ಆಗಸ್ಟ್ ೧೨ನೇ ತಾರೀಖೇ ಗಿರಿ ಫೋನ್ ಮಾಡಿ ಹೇಳಿಟ್ಟಿದ್ದ.. "ಬಟ್ಟಾ.. ಮತ್ತೆ ೧೫ಕ್ಕೆ ಬೇರೆಯಲ್ಲು ಪ್ರೋಗ್ರಾಮ್ ಹಾಕ್ಯಳಡ, ಹುಡ್ರೆಲ್ಲ ಎಲ್ಲಾರು ಹೋಪನ." ಅಂತ. ಅಲ್ ಬ್ಯಾಡ, ಇಲ್ ಬ್ಯಾಡ, ಅದು ದೂರ ಮತ್ತೊಂದು ಎಲ್ಲಾ ನೋಡಿದ್ದ, ಹಂಗೆ ಹಿಂಗೆ ಅಂದು, ಅಂತೂ ೧೪ರ ಸಂಜೆ ತೀರ್ಮಾನಾತು "ಕಣ್ವ ಡ್ಯಾಂ"ಗೆ ಹೋಪ್ದು ಹೇಳಿ. ನಂಗೆ (ಮತ್ತು ನನ್ ಬೈಕಿಗೆ) ಹುಶಾರಿಲ್ಲೆ, ನಾ ಗಾಡಿ ತಗಳದೂ ಇಲ್ಲೆ, ಡ್ರೈವ್ ಮಾಡದು ಇಲ್ಲೆ ಅಂತ ಮೊದ್ಲೆ ಹೇಳಿದ್ದಕ್ಕೆ ಭಾಗ್ವತ ಬಂದು ಪಿಕಪ್ ಮಾಡದು ಅಂತ್ಲೂ ಪ್ಲಾನಾಗೋಗಿತ್ತು.
ಅಂತೂ ೧೫ರ ಬೆಳಿಗ್ಗೆ, ನನ್ನಿಂದ ತಡ ಆಪ್ಲಾಗ ಅಂತ ದಡಬಡ ಎದ್ದು, ಸ್ನಾನ ಮಾಡಿ ೭ಕ್ಕೇ ಹೊಂಟ್ ಕುತ್ಗಂಡಿ ಅಂತಾತು. ಪಿಕಪ್ ಮಾಡಕೆ ಬರಕ್ಕಾಗಿತ್ತಲಾ ಕುಟ್ನ್ ಬಾವ, ಎಷ್ಟೊತ್ತಾದ್ರು ಪತ್ತೆನೇ ಇಲ್ಲೆ. ಅವನ್ನ ಫೋನ್ ಮಾಡಿ ಹೊಂಡ್ಸಿ ಎಲ್ಲಾ ಮಾಡರತಿಗೆ, ಕೇಡಿನೆ ಬಂದ ನನ್ ಕರ್ಕಂಡೋಪ್ಲುಕೆ. ಅಂವ ಇನ್ನು ಯಮ್ಮನೆ ನೋಡಲ್ಲೆ, ಹಂಗಾಗಿ ನಾನೇ ಶಾಂತಿ ಸಾಗ್ರದತ್ರ ಹೋಗಿ ನಿತ್ಗಂಡಿದ್ದಿ.
ಶಾಂತಿ ಸಾಗರದಲ್ಲಿ ಒಂದು ಒಳ್ಳೇ ಕಾಪಿ ಕುಡ್ಕಂಡು, ಕೇಡಿ ಬೈಕಲ್ಲಿ ಗಿರಿ ರೂಮ್ ಸೇರಿದ್ಯ. ಮೊದ್ಲೇ ಮಾತಾಡ್ಕ್ಯಂಡಂಗೆ ಎಲ್ಲರು ಕಲ್ಗಾರ್ ಗಿರಿ ಮನೆ ಹತ್ರ ಬಂದಾತು. ಅಲ್ಲಿಂದ ಹೊರ್ಡಕ್ಕಾರೆ ಸುಮಾರು ಏಳು ವರೆ ಆಗಿತ್ತೇನ..
ಒಂದ್ರ್ಹಿಂದ್ ಒಂದು, ಅದ್ರ್ಹಿಂದ್ ಮತ್ತೊಂದು, ಮಗದೊಂದು.. ಬೈಕೇ ಬೈಕು, ಬೈಕಿಂದೇ ಸಾಲು.. ಮನೇ ಬಾಗ್ಲಿಂದನೇ ರುಮ್ಮು ರುಮ್ಮು ಅಂತ ಹೊಂಟ್ರೆ, ನೋಡಂಗಿತ್ತು..
ಗುಂಗೆ.. ಗುಂಗೆ ಹುಳ ಹೊಂಟಂಗೆ..
ಟೋಪಿ:
ಇನ್ನೇನ್ ಮೈಸೂರ್ರೋಡ್ ಶೆಲ್ ಕಾಣ್ತು ಕಾಣ್ತು ಅನ್ನಷ್ಟೊತ್ತಿಗೇ, ಕೇಡಿ ಸ್ಪೀಡಿಗೆ ನಾ ಹಾಕ್ಯಂಡಿದ್ ಟೋಪಿ ಕೆಳಗ್ ಬಿದ್ದೋತು.. ಸೈಯ್ಯಪ.. ಕಲ್ಗಾರ್’ಗಿರಿ ಅದನ್ನೇ ಹಿಡ್ಕಂಬುಟ!! ವ್ಯಾಸನ್ ಬೈಕಲ್ಲಿ ಕುತ್ಗಂಡ್ ಬರ್ತಾಇದ್ದ ಸುಶ್ರುತನ್ನ ನಿಲ್ಸಿ,
"ನೋಡು ಸುಶ್ರುತ, ಸಂದೀಪನ್ ಟೋಪಿ ಬಿದ್ದೋತು, ಬ್ಲಾಗ್ ಬರ್ಯಕ್ಕಾರೆ ಇದನ್ನು ಬರ್ಯವು ಮತ್ತೆ! ಮರಿಯಡ ನೋಡು.." ಅಂತ ಹೇಳತಂಕನು ಸಮಾಧಾನಾಗಲ್ಲೆ ಅವಂಗೆ.
ಆದ್ರೆ ಸುಶ್ರುತ ಈ ಟ್ರಿಪ್ಪಿನ್ ಬ್ಲಾಗ್ ಬರೀಲೆ ಇಲ್ಲೆ. ಹಂಗಾಗಿ, ನಾನೇ ಬರ್ಯಕಾತು ಟೋಪಿ ಸುದ್ದಿನ!
ಯಾರ್ಯಾರ್?
ಅಂದಂಗೆ, ಅವತ್ತು ಯಾರ್ಯಾರ್ ಹೊಂಟಿದ್ವಪ ಅಂದ್ರೆ...
ದಯಾ & ಅವ್ರಣ್ಣ,
ಗಿರಿ & ವೇಣು,
ಕೃಷ್ಣ ಭಾಗ್ವತ & ಅಜಿತ್,
ಶ್ರೀನಿಧಿ & ಕಡ್ಡ,
ರವೀಂದ್ರ & ಪ್ರವೀಣ್,
ಸುಧೀರ್ & ಸಂದೀಪ,
ವ್ಯಾಸ & ಸುಶ್ರುತ,
ಸುಬ್ಬು & ಹರ್ಷ.
ಹಿಂಗೆ, ಬೈಕಿಗೆ ಇಬ್ಬಿಬ್ರಂಗೆ ಒಟ್ಟು 8 ಬೈಕಿಂದ 16 ಜನ ಇದ್ದಿದ್ಯ..
ಭಾವುಟ:
ವಾರದ ಮಧ್ಯ ರಜೆ ಬಂದಿದ್ರಿಂದ ದೂರಕ್ಕೆಲ್ಲು ಹೋಗಕ್ಕಾಗ್ತಿರ್ಲೆ.
ಹಂಗಾಗಿ ಈ ಜಾಗ ಹುಡ್ಕಿದ್ದಾಗಿತ್ತು.
ರಾಜರಾಜೇಶ್ವರಿ ಕಮಾನಿನ್ ಹತ್ರ ಬೈಕ್ ನಿಲ್ಸಿ,
ಎಲ್ಲರ ಬೈಕಿಗು ಭಾರತದ ಭಾವುಟ ಕಟ್ಗ್ಯಂಡಿದ್ದು,
ನಮ್ ಸವಾರಿಗೆ ಒಂತರಾ
ರಾಷ್ಟ್ರಭಕ್ತಿಯ ಬಣ್ಣ ಬಂದಿದ್ದಂತು ಸುಳ್ಳಲ್ಲ..
ಆದ್ರೆ ಬರೀ ಸೊಣ್ಬಿಹುರಿ ಕಟ್ಟು ನಮ್ ಹುಡ್ರ ಹೊಡ್ತಕ್ಕೆ ಎಲ್ಲಿ ತಡ್ಯವು. ಮೈಸೂರ್ ರೋಡ್ ಬೇರೆ! ಕೆಳವ? ಹೋಪ ಬೈಕಿಂದನೆ ಭಾವುಟ ಬಿದ್ದೋತು..
ಲಘು ಉಪಹಾರ:
ಬೆಳಿಗ್ಗೆ ಬರೀ ಒಂದು ಕಾಪಿ ಕುಡ್ದಿದ್ದು ಹೇಳದು, ೯ರ ಹೊತ್ತಿಗೆ ಹೊಟ್ಟೆ ಚುರುಗುಟ್ತಾ ಇತ್ತು. ಯಾರಿಗು ತಿಂಡ್ಯಾಗಿರ್ಲೆ ಇನ್ನು. ಹಂಗಾಗಿ ಜನಪದ ಲೋಕದ ಪಕ್ಕದ್ ಕಾಮತ್ ಇದ್ದಲ ಅಲ್ಲಿ ತಿಂಡಿಗೆ ಅಂತ ನಿಲ್ಸಿದ್ಯ.
ಊಟಕ್ ಬಫೆ ಕೇಳಿದ್ದಿದ್ದಿ, ಇಲ್ಲಿ ತಿಂಡಿಗೂ ಬಫೆ ಮಾಡ್ಬುಟ್ಟಿದ್ದ. ಕಟ್ಟಗೆ ಹಶ್ವಾಗಿದ್ದಕ್ಕೆ ಅದೇ ಸರಿಯಾಗಿತ್ತು ಅಂತ ಈಗ ಅನ್ಸ್ತು..
ತಿಂಡಿಗೆ ಜಾಸ್ತಿ ಎಂತು ಇರ್ಲೆ,
ಬರೀ
ಉಪ್ಪಿಟ್ಟು ಕೇಸರಿಬಾತು,
ಇಡ್ಲಿ ವಡೆ,
ಪೊಂಗಲ್,
ಶ್ಯಾವಿಗೆ ಕಾಯ್ಹಾಲು,
ರವೆ ಇಡ್ಲಿ,
ವಡಪ್ಪೆ,
ಮಸಾಲೆ ದೋಸೆ,
೨ ನಮ್ನಿ ಹಣ್ಣಿನ ರಸ,
ಕಾಫಿ, ಚಾ..
ಮತ್ತು ಹೆಚ್ಚಿಟ್ಟ ಹಣ್ಣು..
ಮಸಾಲೆ ದೋಸೆ ಸ್ವಲ್ಪ ಸಣ್ಣ, ಕಬ್ಬಿನಹಾಲು ಕಾಲಿ ಆಗೋಗಿತ್ತು ಅನ್ನದನ್ ಬಿಟ್ಬುಟ್ರೆ ಅದ್ಭುತ ತಿಂಡಿ.
ತಿಂಡಿ ತಿಂದ್ ಕೈ ತೊಳ್ಕಳಕು ಪುರ್ಶೊತ್ತಿಲ್ಲೆ, ಹೋಟೆಲ್ ಪಕ್ದಲ್ಲೆ ದ್ವಜಾರೋಹಣ.
ಸರಿ, ಇದೇ ಒಂದ್ ಅವಕಾಶ ಅಂತ್ಹೇಳಿ ಅಲ್ಲೀ ಹುಡ್ರ ಜೊತಿಗೆ ಸೇರ್’ಕ್ಯಂಡು ಜನಗಣಮನ ಹೇಳಿದ್ಯ. ಎಲ್ಲರು ಬರಲ್ಲೆ ಅಂತಿಟ್ಗಳಿ, ಅದು ಬೇರೆ ವಿಚಾರ!
ಕೆಲವ್ರು ಒಂದ್ ಕೈಯಲ್ಲಿ ಕಾಪಿ ಹಿಡ್ಕಂಡೆ ಶೇರ್ಕ್ಯಂಡ!
ಒಳ್ಳೆ ತಿಂಡಿ ಕಾಪಿ ಬಿದ್ಮೇಲೆ ಎಲ್ಲರಿಗು ಒಂದ್ನಮ್ನಿ ಹೊಸ ಹುರುಪ್ಬಂದಿತ್ತು. ಸರಿ ಅಂತ ಡ್ಯಾಂ ಕಡಿಗ್ ಹೊಂಟ್ಯ. ಎಲ್ಲರು ಡ್ಯಾಮು ಅಂದ್ರೆ ಸಿಕ್ಕಾಪಟ್ಟೆ ನೀರಿರ್ತು, ಹಾಂಗೆ ಹೀಂಗೆ ಅಂತ ಏನೇನೊ ಅಂದ್ಕಂಡಿದ್ಯ. ಅಲ್ಲಿಗ್ ಹೋಗಿ ನೋಡಿರೆ..
ನಾವೇ ನೀರ್ ತಗಂಡ್ ಹೋಕ್ಯಳವು. ನೀರು ಇಲ್ಲೆ ಎಂತು ಇಲ್ಲೆ!!
ಕಣ್ವ ಡ್ಯಾಂ ನೋಡಿದ್ಮೇಲೆ, ಅದನ್ನ ಡ್ಯಾಂ ಅಂತ ಕರ್ಯಕೆ ನಂಗಕ್ಕೇ ಕಷ್ಟಾಗಕ್’ಹಿಡ್ದೋತು. ಹಂಗಾಗಿ ಕೆಲವ್ರು ಕಣ್ವ ಕೆರೆ ಅಂದ,
ಕಣ್ವ ಹೊಂಡ ಅಂದ, ಕಡಿಗೆ ಅದು ಕಣ್ಣಿಕೆರೆ ಅಂತಾತು!!
ಅದನ್ನ ನೋಡಿರೆ, ಬಯಲ್ಸೀಮೆ ಬದಿಗೆ ಕೆರೆ ಹೆಂಗಿರ್ತು ಅಂತ ಮೊನ್ನೆ ಯಾರೊ ಹೇಳ್ತಿದ್ದ. ಅದೇ ನೆನ್ಪಾಗ್ತು..
ಅಲ್ಲಿ ಕೆರೆ ಹೆಂಗಿರ್ತಡ ಅಂದ್ರೆ..
"ಹೊಯ್ದ್ರೆ ತುಂಬ್ಕ್ಯತ್ತು, ತೊಳ್ಕಂಡ್ರೆ ಕಾಲಿ ಆಗೋಗ್ತು!"
ಆದ್ರೆ ನೀರಿಲ್ಲೆ ಅಂತ ಯಾರಿಗು ಬೇಜಾರಾಗ್ಲೆ.
ಇದ್ದ ಒಂದೇಒಂದು ಗೂಡಂಗಡಿಯಲ್ಲಿ ಚಾ ಕುಡಿದು, ಲೈಟಾಗಿ ಡ್ಯಾನ್ಸೂ ಮಾಡಿದ್ಯ.
ಸ್ವಲ್ಪ ಹೊತ್ತು ಅಲ್ಲೇ ಅತ್ಲಗಿತ್ಲಗ್ ಓಡ್ಯಾಡ್’ಕ್ಯಂಡು, ಫೋಟೊಗೀಟೋ ಮುಗುದ್ಮೇಲೆ ಕಬಡ್ಡಿ ಶುರು ಆತು.
ಕಬ್ಬಡ್ಡಿ ಮಜವೇ ಮಜ. ಅದೇನ್ ಅಬ್ರ, ಅದೇನ್ ಡೈಲಾಗುಗಳು, ಏನ್ ಕತೆ!
ಬಾಳ ವರ್ಷ ಆದ್ಮೇಲೆ ಉಸ್ಲ್ ಗೆರೆ!! ಅನ್ನ ಶಬ್ದ ಕೇಳಿ ನಂಗಂತು ಖುಶಿಯೋ ಖುಶಿ!!
"ಅಟ್ಟದ್ ಕಂಬನ ಬೇಲಿ ಗುಟ್ಟ ಹಿಡ್ದಂಗೆ ಹಿಡ್ಯಲ್’ಬತ್ತಿಲ್ಲೆ" ರವೀಂದ್ರನ ಮಾತು, ಇನ್ನೂ ಹತ್ ವರ್ಷ ನೆನ್ಪಿರ್ತು!
ಇಷ್ಟೆಲ್ಲಾ ಮುಗ್ಸಿ ವಾಪಸ್ ಹೊಂಟ್ಯ. ದಾರಿಲ್ಲಿ ಒಂದ್’ಬದಿಗೆ ಸೌತೆಕಾಯಿ, ಮಾಯ್ನಣ್ಣು, ಶೇಂಗಾ ಇನ್ನೂ ಏನೇನಿತ್ತ ಎಲ್ಲ ಮುಕ್ಕಿದ್ಯ, ಬರಗೆಟ್ಟವ್ರಂಗೆ. ಅದೂ ಸಾಲ ಅಂತ ಆಟೋದಲ್ಲಿ ತುಂಬ್ಕ್ಯಂಡ್ ಬೆಂಗ್ಳೂರ್ ಬದಿಗ್’ಹೊಂಟಿದ್ ಎಳ್ನೀರ್ ನಿಲ್ಸಿ..
ಸ್ಕ್ರೂ ಡ್ರೈವರ್ರು, ನನ್ ಜೋಬಲ್ಲಿದ್ದಿದ್ ಚಾಕು..
ಏನೇನೊ ಎಲ್ಲ ಬಳ್ಸಿ ಎಳ್ನೀರ್ ಕೆತ್ತಿ, ಕೊಯ್ದು, ಕುಕ್ಕಿ ಕುಡ್ದಿದ್ ನೆನ್ಪು ಇನ್ನು ಹಸಿ ಹಸಿ ಇದ್ದು..
ಹುಡ್ರಾ.. ಎಲ್ಲ ಎಲ್ಲಿದ್ರೊ?? ಹೊಂಡಿ ಎಲ್ಲ. ಹೋಪನ ಎಲ್ಲಿಗಾರು.. ಎಷ್ಟ್’ದಿನ ಆಗೋತು..


16 comments:
ohh super guru...... mast tripuuu....
ಹೋಯ್ ! ಸಂದೀಪ,
ಒಳ್ಳೇ ಮಜಾ ಇದ್ದ್ದು ಮಾರಾಯಾ ನಿಂಗಳ ಟ್ರಿಪ್ಪಿನ ಕತೆ!
ಅಷ್ಟೇ ಚೂರು ತಿಂಡಿ ತಿಂದ್ಕಂಡು ಹೊಟ್ಟೆ ತುಂಬ್ತಾ ನಿಂಗಕ್ಕೆ? ಅದ್ರಗೂ ಮಸಾಲೆ ದೊಸೆ ಸಣ್ಣ , ಕಬ್ಬಿನ ಹಾಲು ಇಲ್ಲೆ ಅಂತಾತು ಬ್ಯಾರೆ.
ಬಯಲು ಸೀಮೆ ಕೆರೆ ಹ್ಯಾಂಗಿರ್ತು ಅನ್ನದ್ನ ಕೇಳಿ ನೆಗ್ಯಾಡಿ ನೆಗ್ಯಾಡಿ ಸುಸ್ತಾತು ಮಾರಾಯ ! ಅಂತೂ ನಿಂಗಳ ’ ಕಣ್ಣಿ ಕೆರೆ ’ ಪ್ರವಾಸ ಜೋರಾಗಿತ್ತು ಅಂತಾತು ಬಿಡು.ಇನ್ನು ಮುಂದಿನ ಪ್ರವಾಸ ಎಲ್ಲಿಗೆ ಹೊಂಟಿದ್ರಿ? ಹೋಗಿ ಬಂದಕೂಡ್ಲೇ ಬರ್ದಾಕು. ಈ ಸಲ ಯಾವ್ದಾದ್ರೂ ಡ್ಯಾಮಿಗೆ ಹೋಗದಾದ್ರೆ , ಮುಂಚೆನೇ ನೀರು ಹಿಡ್ಕಂಡು ಹೋಕ್ಯಬಿಡಿ ಮತ್ತೆ !!!
Avattu yange bappale aagittille..... yanna gaadi kalasi kottiddiddi.
good one..ade andd-katta iddiddi..yantakke sandeepana hesaru helidre janapada lokadavvu discount kodta heli.. anyways.. havyaka dallina baraha ishtaa aatu..channagiddu..
ಓಹೋ ಸಕತ್ ಮಜಾ ಮಾಡಿದ್ರಲ್ಲ ಮರಯಾ..
ನಾನು ಮಾರ್ಚ್ ೧೫ ಅನ್ಕಂಡಿ. ನೋಡಿದ್ರೆ ಆಗಸ್ಟ್ ೧೫.
ಚನ್ನಾಹಿ ಬರದ್ದೆ ಸಂದೀಪ
Carry on, boys!
ಸಂದೀಪ...
ಸಂಪೂರ್ಣಬರಹವನ್ನು ಹವ್ಯಗನ್ನಡದಲ್ಲಿ ಬರೆದದ್ದು ಬರಹಕ್ಕಿನ್ನಷ್ಟು ಕಳೆಕೊಟ್ಟಿದೆ. ಆಯಾ ಆಡುಭಾಷೆಯನ್ನು ಬಳಸುತ್ತಿರುವವರೆಲ್ಲ ಹೀಗೆಯೇ ಕನ್ನಡದ ತಮ್ಮ ಆಡುಭಾಷೆಯಲ್ಲಿ ಆಗಾಗ ಲೇಖನಗಳನ್ನು ಕಟ್ಟಿಕೊಡುತ್ತಿದ್ದರೆ ಓದುವುದಕ್ಕೂ ಖುಷಿಯಲ್ಲದೇ ಭಾಷೆಗಳನ್ನೆಲ್ಲ ಉಳಿಸಿಕೊಳ್ಳುವತ್ತ ಇಟ್ಟ ಪುಟ್ಟ ಹೆಜ್ಜೆಯೂ ಆದೀತು. ಇಂಥಹ ಬರಹಗಳು ಮನಸ್ಸಿಗೆ ಆಪ್ತತೆಯನ್ನೂ, ಮುದವನ್ನೂ ಕೊಡುತ್ತವೆ.
ಬರೆಯುತ್ತಿರಿ.
ಹುಟ್ಟುಹಬ್ಬದ ಶುಭಾಶಯ :-)
@Raghu,
Thanks mata!
@ಚಿತ್ರಾ,
ಹೇ ಚಿತ್ರಾ,
ಸುಮಾರು ಉದ್ದಾ ಕಾಮೆಂಟೆ ಬರದ್ದೆ ಅಂತಾತು! ಆಗ್ಲಿ..
ಒಬ್ಬಿಬ್ರಿಗೆ ಬಿಟ್ಟು ಬೇರೆ ಎಲ್ಲರಿಗು ಹೊಟ್ಟೆ ತುಂಬಿತ್ತೇನಪ!
ಕೆರೆ ವಿಚಾರನೆ ಹಂಗಿದ್ದು.
ಹೌದೌದು ಇನ್ಮೇಲೆ ಬಂದ್ಕುಳೆನೆ ಬರ್ಯವು. ಈಗ ಬಾಕಿ ಇಪ್ದೆ ಸುಮಾರಾಗೋಯ್ದು. btw, ಕಾಮೆಂಟಿಗೆ ಥ್ಯಾಂಕ್ಸ್!
@ಹರ್ಷ,
ಓಹೋ, ಹೌದು.. ನೆನ್ಪಾತು ಈಗ.
@Niveditha,
Thanks :)
@ರಂಜನಾ,
ಥ್ಯಾಂಕ್ಸ್ ರಂಜನಾ. ಹೇಳಕೆ ಮರ್ತೋತು. ಅದು ೨೦೦೭ರ ಅಗಸ್ಟ್ ೧೫!!
@Sunaath,
Hmmm!!
@ಶಾಂತಲಾ,
ತುಂಬಾ ತುಂಬಾ ಧನ್ಯವಾದಗಳು :-)
march 27,28,29-2009.?
ಇಲ್ ಬರದು ಹೊಟ್ಟೆ ಉರ್ಸ್ತ್ಯಲ... ನನ್ ಕರ್ಯಕ್ಕೆ ಎಂತಾಗಿತ್ತಲೇ ನಿಂಗೆ?
@ಶ್ರೀನಿಧಿ,
ಹೆಂಗಿತ್ತು?! ;-)
@ಹರೀಶ,
ಅಂತು ನೀನಾರು ಉರ್ಕಂಡ್ಯಲ.. ಅಷ್ಟೇ ಸಮಾಧಾನ!!;)
ಮುಂದಿನ್ಸರಿ ಕರಿತಿ ಮಾರಾಯ..
I wish I was also part of this trip
@shashi,
next time ನೀ ಈಕಡೆ ಬಂದಾಗ ಎಲ್ಲಿಗಾರು ಹೋಪನ..
odiddi
prathimakka nadahalli
@Prathimakka,
hey!!
sakkath kushi aatu nin comment nodi..
Come back and read more :)
ಹೊಯ್ದ್ರೆ ತುಂಬ್ಕ್ಯತ್ತು, ತೊಳ್ಕಂಡ್ರೆ ಕಾಲಿ ಆಗೋಗ್ತು!
ha ha ha.. super.
Post a Comment