ಸುಮಾರು ಮೂರು ವರ್ಷದ ಅವಧಿಯಲ್ಲಿ ಈ ಬ್ಲಾಗಿನಲ್ಲಿ ನಾನು ೧೨೫ ಪೋಸ್ಟುಗಳನ್ನು ಬರೆದಿದ್ದೇನೆ. ಕೆಲಸಕ್ಕೆ ಸೇರಿದಂದಿನಿಂದ ಅರ್ಧಕ್ಕಿಂತ ಹೆಚ್ಚಿನ ಸಮಯ ಆಫೀಸಿನಲ್ಲೇ ಕಳೆದಿದ್ದೇನೆ. ಆದರೂ, ನನ್ನ ಬ್ಲಾಗಿನಲ್ಲಿ ಕೆಲಸಕ್ಕೆ ಅಥವಾ ಆಫೀಸಿಗೆ ಸಂಬಂಧಿಸಿದ ಮೂರ್ನಾಲ್ಕು ಪೋಸ್ಟುಗಳು ಹುಡುಕಿದರೂ ಸಿಗಲಾರವೆಂದು ಅರಿತಾಗ ನನಗೇ ಆಶ್ಚರ್ಯವಾಯಿತು.
ಹಾಗೆಂದು ಇಂದಿನಿಂದ ಆಫೀಸಿನ ಕತೆಗಳು ಇಲ್ಲಿಗೆ ಬರುತ್ತವೆಂದು ನಿರೀಕ್ಪಿಸಬೇಡಿ. ಅಂತದ್ಯಾವ ಯೋಚನೆಯೂ ಸದ್ಯಕ್ಕಿಲ್ಲ.
ನಾನು ಎಲ್ಲಿ ಕೆಲಸ ಮಾಡುತ್ತೇನೆ, ಏನು ಕೆಲಸ ಮಾಡುತ್ತೇನೆ, ಏಕೆ ಕೆಲಸ ಮಾಡುತ್ತೇನೆ ಎಂದು ಇಲ್ಲಿಯವರೆಗೆ ಬರೆದುಕೊಂಡಿರಲಿಲ್ಲ. ನಿನ್ನೆ ಆದ ಒಂದು ಸಣ್ಣ ಬದಲಾವಣೆ. ಬರೆಯಬೇಕೆನಿಸಿತು. ನಾನು ಈಗ C V Raman ನಗರದ ಬಾಗ್ಮನೆ ಟೆಕ್ ಪಾರ್ಕ್ ನಲ್ಲಿರುವ್ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.
ಹೊಸ ಸ್ಥಳವಾದ್ದರಿಂದ ಆಗಾಗ ಬೋರಾಗುತ್ತದೆ. ಗೆಳೆಯರು/ಪರಿಚಿತರು ಯಾರಾದರು ಹತ್ತಿರ ಇದ್ದಾರೆಯೋ ಹುಡುಕಬೇಕು, ಹೇಗೆಂದು ತೋಚುತ್ತಿಲ್ಲ!
ನೀವ್ಯಾರಾದ್ರು ಇಲ್ಲೇ ಕೆಲ್ಸ ಮಾಡ್ತೀರ?
ಅಂದಹಾಗೆ, ಆಫೀಸಿಗೆ ಫೋನು ಮಾಡುತ್ತಿದ್ದವರು ದಯವಿಟ್ಟು ಹಳೆಯ ನಂಬರನ್ನು ಅಳಿಸಿಬಿಡಿ.
Tuesday, April 22, 2008
Subscribe to:
Post Comments (Atom)


11 comments:
ಅಂತೂ ನಿಮ್ ಆಫೀಸ್ ಪ್ಲೇಸ್ ಚೇಂಜ್ ಆತು ಅನ್ನು.. ನನ್ ಆಫೀಸ್ ಅಲ್ಲಿಲ್ಲೇ.. ಆದ್ರೆ ನಮ್ಮನೆ ಅಲ್ಲೇ ೮೦ ಫೀಟ್ ರೋಡಲ್ಲಿ ಇದ್ದು... ಫ್ರೀ ಇದ್ದಾಗೆಲ್ಲ ಬಾ...
@harish,
ಹೂಂ.. ಅಂತು ಆತು!!
ಬಪ್ಪನ.. :)
ಥತ್ ನಿನ್ನ. "ಬಾಗ್ಮನೆ " ಅಂದ್ರೆ ಶಿರ್ಸಿ, ಸಿದ್ದಾಪುರದ ಹತ್ರ ಯಾವ್ದೋ ಊರು ಅನ್ಕಂಡಿ.. ನೀನ್ ನೋಡ್ರೆ ಇಲ್ಲೇ ಇದ್ದೆ :P
ಓಹೋ ಆಫೀಸ್ ಶಿಫ್ಟ್ ಆತಾ? ಈಗ ಎಲ್ಲಿ ಮನೆ? ಪ್ಯಾಟೆ ಇಂದ ದೂರ ಹೋದೆ ಹಂಗಾರೆ.
ನನ್ನ ಆಫೀಸ್ ಅಂತು ಇಲ್ಯೋ ಅಲ್ಲಿ.
ಥೋ, ನಾನು ಅದ್ನ "ಬ್ಲಾಗ್ಮನೆ" ಅಂತೆಲ್ಲ ಓದ್ಕ್ಯಂಡು..
:)ಹಮ್, ನೀನು ಅಂತೂ ಕೆಲ್ಸ ಚೇಂಜ್ ಮಾಡ್ದೆ ಹೇಳಾತು:)
@vikas,
ಎಲ್ಲಿಗ್ ಕಳ್ಸ ಯೋಚ್ನೆನಪ..?!
@ರಂಜನಾ,
ಹೌದು.. ಮನೆ ಅಲ್ಲೆ ಇದ್ದು.
ಪ್ಯಾಟೆಯಿಂದ ದೂರ ಆದಿ ಅನ್ಸ್ತಾಇಲ್ಲೆ.
ಗಾಯತ್ರಿದೇವಿ ಪಾರ್ಕಲ್ಲಿ ವಾಕು,
CTR ಮಸಾಲೆ, ಯಾವ್ದೂ ಬಿಡ್ಲೆ ಇನ್ನು!
@ಶ್ರೀನಿಧಿ,
ಬ್ಲಾಗ್ಮನೆ!? ಚೆನ್ನಾಗಿದ್ದು!!
ಅದೇನ್ ಹೊಳಿತೊ ನಿನ್ ತಲಿಗೆ:-)
ಹೊಸ ಕೆಲಸ ಹೊಸ ಹರುಷ ತರಲಿ ನಿನ್ನ ಬಾಳಲ್ಲಿ,
ಇನ್ನಷ್ಟು ಮತ್ತಷ್ಟು ಪುಟಗಳು ಬ್ಲಾಗ್ಮನೆಯಿಂದ ಹುಟ್ಟಲಿ,
ನಮ್ಮಂತ ಹಳೆ ಸ್ನೇಹಿತರ ಸ್ನೇಹ ಗಟ್ಟಿಯಾಗಿ ಉಳಿಯಲಿ.
@ಮನಸ್ವಿ,
:-)
ಶುಭ ಹಾರೈಕೆಗೆ ಧನ್ಯವಾದಗಳು.
You changed the Company? or the Company changed the place?
@santosh,
Company changed its place!!
Post a Comment