ಮೊನ್ನೆ ಭಾನುವಾರ ರಾತ್ರಿ, ಸಂಗಮ ಚಿತ್ರ ನೋಡಿಕೊಂಡು ಪಿ.ವಿ.ಆರ್’ನಿಂದ ಆಗತಾನೆ ಹೊರಗೆ ಹೆಜ್ಜೆಯಿಡುತ್ತಿದ್ದೆವು. ಏನನ್ನೋ ಕಳೆದುಕೊಂಡಂತೆನಿಸಿ ಕಿಸೆ ತಡವಿ ನೋಡಿದರೆ ಸ್ವಿಸ್ ನೈಫ್ ಇಲ್ಲ. ಅದರ ಜಾಗದಲ್ಲಿ ಒಂದು ಬಿಳಿ ಚೀಟಿ. ತಕ್ಷಣ ಸೆಕ್ಯುರಿಟಿಯವನ ಬಳಿ ಓಡಿ ಚೀಟಿ ತೋರಿಸಿ (ಒಳಗೆ ಹೋಗುವಾಗ ಅವನು ತೆಗೆದಿಟ್ಟುಕೊಂಡಿದ್ದ) ನನ್ನ ಚಾಕು ಕಸ್ಗೊಂಡೆ.
ಎಂಟು ರಾತ್ರಿಗಳ ಹಿಂದೆ ಇದೇ ಚಾಕುವಿನಿಂದ ಗಂಗೆ ಗಿಂಡಿ ಓಪನ್ ಮಾಡಿದ ಚಿತ್ರ ಕಣ್ಮುಂದೆ ಸುಳಿಯಿತು. ತಟ್ಟನೆ ಕೆನ್ನೆಗಿಳಿದ ಕಣ್ಣೀರಿನ ಹನಿಯನ್ನು ಅಷ್ಟೇ ವೇಗದಲ್ಲಿ ಕರವಸ್ತ್ರದಿಂದ ಒರೆಸುತ್ತಾ ತಲೆಯೆತ್ತಿದೆ. ಹೊಟ್ಟೆ ತಾಳ ಹಾಕುತ್ತಿತ್ತು. ತಕ್ಷಣಕ್ಕೆ Mc'Dಯಲ್ಲೊಂದು ಬರ್ಗರ್ ಮೆದ್ದು, ಗೆಳತಿಯನ್ನು ಬೀಳ್ಕೊಟ್ಟು ರಾತ್ರಿ ಊಟಕ್ಕೆ ಹತ್ತಿರದಲ್ಲೇ ಇದ್ದ ಪ್ರಭಾಳ ಮನೆಯ ಕಡೆ ಬೈಕ್ ತಿರುಗಿಸಿದೆ.
"ಯಾರ್ಜೊತೆ ಹೋಗಿದ್ದೆ?" ಅವಳ ಪ್ರಶ್ನೆ.
"ನನ್ ಫ್ರೆಂಡ್ ಜೊತಿಗೆ" ಅದಕ್ಕೆ ನನ್ ಉತ್ರ.
ಆದರೆ, ಇವಳಿಗೆ ನನ್ನ ಮೇಲೆ ಯಾವಾಗಲೂ "ಒಂತರಾ.." ಅನುಮಾನ..
ತುಟಿಯಲ್ಲಾಡುತ್ತಿದ್ದ ತುಂಟನಗೆಯನ್ನು ಮರೆಸಲೆತ್ನಿಸದೇ ಕೇಳಿದಳು..
"ಫ್ರೆಂಡಾ ಅಥ್ವಾ.. ಫ್ರೆಂಡ್ತಿನಾ?"
ಹೀಗೆ ಹೊಸ ಶಬ್ದವೊಂದು ಹುಟ್ಟಿಬಿಟ್ಟಿತ್ತು. ಮತ್ತು ನನಗೆ ತಿಳಿಯುವುದರೊಳಗೇ ಅದು ನನಗೆ ಇಷ್ಟವಾಗಿಹೋಗಿತ್ತು..
_
Thursday, November 06, 2008
Subscribe to:
Post Comments (Atom)


16 comments:
:-)ಫ್ರೆಂಡ್ತಿ ಹೇಳದು ನಮ್ಮ ಡಿಕ್ಷನರಿಯ ಫ್ರೆಂಡಿ ಹೇಳದಕ್ಕೆ ಸಮ. ಯಾರಾದ್ರೂ ನನ್ ಫ್ರೆಂಡು ಅದು ಇದು ಕಥೆ ಹೇಳಿರೆ ಫ್ರೆಂಡಾ? ಫ್ರೆಂಡಿನಾ ? ಹೇಳಿ ಕೇಳದು ಭಾರಿ ಸಾಮಾನ್ಯ ಆಗಿತ್ತು. ಹಾಸ್ಟೆಲ್ ಸೇರಿದ ಹೊಸತರಲ್ಲಿ ನಮ್ಮ ಎದ್ರಿನ್ ರೂಮಿನ ಒಬ್ಳು ಹುಡುಗಿ ಯಾವಾಗಲೂ ಒಂದು ಲೆಟರ್ ಬರ್ಕಂಡು ಪೋಸ್ಟ್ ಮಾಡಕ್ಕೆ ಹೋಗ್ತಿತ್ತು. ಅವಾಗೆಲ್ಲಾ ಯಾರಿಗೆ ಬರ್ದಿದ್ದು ಪತ್ರ ಅಂದ್ರೆ ಫ್ರೆಂಡ್ ಗೆ ಹೇಳಿರೆ ಫ್ರೆಂಡ್ ಗಾ ಫ್ರೆಂಡಿಗಾ ಹೇಳಿ ಗೋಳೊಯ್ಕತ್ತಿದ್ದಿದ್ದು ನೆನಪಾಗಿ ನಗು ಬಂತು.
ಹಂಗಲ್ಲ ಶ್ಯಾಮಾ.ಅದು ಫ್ರೆಂಡಿನೆ ಅಂತ ಗೊತ್ತಿತ್ತು ಪ್ರಭಾಂಗೆ . ಆದ್ರೆ ಬರೆ ಫ್ರೆಂಡಾ ಅಥವಾ ಮುಂದೆ ಹೆಂಡ್ತಿ ಆಗೋವ್ಳಾ ಅಂತ? ಅದೇ ಫ್ರೆಂಡ್ತಿ :)
Swissknifeu ಹುಷಾರು ಸಂದೀಪ :)
ಫ್ರೆಂಡ್ತಿ!! ಹ ಹ ಹ.... :)
ಚೆನ್ನಾಗಿದೆ ಹೊಸ ಪದ ...
ಕ್ಯುರಿಯೋಸಿಟಿ ಈಸ್ ದ್ ಮದರ್ ಆಫ್ ಇನ್ವೆನ್ಷನ್ ಅನ್ನಬಹುದು :))
ಬೈ ದ್ ವೇ ಯಾರಪ್ಪ ಆ ಫ್ರೆಂಡ್ತಿ ?? ;)
ನನ್ನ ಆರ್ಕುಟ್ಟಿನಲ್ಲಿ "ಸಂಗಮ ಹೆಂಗಿತ್ತು" ಅಂತ ಕೇಳ್ದಾಗಲೇ ಡೌಟಿತ್ತು ನೀನು ಅಲ್ಲಿಗೆ ಬೈಂದೆ ಅಂತ. ತಕ್ಷಣ ನನ್
ಮನ್ಸಲ್ಲ ಒಂದು ಅನುಮಾನ ಬಂತು. ನನ್ ನೋಡಿದ್ರೆ ಮಾತಾಡ್ಸಕಿತ್ತು, ಅಟ್ಲೀಸ್ಟ್ ಒಂದು ಫೋನ್ ಅಥ್ವಾ ಎಸ್.ಎಮ್.ಎಸ್ ಮಾಡಕಿತ್ತು. ಮಾಡಲ್ಲೆ ಅಂದ್ರೆ ಯಾವ್ದೋ ಹುಡ್ಗಿ(ಫ್ರೆಂಡ್ತಿ) ಜೊತೆ ಬೈಂದ ಇಂವ ಅಂತ ಹೆಂಡ್ತಿ ಹತ್ರ ಹೇಳ್ದಿ. ಈಗ ಗೊತ್ತಾತು..
ಹಾಂ... ಒಂದು ಕ್ವಷ್ಚನ್ನು.. ಫಿಲ್ಮ್ ಹೆಂಗಿತ್ತು? ಕಥೆ ಚೆನ್ನಾಗಿತ್ತಾ?
'ಫ್ರೆಂಡ್ತಿ' ಇದು ನಂಗೂ ಹೊಸಾ ಶಬ್ದ... ಚೊಲೋ ಇದ್ದು :)
ಮಾಸ್ತರು- ಮಾಸ್ತರಿಣಿ, ಡಾಕ್ಟರು- ಡಾಕ್ಟರಿಣಿ ಎಲ್ಲ ಹಳೇದಾಗಿತ್ತು. ಇದು ಹೊಸಾದು... ಎಲ್ಲಾದರೂ ಉಪಯೋಗಿಸಲ್ಲೆ ಮಸ್ತ್ ಆಗ್ತು :)
ಹಾ ಹಾ ಹಾ...
ಚೆನಾಗಿದ್ದು ಹೊಸ ಪದ. ’ ಕಂಗ್ಲಿಷ್’ ಶಬ್ದಕೋಶಕ್ಕೆ ಹೊಸಾ ಎಂಟ್ರೀ ಅಂತಾತು !
ಅಂದ ಹಾಗೇ, ಸಿನೆಮಾ ಅರ್ಥ ಆತಾ ಅಥವಾ ಇನ್ನೊಂದುಸಲ ಒಬ್ಬನೇ ಹೋಗಿ ನೋಡ್ಕ್ಯಬರಕ್ಕಾ? ;)
ಯಾವಾಗ್ಲೋ ಪಾರ್ಟಿ?
ಹ..ಹ್ಹಾ.. ನಾವೆಲ್ಲಾ ಫ್ರೆಂಡಿ ಅನ್ನುತಿದ್ದೆವು. ಅದಕ್ಕೆ ನಿಮ್ಮ ವಿವರಣೆ ಸರಿಯಾಗಿದೆ. ಪ್ರೆಂಡ್ತಿ ಅನ್ನೊದೆ ಸರಿ. ಹಹ್ಹಾ
@ಶ್ಯಾಮಾ,
ಫ್ರೆಂಡ್ತಿ, ಫ್ರೆಂಡಿಗೆ ಹತ್ತಿರದ ಶಬ್ದ. ಸಮ ಅಲ್ಲ ಅಂತ ನನ್ನ ಅನಿಸಿಕೆ.
@ವಿಕಾಸ್,
:-)
ಸರಿಯಾದ ಅರ್ಥೈಸುವಿಕೆ!
@Deepthi,
ಧನ್ಯವಾದಗಳು!!
ನಂಗೆ ಗೊತ್ತಿದ್ರೆ ತಾನೆ, ನಿಮ್ಗೆ ಹೇಳೋದು!?
@ಯಜ್ಞೇಶ್,
ತೋ!! ಹಂಗಲ್ಲ ಮಾರಾಯ. ನಿಂಗ್ಳಿನ್ ಮಾತಾಡ್ಸಕ್ ಏನು ತೊಂದ್ರೆ ಇರ್ಲೆ. ನಾ ಕರ್ಯಷ್ಟೊತ್ತಿಗೆ ನೀ ಮುಂದ್ ಹೋಗ್ಬುಟ್ಟೆ ಅಷ್ಟೆ. ಮತ್ತೆ ಟಾಕೀಸಲ್ಲೆಂತಕ್ ತೊಂದ್ರೆ ಕೊಡದು ಅಂತ ಪೋನ್ ಮಾಡ್ಲೆ.
ಫಿಲ್ಮ್ ಓಕೆ ಓಕೆ ತರ.. ಒಂದ್ಸರಿ ನೋಡ್ಲಕ್ಕು ಅಷ್ಟೆ.
@Seema,
ಕಾಮೆಂಟಿಸಿದ್ದಕ್ಕೆ ಧನ್ಯವಾದ:)
@ಚಿತ್ರಾ,
ಅರ್ಥ ಆಪ್ದು ಎಂತ ಇದ್ದು ಆ ಸಿನ್ಮಾದಲ್ಲಿ??!!
brw, ಥ್ಯಾಂಕ್ಸ್.
@Harish,
ಎಂತಕೆ? ಬ್ಲಾಗ್ ಬರ್ದಿದ್ದಕ್ಕಾ?
@ಸಿಮೆಂಟು,
:-)
blog lokakke welcome
vinayaka kodsara
ಎಲ್ಲರ ಮನೇಲಿ ಕಾಣ್ಲಿಕ್ ಸಿಗೋದು
ಹೆಂಡ್ತಿ ಮತ್ತು ಗಂಡ
ನಮ್ಮನೇಲಿ ತದ್ವಿರುದ್ಧ
ಗಂಡ್ತಿ ಮತ್ತು ಹೆಂಡ
ಅಂತ ರಾಜರತ್ನಮ್ಮೋ ಇನ್ಯಾರೋ ಬರೆದಿದ್ದು ನೆನಪಾಯ್ತು.
ಇಷ್ಟು ಪುಟ್ಟ ಬರಹದಲ್ಲೂ ಗಂಗೆಯನ್ನೂ ಗೌರಿಯನ್ನೂ ಒಟ್ಟಿಗೆ ಓದಿ ಬಿಕ್ಕಿ ಬಿಕ್ಕಿ ನಕ್ಕೆ.
ರಸಿಕನ್ನಡಿಗ
@Vinayaka Kodsara,
ನನಗಾ ವೆಲ್ಕಂ?
ಧನ್ಯವಾದಗಳು!
@ರಸಿಕನ್ನಡಿಗ,
ಕೇಳಿರಲಿಲ್ಲ, ಚೆನ್ನಾಗಿದೆ!
ಧನ್ಯವಾದಗಳು.
ಗರ್ಲ್ ಫ್ರೆಂಡ್ಗಿಂತ ಫ್ರೆಂಡ್ತಿ ಪದ ಚೆನಾಗಿದ್ದು . . .ಹೊಸಾಪದ ಹುಟ್ಟುಹಾಕಿದ್ದಕ್ಕೆ, ಪರಿಚಯಿಸಿದ್ದಕ್ಕೆ ಧನ್ಯವಾದ.
@greeshma,
ಓದಿದ್ದಕ್ಕೆ, ಕಾಮೆಂಟಿಸಿದ್ದಕ್ಕೆ ಧನ್ಯವಾದ,
ಬರ್ತಾಇರಿ.
friendthi andare friend hendtho antha auguthetheno antha annisuththide
@anony,
Houda? nangenu haage anslilla1
Post a Comment