ನೆಟ್ಟಿಗರಲ್ಲೊಂದು ಪುಟ್ಟ ಮನವಿ,
ತುಂಬಾ ಸಮಯದಿಂದ ಸಂಗ್ಯಾ-ಬಾಳ್ಯಾ ನಾಟಕದ ಧ್ವನಿಮುದ್ರಿಕೆಯನ್ನು ಹುಡುಕುತ್ತಿದ್ದೇನೆ. ನಿಮ್ಮ ಬಳಿಯೇನಾದರೂ, ಈ ನಾಟಕದ ಪುಸ್ತಕ/ಕ್ಯಾಸೆಟ್/CD ಇದ್ದು ಅದನ್ನು ಯರವಲು ಕೊಡುವ ಮನಸ್ಸಿದ್ದರೆ, ಅಥವಾ ಇದು ಎಲ್ಲಿ ಸಿಗುತ್ತದೆ(ನಾನು ಬೆಂಗಳೂರಿನಲ್ಲಿದ್ದೇನೆ) ಎಂಬ ಮಾಹಿತಿ/ಸುಳಿವಿದ್ದರೆ ದಯಮಾಡಿ ಕಾಮೆಂಟಿನಲ್ಲಿ ತಿಳಿಸಿ.
ಧನ್ಯವಾದಗಳು,
ಅಲ್ಪಜ್ಞ
Thursday, May 29, 2008
Subscribe to:
Post Comments (Atom)


15 comments:
ಪುಸ್ತಕದಲ್ಲಿ ಯಾವಾಗಿಂದ ಧ್ವನಿಮುದ್ರಿಕೆ ಬರಕ್ಕೆ ಶುರು ಆಯ್ದೋ?
@harish,
ಸೈಯ್ಯಪ.. ಬರೀ ಇದೇ ಆಗೋತು!!
ಸ್ವಲ್ಪ ಅಡ್ಜಸ್ಟ್ ಮಾಡ್ಕ್ಯಳವಪ...
ಈಗ..
ಪ್ಲಾಸ್ಟಿಕ್ ಗ್ಲಾಸಲ್ಲಿ ನೀರ್ ಕುಡಿತು ನಾವು,
ಆಂ.. ಕೆಲ್ವೊಂದ್ಸಲಿ, ಕೈಯ್ಯಲ್ಲೇ ಬ್ರಶ್ ಮಾಡ್ಯಾಗ್ತು..
ಅರೆ! ಇದೊಳ್ಳೆ ಕಥೆ ಆತಲ ನಿಂದು!!
Wordweb ಪ್ರಕಾರ glass ಗೆ A container for holding liquids while drinking ಅಂತನೂ ಅರ್ಥ ಇದ್ದು. ಹಂಗೆ, brush (verb) ಗೆ Sweep across or over ಅನ್ನೋ ಅರ್ಥವೂ ಇದ್ದು.
@harish,
Wordwebನಲ್ಲಿ ಧ್ವನಿಮುದ್ರಿಕೆ ಅಂದ್ರೆ ಎಂತ ಇದ್ದು?!
ಕನ್ನಡಕ್ಕೆ ಇನ್ನೂ wordweb ಬಂದ ಹಂಗೆ ಇಲ್ಲೆ... ಸದ್ಯಕ್ಕೆ ಇಷ್ಟಕ್ಕೆ ತೃಪ್ತಿ ಪಡು.
@harish,
"ಪುಸ್ತಕದಲ್ಲಿ ಯಾವಾಗಿಂದ ಧ್ವನಿಮುದ್ರಿಕೆ ಬರಕ್ಕೆ ಶುರು ಆಯ್ದೋ?"
- ಅಂದಹಾಗೆ ಬರೀ ಇದನ್ನ ನೋಡಿ ನಿಲ್ಸದ್ ಎಂತಕೆ, ಇದನ್ನೂ ನೋಡ್ಬುಡನ ಅಲ್ದಾ!?
ನೋಡ್ದಿ ನೋಡ್ದಿ! ಇನ್ನೂ ಎನೆನೇನೋ ನೋಡ್ದಿ ;-) ಆದ್ರೆ ಪುಸ್ತಕದ ಮೇಲೆ ಧ್ವನಮುದ್ರಿಸು ಅಂತ ಎಲ್ಲೂ ಸಿಗಲ್ಯಪ್ಪ !!
@harish,
ಅದೂ ಇದ್ದು!!
ಇಲ್ಲಿನೋಡು..
ಹೆಹ್ಹೆ :-)
10 comment iddu, sandeepange bekaddu sigtena hangare anta andkandre!! kharma kaanda:)
@ಶ್ರೀನಿಧಿ,
ಸರಿ ಹೇಳಿದೆ!! :-)
ನಿಮಗೆ ಕ್ಯಾಸೆಟ್ ಸಿಕ್ತ ಇಲ್ಯ ಗೊತ್ತಾಯ್ದಿಲ್ಲೆ .
ಸಾಗರದ ಹತ್ತಿರ ಕೆಳದಿ ಪಕ್ಕ ಹಾರೆಗೊಪ್ಪ ಅಂತ ಊರಿದ್ದು. ಅಲ್ಲಿ ಸೀತಾರಾಮಣ್ಣ ಅಂತ ಒಬ್ರು ಇದ್ದ.ಅವ್ರು ಮುಂಚೆ ’ ಸಂಗ್ಯಾ -ಬಾಳ್ಯಾ ’ ನಾಟಕದಲ್ಲಿ ಸಂಗ್ಯಾನ ಪಾತ್ರ ಭಾಳ ಚೆನಾಗಿ ಮಾಡ್ತಿದ್ದ .ನಾಟಕದ ಕ್ಯಾಸೆಟ್ ಸಹ ಹೊರತಂದ ಹಾಂಗೆ ನೆನಪು.ಅವರ ಹತ್ರ ಸಿಕ್ಕಲಕ್ಕು ಕ್ಯಾಸೆಟ್ .
ಅವರ ಫೋನ್ ನಂ. 260005 .
ಎಸ್ ಟಿ ಡಿ ಕೋಡ್ ಬಹುಶಃ: ಸಾಗರದ್ದೇ. 08183 ಆಗಿರವು. ಪ್ರಯತ್ನ ಮಾಡಿ ನೋಡಿ.
ದೋಸ್ತ್ರ, ಸಂಗ್ಯಾ ಬಾಳ್ಯಾ ನಾಟ್ಕಾ ಬೇಕಂದ್ರ ಯಾರರ ಬೆಳಗಾವಿ ಇಲ್ಲಾ ಹುಬ್ಬಳ್ಳಿ ಧಾರವಾಡ ಅಥವಾ ಬಿಜಾಪುರ್ ಮಂದಿನ್ನ ಹಿಡೀರಿ ... ಸಿಗಲಿಲ್ಲಾಂದ್ರ ನೋಡ್ ... ಬೆಂಗಳೂರಾಗ ಸಂಗ್ಯಾ ಬಾಳ್ಯಾ ಸಿನಿಮಾದ CD ಸಿಗಬಹುದು ಅಷ್ಟ ...
@chitra,
ಇಲ್ಲೆ, ಇನ್ನು ಸಿಗಲ್ಲೆ. ಬೇರೆ ನೂರೆಂಟು ಒತ್ತಡಗಳಿಂದ ಈ ಕಡೆ ನೋಡಕೇ ಆಗಿರ್ಲೆ. ತುಂಬಾ ಉಪ್ಕಾರಾತು. ಎಂತ ಆತು ಅಂತ ಕಡೀಗ್ ಹೇಳ್ತಿ.
@anony,
ಯಾರನ್ನಾರ ಹಿಡೀರಂತ್ ಯಾಕ್ ಹೇಳ್ತೀರ್ರೀ? ನಿಮ್ ಭಾಷೀ ನೋಡಿರ ನೀವ ಆ ಕಡೀವ್ರಿದ್ದಾಂಗ್ ಕಾಣ್ತದ.
ನಿಮ್ಮಿಂದ್ಲೇ ಏನಾರ ಮಾಡ್ಲೀಕಾಗ್ತದನು??
Post a Comment