಲ್ಲಿಂದ ಏಳಲಾಗದಂತಾದಾಗ!
ಈಗ ಅಡ್ಡಿಲ್ಲೆ. No fractures. ಕಾಲ್ ನೋವ್ ಕಮ್ಮಿ ಆಯ್ದು. ರಾತ್ರಿ ಮೈಕೈ ನೋವಿತ್ತು. ಅದೂ ಕಮ್ಮಿ ಆಯ್ದು.
ಆದ್ರೆ ಭುಜ ಮಾತ್ರ.. ಸ್ವಲ್ಪ...
@LD
ಏನಿದು ಅಂದ್ರೆ? ಅಪಘಾತ.
ಅನಿರೀಕ್ಷಿತ ಆಘಾತ!
ಎನಿವೇssಸ್ ಥ್ಯಾಂಕ್ಸ್.
@Thomas
ಪರ್ವಾಗಿಲ್ಲೆ ಈಗ. ಮನೆಲ್ಲಿ ಹೊತ್ತು ಕಳ್ಯದ್ ಕಷ್ಟ(that too on a weekday!).
ಧನ್ಯವಾದ.
ಬೇಗ ಹುಷಾರಾಗ್ತಿ. ನನ್ನೂ ಲೆಕ್ಕಕ್ ಹಿಡ್ಕ, ಹೋಪ್ದೆ ಮತ್ತೆ :)
get well soon :)
@vikas
Thanks a lot vikas.
Hey ...! nidhAnavAge hogtidde anta illi baredare henge... nijjvAglu hushArage hogbeku...! paaapa .. A hosa bike hengidyo eno..!? How are you now? Going to offc? Take care.. and get well soon...!
"ninna language tumba chennAgide"!
@ಮೇಘ
ಮೇಘ,
ನಿಜ್ವಾಗ್ಲು ನಿಧಾನಾನೆ ಹೋಗ್ತಾ ಇದ್ದೆ. ನೀನು ನಂದೆ ತಪ್ಪು ಅನ್ನೊತರ
ಮಾತಾಡ್ತಾ ಇದೀಯ. ಇರ್ಲಿ....
ಬೈಕ್ ನೋಡಿದ್ರೆ ಪಾಪ ಅನ್ಸತ್ತೆ ನಂಗೆ!
ಅದರ ಆ bendಆದ forkಉ,
ಮೈತುಂಬ ಗಾಯದ markಉ!
ಹನಿ ಹನಿಯಾಗಿ ಸೋರುತ್ತಿದ್ದ ಆಯಿಲ್,
ಅದು ನನ್ನ ಸ್ಠಿತಿಯನ್ನು ನೋಡಿ ಸುರಿಸುತ್ತಿರುವ
ಕಣ್ಣೀರಿನಂತಿತ್ತು.
ನಾನು ಪರ್ವಾಗಿಲ್ಲ, ಸುಧಾರ್ಸ್ಕೋತಿದೀನಿ.
ಆಫೀಸ್ ಗೆ ಬತ್ತಾ(ಹೋಗ್ತಾ?) ಇದೀನಿ.
Thank you.
Congrats and get well soon :-)
@sharath
Congrats???!!
Thanks anyways :)
ಈ ಗ್ರಹಚಾರವೆಂಬುದು ಒಂದರೆ ಮೇಲೊಂದು ಹೇಗೆ ನಿಂತಿದೆ?
ನಿನಗೆ, ನಿನ್ನ ಬೈಕಿಗೆ, ನಿನ್ನ ಕಂಪ್ಯುಟರಿಗೆ ಒಟ್ಟೊಟ್ಟಿಗೆ ಯಾಕೆ ಬಂದಿದೆ??
ಅದಿರಲಿ, ನಿನ್ನೆ ಮೊನ್ನೆ ಪರಿಚಯವಾದ ನನಗೂ ತಾಗಿದಂತಿದೆ.
ಯಾಕೆಂದರೆ, ನಿನ್ನ ಹೊಸ ಬ್ಲಾಗುಗಳು ಸಿಗದೇ ಮನ ನೊಂದಿದೆ.!!!
ಹೇಯ್, ಸಂದೀಪ, ಈ ಭಾನುವಾರ ಮತ್ತೊಂದು ಭೇಟಿ ಮಾಡೊಣ. ಉಳಿದ ಚಕ್ಲಿ, ಹೋಳಿಗೆ ಎಲ್ಲಾ ಖಾಲಿ ಮಾಡವು. !!!
ಗೆಟ್ ವೆಲ್ ಸೂನ್ . "ಗಾಂಧಿಗಿರಿ"ಯೊಂದೇ ದಾರಿ. ಹ್ಹ ಹ್ಹ.
@vikas
ಒಂದರ ಮೇಲೊಂದೊ, ಒಂದರೊಳಗೊಂದೊ
ಏನೂ ತಿಳಿಯದಾಗಿದೆ ನನಗಿಂದು.
ಬ್ಲಾಗ್ ಸಿಗಲಿಲ್ಲವೇ?
ಹಾಗೇಕಾಯಿತೋ?!
ಮುಂದೆ ಮತ್ತೆ ಹಾಗಾಗದಂತೆ ಬುಕ್ ಮಾರ್ಕ್ ಮಾಡಿಕೊಳ್ಳಿ.
ಕ್ಷಮೆ ಇರಲಿ. ಈ ಭಾನುವಾರ ನಾನು
ನಗರದಲ್ಲಿ ಇರುವುದಿಲ್ಲ.
ಹಾಗಾಗಿ ಭೇಟಿಯಾಗುವುದು ಅಸಾಧ್ಯ.
enthatho maraya adke nin trip postpone madya? iga hengidde?
@enigma
ಈಗ ಅಡ್ಡಿಲ್ಲೆ, ಅರಾಮಾಯ್ದಿ.
ಇಲ್ಲೆ, ಟ್ರಿಪ್ ಪೋಸ್ಟ್ ಪೋನ್ ಆಗಿದ್ದು ಇದ್ಕಲ್ಲ.
Post a Comment