Thursday, April 26, 2007

ಕ್ರಾಂತಿಕವಿ ಸರ್ವಜ್ಞ

ಮೂರು ವಾರಗಳ ಹಿಂದೆ 'ದುನಿಯಾ' ಚಿತ್ರವನ್ನು ನೋಡಿಕೊಂಡು ಮನೆಗೆ ಮರಳುತ್ತಿದ್ದಾಗ ಶ್ರೀರಾಮಪುರದ ರಸ್ತೆಯೊಂದರ ಪರಿಚಯವಾಯ್ತು. ಕ್ಷಮಿಸಿ, ಪರಿಚಯವಾಗಲಿಲ್ಲ; ಹೆಸರು ತಿಳಿಯಿತು ಅಷ್ಟೆ.

ಆ ರಸ್ತೆಯ ಹೆಸರು "ಕ್ರಾಂತಿಕವಿ ಸರ್ವಜ್ಞ ರಸ್ತೆ". ಶ್ರೀರಾಂಪುರದಲ್ಲಿ ಆ ಹೆಸರಿನ ರಸ್ತೆಯೊಂದು ಇದೆಯೆಂದು (ಅಥವಾ ಯಾವುದೋ ರಸ್ತೆಗೆ ಆ ಹೆಸರು ಇಟ್ಟಿದ್ದಾರೆಂದೋ) ನನಗೆ ಗೊತ್ತಿರಲಿಲ್ಲ. ಸರ್ವಜ್ಞನ ಕ್ರಾಂತಿಯ ಬಗ್ಗೆ ಎಲ್ಲೂ ಕೇಳಿದ/ಓದಿದ ನೆನಪಿಲ್ಲ. ಅದನ್ನು ತಿಳಿಯಲೆಂದೇ ಇಲ್ಲಿ ಬರೆಯುತ್ತಿದ್ದೇನೆ.

ಸರ್ವಜ್ಞನೆಂಬುವನು ಕ್ರಾಂತಿಯನು ಮಾಡಿದನೆ?
ಮಾಡಿದರದೇನು? ಅಥವಾ ಬರಿಯ ಹೆಸರಿನಾಟವೆ
ಇದೆಲ್ಲ, ಬಲ್ಲವರು ಹೇಳಿ - ಅಲ್ಪಜ್ಞ

4 comments:

vikas hegde said...

houdu sandeepa, ivattu naanu busnalli barakadre ade board nodi hange andkandi. Sarvajnange Krantikavi antha yaake heltidarappa antha...

amele.. hechchagi avana vachanagalalli namma jateeyathe, sampradaya, dambhachara, samaja ityadigalalliruva tappannu khandisuva vicharagalu irodakke yaro KRANTHIKAVI antha helirbeku andkonde....

Alpazna said...

@vikas
idroo irbOdEnappa...

Anonymous said...

ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚಂದ್ರಶೇಖರನು ಮುದಿ ಎತ್ತನೇರಿ ಬೇ
ಕೆಂದುದನು ಕೊಡುವ ಸರ್ವಜ್ಞ

ಹೀನಂಗೆ ಗತಿಯಿಲ್ಲ, ದೀನಗನುಚಿತವಲ್ಲ
ಏನು ಇಲ್ಲದವಗೆ ಭಯವಿಲ್ಲ ಐಕ್ಯಂಗೆ
ತಾನೆಂಬುದಿಲ್ಲ ಸರ್ವಜ್ಞ

ಅಷ್ಟವಿಧದರ್ಚನೆಯ ನೆಷ್ಟು ಮಾಡಿದರೇನು?
ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ
ನಷ್ಟ ಕಾಣಯ್ಯ ಸರ್ವಜ್ಞ

ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ
ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ
ಅನ್ಯಾಯ ನೋಡು ಸರ್ವಜ್ಞ

ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು
ಮತ್ತೆ ಪಾಂಡವರಿಗಾಳಾದ ಹರಿಯು ತಾ
ನೆತ್ತಣಾ ದೈವ ಸರ್ವಜ್ಞ

Sandeepa Nadahalli said...

@Anony,

ವಚನಗಳಿಗೆ ಧನ್ಯವಾದಗಳು :-)