Wednesday, March 26, 2008

ಹಲ್ಲುಬ್ಬು

ಮೊನ್ನೆ ೨೧ರ ರಾತ್ರಿ ಸಿರ್ಸಿ ಜಾತ್ರೆಯಲ್ಲಿ ಹುಡುಗಿಯೊಬ್ಬಳನ್ನು ನೋಡಿ ನಾನು ಏನೋ ಅಂದಿದ್ದೆ. ಮರುದಿನ ಮನೆಗೆ ಬಂದ ಮೇಲೂ ಅದನ್ನೇ ಯೋಚಿಸುತ್ತಿದ್ದೆ. ನಾನು ಚಿಕ್ಕವನಿದ್ದಾಗಿಂದ ಹಿಡಿದು ಇಲ್ಲಿಯವರೆಗೆ ಹುಡುಗಿಯರ ಬಗ್ಗೆ ಅದೆಷ್ಟೋ ವರ್ಣನೆಗಳನ್ನು ಕೇಳಿಬಿಟ್ಟಿದ್ದೇನೆ. ಅವುಗಳಲ್ಲಿ ಕೆಲವೊಂದು ಸ್ವಲ್ಪ ಅತಿಯೆನಿಸುವಂತದ್ದೂ, ಇನ್ನು ಕೆಲವು ಮತ್ತೊಬ್ಬರ ಮನಸ್ಸಿಗೆ ನೋವನ್ನುಂಟುಮಾಡುವಂತದ್ದು ಇರುವುದು ಆಶ್ಚರ್ಯವೇನೂ ಅಲ್ಲ.
ಇವುಗಳಲ್ಲಿ ಕೆಲವೊಂದನ್ನು ಯಾರು ಹೇಳಿದ್ದೆಂದು ಗೊತ್ತಿದ್ದರೂ, ದಾಖಲಿಸುತ್ತಿಲ್ಲ!

ಹೆಚ್ಚಿನವು ಹೆಣ್ಣು ನೋಡಲು ಹೋದವರ ಬಾಯಿಂದ ಉದುರಿದ ಉದ್ಗಾರಗಳು
೧. ಹಲ್ ಮೇಲ್ ಕಾಲಿಟ್ರೆ ಜಾರ್ತು!!
೨. ಫೋಟೋಕ್ಕೆ ಹಳ್ ಹಾಕ್ಸಕೆ ಬರದಿಲ್ಲೆ!!
೩. ಹಿಡಿಕಡ್ಡಿಗೆ ಸೀರೆ ಉಡ್ಸಿದಾಂಗಿದ್ದು!!
೪. ಕೈ ತೊಕ್ಕಂಡ್ ಮುಟ್ಟವು, ಹಾಂಗಿದ್ದು!
೫. ಮುಟ್ಟಿರೆ ಕೈ ತೊಕ್ಕಳವು!!
೬. ತಲೆ ದಿಂಬಿಗೂ ಬರದಿಲ್ಲೆ!!
೭. ನ ಭೂತೋ ನ ಭವಿಷ್ಯತಿ..

ತೀರಾ ಮೊನ್ಮೊನ್ನೆ ಕೇಳಿದ್ದು...
೮. ಕೂಸಿನ್ ಫೋಟೊ ತೆಗದ್ರೆ X-Ray ಬರ್ತು!

19 comments:

Harish - ಹರೀಶ said...

೪. ಕೈ ತೊಕ್ಕಂಡ್ ಮುಟ್ಟವು, ಹಾಂಗಿದ್ದು!
೫. ಮುಟ್ಟಿರೆ ಕೈ ತೊಕ್ಕಳವು!!

:D :D :D

ವಿಕಾಸ್ ಹೆಗಡೆ said...

2ನೇದು ಅರ್ಥಾಜಿಲ್ಯೋ ನಂಗೆ.

Alpazna said...

@harish,
:D
ಇರ್ತು ಹಂಗೆಲ್ಲ!!

@ವಿಕಾಸ್,
clue: ಟೈಟ್ಲು..

ಶ್ರೀನಿಧಿ.ಡಿ.ಎಸ್ said...

x-ray solid maga, idna keLirle..

Hegde said...

ನನ್ನ ನಾರ್ತ್ ಇಂಡಿಯನ್ ಫ್ರೆಂಡ್ ಒಬ್ಬ ಹುಡ್ಗಿ ನೋಡಿಕೆಂಡು ಬಂದು 'ರಾಮ್ಸೆ ಕಿ ಬೆಹೇನ್ ಲಗ್ತಿ ಹೈ' ಹೇಳಿದಿದ. ರಾಮ್ಸೆ ಗೊತ್ತಿರವಲಿ.... ಅದೇ ಹಿಂದಿಯಲ್ಲಿ horror ಸಿನಿಮಾ ಮಾಡ ಫ್ಯಾಮಿಲಿ. ಟಿವಿಯಲ್ಲಿ 'ರಾಮ್ಸೆ horror ಶೋ' ಸಹ ಅವೇ ಮಾಡಿದ್ದ ಕಾಣ್ತು. ಇನ್ನ ಧಾರವಾಡ ಬದಿ ಜನ ಅಂತು ಭಾಳ ಕೊಳಕ ಆಗಿ ಕಾಮೆಂಟ್ ಮಾಡ್ತಾ. 'ಹುಡ್ಗಿ ನೋಡಿದ ಮ್ಯಾಲೆ ನಾಕ್ ದಿನ ಬರನ್ಗಿಲ್ಲರಿ'. ಏನ್ ಬರಂಗಿಲ್ಲ? ಅದೇ ಮುಂಜಾನೆದ್ದು ಹೋಗುದ್ರಿ. ಹುಡ್ಗಿ ನೋಡಲ್ಲೆ ಹೋದವು ಹೊಟ್ಟ ಬಿರಿ ತಿನ್ದಿದ್ದಕ್ಕಾದ್ರು ಮುಚಿಗೆಂಡು ಕುಥ್ಗಳವು. ಹುಡ್ಗಿ ಬದಿಯವು ಹುಡ್ಗ್ರ ಮೇಲೂ ಬೇಕಾದಷ್ಟು ಕಾಮೆಂಟ್ ಮಾಡ್ತಾ.

Alpazna said...

@ಶ್ರೀನಿಧಿ,
:-) ನಂಗು ಹೊಸ್ತು ಅದು!

@hegde,
ಹ್ಮ್ಮ್..
ಹುಡುಗ್ರ ಬಗ್ಗೆ ಜಾಸ್ತಿ ಕಾಮೆಂಟ್ ಕೇಳಲ್ಲೆ ನಾನಿನ್ನು. ಹೆಂಗಿರ್ತು ಅಂತ ಕುತೂಹಲ!
ಕಾಮೆಂಟ್ ಮಾಡಿರೆ ಬೇಜಾರಿಲ್ಲೆ, ಆದ್ರೆ ಅದೆಲ್ಲ ಒಂದು ಸಭ್ಯತೆಯ ಮಿತಿಯೊಳಗೆ ಇದ್ರೆ ಚಂದ.

Hegde said...

>>
ಹುಡುಗ್ರ ಬಗ್ಗೆ ಜಾಸ್ತಿ ಕಾಮೆಂಟ್ ಕೇಳಲ್ಲೆ ನಾನಿನ್ನು. ಹೆಂಗಿರ್ತು ಅಂತ ಕುತೂಹಲ!
<<

ಹುಡುಗರ ಬಗ್ಗೆ ಕಾಮೆಂಟ್ ನೆನಪ್ಪದು ಅಂದ್ರೆ......
'ಮಾಣಿಗೆ ಹಲ್ಲು ಗಟ್ಟಿ ಇಲ್ಲೇ ಕಾಣ್ತು. ಅವಲಕ್ಕಿ ಜಗಿಯಲ್ಲೇ ಶ್ರಮ ಪಡ್ತ ಇದ್ದ.'
'ಮಾಣಿಗೆ ದಮ್ಮು ಕಾಣ್ತು. ಎರಡ ಹೆಜ್ಜೆ ಹಾಕದ್ರಲ್ಲಿ ಶ್ವಾಸ ಬಿಡ್ತ್ಹನಪ.'
'ಸಿಕ್ಕಾಪಟ್ಟೆ ದಪ್ಪ. ಪ್ಯಾಂಟಿನ ಹೊಲಿಗೆಲ್ಲ ಹರ್ದ ಹೋಪ ರೀತಿ.'
'ಮಾಣಿ ಏಲ್ಲಯ್ಯೋ ತೊರ್ಸಿಕೆತ್ತ ಕುಂತಿದಿದ್ನಪ.ಯೆನ್ತನ್ತ ರೋಗ್ವ ಏನ.'
'ಕಾಲ್ ಹಾಂಗೆ ಹೀಂಗೆ ಹಾಕ್ತ್ಹ್ನಪ. ದೊಗ್ಗರ್ಗಾಲು ಕಾಣ್ತು.'
'ಮಂಗನ್ಮನೆ ಭಾವ ಮನ್ನಿತ್ಲಾಗೆ ಮಾತ್ರ ಮಾಣಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡ್ಸದ ನೋಡಿದ್ನಳ. ಯೆನ್ತನ್ತ ರೋಗ್ವ ಏನ.'
'ಇತ್ಲಾಗ್ ಹೋಯ್ ಅಂದ್ರೆ, ಅತ್ಲಾಗ್ ನೋಡ್ಜ.ಮೆಳ್ಗಣ್ಣು ಕಾಣ್ತು.'
'ಬಾಬ ಜರ್ದ ಏಜೆಂಟ್.' 'ಗುಟ್ಕ ಗಿರಕಿ.'
'ಪೊಲೀಸ್ ಸ್ಟೇಷನ್ ಅಂದ್ರೆ ಅವಂಗೆ ಮಾವನ ಮನೆ ಇದ್ದಂಗೆ.'

ಸತ್ಯ ಘಟನೆ ಮೇಲೆ ಶುರುವಾದ ಸುಳ್ಳು ಸುದ್ದಿ. ಒಂದ್ಸಲಿ ನಮ್ಮ ನೆನ್ಟ್ರಲ್ಲಿ ಒಬ್ಬವನ್ನ ಸಿರ್ಸಿ ಪೊಲೀಸರು ಹಿಡ್ಕಂಡು ಹೋಗಿ ನಾಕು ಕೊತ್ತಿಡಿದ. ಕಿಡ್ನಾಪ್ ಕೇಸನಲ್ಲಿ. ಅವ ಹುಡ್ಗಿ ನೋಡಲ್ಲಿ ಶುರು ಮಾಡ್ದಾಗ 'ಪೊಲೀಸರು ಮಾಣಿ ನರ ಕತ್ತ್ರಿಸಿಗಿದ್ವಡ. ಇನ್ನೆನ್ತ ಉಪಯೋಗ.'

ಇನ್ನು ಧಾರವಾಡ ಬದಿಗೆ 'ಹಣಿ ಮ್ಯಾಲೆ ಅಕ್ಷಂತಿ ಕಾಣದಷ್ಟು ಕರಪ್ ಇದ್ದ್ನರಿ ಹುಡುಗ.' ಅಕ್ಷಂತಿ ಅಂದ್ರೆ ಧಾರವಾಡ ಬದಿ ಬ್ರಾಹ್ಮಣರು ಹಣಿಗೆ ಹಚ್ಹ್ಚಿಗೆಂಬ ತಿಲಕದ್ ನಮ್ನಿ. ಅದು ಕರಿಕ್ ಇರ್ತು. ಅದೂ ಸಹಿತ ಕಂಡಿದ್ದಿಲೆ ಅಂದ್ರೆ ಅವ ಅದೆಷ್ಟು ಕರಿ ಹ್ವಾಂಥ ಇದ್ದಿಕ್ಕು.

ಸುಶ್ರುತ ದೊಡ್ಡೇರಿ said...

lastindu superrrama.. :D kELe irle..

ಮೃಗನಯನೀ said...

;-o..... nice stuff ನಾನೂ ನನ್ friendಊ ಬಿದ್ ಬಿದ್ ನಗಿಂಗ್....;-) ;-)

Alpazna said...

@hegde,
ತುಂಬಾ ಥ್ಯಾಂಕ್ಸು!!
ಸುಮಾರ್ ಉದ್ದ ಪಟ್ಟಿನೇ ಇಟ್ಟಿದ್ದಿ.. :-)

@ಸುಶ್ರುತ,
ಧನ್ಯವಾದ...

@ಮೃಗನಯನೀ,
thanksಉ..

Niveditha said...

the green in ur blog is very pleasing.. just the way most of ur posts are... its nice to c.. n me happy u started thinking of diff colors..

ರಂಜನಾ ಹೆಗ್ಡೆ said...

ಚನ್ನಾಗಿ ಬರದ್ದೆ ಸಂದೀಪ,
ಸದ್ಯ ನಂಗೆ ಅಲ್ಲುಬ್ಬು ಇಲ್ಯಪ್ಪ.

ಹೆಗ್ಡೆ ಯವರ ಕಾಮೆಂಟ್ ಚನ್ನಾಗಿ ಇದ್ದು. ನಂಗೂ ಗೊತ್ತಿರಲ್ಲೆ ಮಾಣಿಗಳ ಮೇಲೆ ಇಷ್ಟೊಂದು ಕಾಮೆಂಟು ಇದ್ದು ಅಂತ.

ವಿಕಾಸ್ ಹೆಗಡೆ/Vikas Hegde said...

"ಅಲ್ಲುಬ್ಬು "??!!
ellubbu? ;)

ರಂಜನಾ ಹೆಗ್ಡೆ said...

at vikas
ಬೆಂಗಳೂರಿನ ಪ್ರಭಾವನಪ್ಪ. ಹಕ್ಕಿನಾ ಅಕ್ಕಿ ಅಂಥ ಹೇಳ್ತ ಇಲ್ಲಿ ಗೊತ್ತಿದ್ದಲ್ಲ್ಲಾ, ಸೋ ನಾನು ಅದನ್ನೆ ಕಲಿತಾ ಇದ್ದಿ ಅಷ್ಟೆ. :)

Harish - ಹರೀಶ said...

ಜ್ಯೂನಿಯರ್ ಬೀಚಿ ಪ್ರಾಣೇಶ್ ಹೇಳ "ಹಾಕಾಶ್ದಾಗ್ ಆರಾಡ್ತಾವ್ ಅಕ್ಕಿ" ಅನ್ನೋ ಮಾತು ನೆನಪಾಗ್ತು...

Vishwanatha Krishnamurthy Melinmane said...

Hoy Sandeepa,

Adre mostly chalthili ira commentu andre...

1. Swalpa kaddina... :(
2. Hudugi thegdakahangenu ille...Ok

Houda alda ?


--
Vish

Joey said...

ಯಪ್ಪಾ, ನಕ್ಕೂ ನಕ್ಕೂ ಸುಸ್ತಾಯಿತು :)

Alpazna said...

@niveditha,
Thanks,
well.. colors.. :)

@ರಂಜನಾ,
:-)
ಥ್ಯಾಂಕ್ಸ್!

@ವಿಕಾಸ್,
ಥೊ!!! ಸುಮ್ನಿರ...

@Vishwanatha,
ಹೌದೌದು...
ತೆಗ್ದ್ ಹಾಕಾಂಗಿಲ್ಲೆ... and sometimes.. other way.!!;-)
@joey,
:-) enjoy!

ಆದಿತ್ಯ ಬಿ.ವಿ ಬೇದೂರು said...

ಅಲ್ದಲೇ ಸಿರ್ಸಿಲಿ ಎಂತ ಹೇಳಿದ್ಯಪ? ಹುಡ್ಗಿ ಹಲ್ಲು ಮೇಲೆ ಕಾಲಿಡಕಿದ್ರೆ ಚಪ್ಲಿ ಹಕ್ಯಳಕ್ಕೆ ಅಗ್ಲ್ಯನ ಮಾಣಿಗೆ?! ಚನಾಗಿದ್ದು............. "ಕಾಯಿ ತುರಿಯ ಮಣೆ ಹಂಗಿದ್ದು ಹುಡ್ಗಿ ಹಲ್ಲು" ಅನ್ನದು ನಾನು ಕೇಳಿದ್ದಿ! ನಗು ತಡ್ಯಕ್ ಅಗ್ತಿಲ್ಯಲೇ..... ಸಕ್ಕತ್ತಾಗಿ ಬರದ್ಯೋ..........