ಅಪಾಯ - ಡೇಂಜರ್!!
ಬಿದ್ದಿದ್ದನ್ನು ಎತ್ತಿಹಿಡಿಯುವುದೇ ಧರ್ಮವೆಂದರು ನಮ್ಮ ಹಿರಿಯರು. ಆದರೆ, ಹಾಳಾದ್ದನ್ನು ಸರಿಮಾಡಲೆಂದೇ ಇರುವ ನಮ್ಮ ಜನರು ಮಾಡಿದ ಕೆಲಸನೋಡಿ ಇಲ್ಲಿ. ಈ ಚಿತ್ರ ಸಾವನದುರ್ಗದಿಂದ ಬರುವಾಗ ಮಾಗಡಿ ರಸ್ತೆಯಲ್ಲಿ ತೆಗೆದಿದ್ದು.
ರಸ್ತೆಯ ನಡುವಿನ ಗುಂಡಿಯನ್ನು ಮುಚ್ಚುವ ಬದಲು ಅಲ್ಲೇ ಒಂದು ಕಟ್ಟೆ ಕಟ್ಟಿ 'ಅಪಾಯ' ಎಂದು ಬರೆದಿಟ್ಟಿದ್ದಾರೆ. (ಬರಿಯ ಬ್ರಹ್ಮಚಾರಿಗಳೇ ವಾಸಿಸುತ್ತಿದ್ದ ) ಗೆಳೆಯರ ಮನೆಯ ಬಚ್ಚಲಿನ ಗೋಡೆಗೆ ಅಂಟಿಸಿದ್ದ ಚೀಟಿ ನೆನೆಪಾಗುತ್ತಿದೆ ನನಗೆ ಇದನ್ನು ನೋಡಿ. ಆ ಚೀಟಿಯಲ್ಲಿ ಹೀಗಿತ್ತು:
" ಎಚ್ಚರಿಕೆ: ಕಾಲು ಜಾರಬಹುದು. ಜೋಪಾನ"
ಪೀಜ್ಜಾ ಬೋರ್ಡು
ಇದು ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಪೀಜ್ಜಾ ಹಟ್ಟಿನ ಮುಂದಿನ ಬೋರ್ಡು.


2 comments:
ಸಧ್ಯ ರೋಡಲ್ಲಿ ಹೊಂಡ ಇದೆಯಾಂತ ಯಾರು ಅಲ್ಲಿ ಬತ್ತದ ಸಸಿ ನೆಟ್ಟು ಹೊಲ ಮಾಡಲಿಲ್ಲವಲ್ಲಾ !!
@shiv,
ಚೆ ಚೆ! ಅಷ್ಟೆಲ್ಲಾ ದೊಡ್ಡದಲ್ಲ ಬಿಡಿ ಹೊಂಡ. ತೆಂಗಿನ ಸಸಿ ನೆಡಬಹುದೇನೋ, ಅಷ್ಟೆ:)
Post a Comment