Wednesday, December 31, 2008

2008

ಇವತ್ತು Dec 31. 2008ನೇ ಇಸವಿಯ ಕೊನೆಯ ದಿನ. ಇನ್ನು ಕೆಲವೇ ತಾಸುಗಳಲ್ಲಿ 2009 ಬಂದೆರಗುತ್ತದೆ. ಎಲ್ಲರಿದ್ದೂ ಒಂದೇ ಪ್ರಶ್ನೆ, "ರಾತ್ರಿ ಆಚರಣೆ ಎಲ್ಲಿ?"

ಎಲ್ಲರಿಗೂ ಏನೊ ಒಂತರಾ ಖುಶಿ! ಯಾವುದೋ ಹೊಸನದಿಗೆ ದುಮುಕ ಹೊರಟವರಂತೆ ಸಂಭ್ರಮ, ಏನೊ ಹೊಸ ಉತ್ಸಾಹ, ಸ್ವಲ್ಪ ಅನಿಶ್ಚಿತತೆ. ಬಾಹ್ಯ ಜಗತ್ತಿನ ಬೆಳವಣಿಗೆಗಳು, ಮನಸ್ಸಿನೊಳಗಿನ ಯುದ್ಧಗಳು, ಕಾಯುವಿಕೆಯಲ್ಲೇ ಕಂಡುಬಿಡುವ ಸಂತೋಷ. ಎಲ್ಲರಂತಿರಬೇಕೆಂಬ ಒತ್ತಡ, ಎಲ್ಲರಂತಿದ್ದುಕೊಂಡೆ ಬೇರೆಯವನಾಗಬೇಕೆಂಬ ಹಂಬಲ. ಒಬ್ಬೊಬ್ಬರೊಳಗೂ ನೂರೆಂಟು ಭಾವನೆಗಳು, ಬಳಲಿಕೆಗಳು.

ಇವೆಲ್ಲವುಗಳ ನಡುವೆಯೇ ಹೀಗೆ ೩೧ರ ರಾತ್ರಿ ಕುಳಿತು ಈ ವರ್ಷದ ’ಆದಹೋದ’ಗಳ ಬಗ್ಗೆ ಗಂಬೀರಾಲೋಚನೆ ನಡೆಸುವುದು ನನ್ನದೊಂದು ರೂಢಿ. ಆದರೆ ಇಂದೇಕೋ ಮಧ್ಯಾಹ್ನವೇ ಈ ವಿಚಾರ ತಲೆಗೆ ಹೊಕ್ಕಿದೆ. ಹೀರುತ್ತಿರುವ (ಮರ್)ಕಣ್ಣಿನ್’ದೇವನ್ ಟೀ ಯ ಮಹಾತ್ಮೆಯಿದ್ದರೂ ಆಶ್ಚರ್ಯವಿಲ್ಲ.

ಪುಸ್ತಕಗಳು:
2008ರಲ್ಲಿ ಪುಸ್ತಕವನ್ನು ಓದಿದ್ದು ತುಂಬಾ ಕಡಿಮೆಯೆಂದೇ ಹೇಳಬೇಕು. ಅದರಲ್ಲೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಿಕ್ಕಾಪಟ್ಟೆ ಕಡಿಮೆ. ಇರ್ಲಿ, ಇಲ್ಲಿದೆ ಓದಿದ ಪುಸ್ತಕಗಳ ಪಟ್ಟಿ:
  1. ನಮ್ಮೊಳಗಿನ ಬ್ರಹ್ಮಾಂಡ - ನಾಗೇಶ ಹೆಗಡೆ, ಬಕ್ಕೆಮನೆ
  2. ವ್ಯಾಸರಾಯ ಬಲ್ಲಾಳರ ಸಮಗ್ರ ಕತೆಗಳು
  3. Tara's Child - Susan Kearney
  4. ಗರುಡಗಂಬದ ದಾಸಯ್ಯ - ಗೊರೂರು ರಾಮಸ್ವಾಮಿ ಐಯ್ಯಂಗಾರ್
  5. Fortune's Formula - William Poundstone
  6. Where Eagles Dare - Alistair MacLean
ಚಲನಚಿತ್ರಗಳು:
ಈ ಜಗತ್ತಿಗೆ ನಾನು ಹೊಸಬ. ನೋಡಿದ್ದು ಕಡಿಮೆ, ಆದರೆ ತುಂಬಾ ಕಲೆಹಾಕಿದ್ದೇನೆ.
ಇವಿಷ್ಟು ೨೦೦೮ರಲ್ಲಿ ನೋಡಿದ್ದು:
  1. Jab We Met
  2. Dor
  3. 12 Angry Men
  4. Chak De! India
  5. Michael Clayton
  6. Anupama
  7. 21
  8. ಎದುರುಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ
  9. A Wednesday
  10. Sangama
  11. WALL-E
  12. Kung Fu Panda
  13. Navagraha
  14. Finding Nemo

ಇತರೆ:
ಭೇಟಿಕೊಟ್ಟ ಸ್ಥಳಗಳು ಮತ್ತು ನೆನಪಿನಲ್ಲುಳಿಯುವ ಇನ್ನಿತರೆ...
  1. La Centre(Map, Website) - Black Jack, Poker
  2. Mounthood, OR (Website, My Photos) ಫೆಬ್ರವರಿ ೧೭
  3. ಬುಲೆಟ್ಟಿನಲ್ಲಿ ಬೆಂಗಳೂರು-ನಡಹಳ್ಳಿ-ಬೆಂಗಳೂರು, ಮಾರ್ಚ್ ೨೦, ೨೧, ೨೨, ೨೩
  4. ಪ್ಯಾರಾಸೈಲಿಂಗ್, ಮೇ ೧೭ & ಸೆಪ್ಟೆಂಬರ್ ೨೮
  5. ಪ್ರಭಾಳ ವಿವಾಹ, ಮೇ ೨
  6. ಕಾರು ಖರೀದಿ, ಮೇ ೨
  7. ಮುಳ್ಳಯ್ಯನ ಗಿರಿ, ಬಾಬಾಬುಡನ್ ಗಿರಿ, ಮಾಣಿಕ್ಯಧಾರ ಜಲಪಾತ, ಚಿಕ್ಕಮಗಳೂರು ಜುಲೈ ೨೦
  8. ಕೇರಳ ಪ್ರವಾಸ, ಆಗಸ್ಟ್ ೧೫, ೧೬, ೧೭
  9. ಚಿಕ್ಕಪ್ಪನ ಮರಣ, ಅಕ್ಟೋಬರ್ ೨೬
  10. ದೀಪೋತ್ಸವ (Photos), ನವೆಂಬರ್ ೧೫
  11. ಕಾರಿನಲ್ಲಿ ಊರಕಡೆ ಒಂದು ವಾರ, ತೀರ ಮೊನ್ಮೊನ್ನೆ(ಡಿಸೆಂಬರ್ ೨೧-೨೮)
  12. ಶೇರು ಮಾರುಕಟ್ಟೆಯಲ್ಲಿ ಕೊಚ್ಚಿಹೋದ ಹಣ (ಬೆರಳು ಸವೆಸಿ ದುಡಿದದ್ದು!)
ನಾಳೆ ಬೆಳಗಾದರೆ ಎದುರಾಗುವ ಪ್ರಶ್ನೆ
"ನಿಂದು New Year Resolution ಏನು..?"
ನಿಮ್ದೆಲ್ಲಾ ಏನೇನಿದ್ಯೊ ಗೊತ್ತಿಲ್ಲ.. ನಂದಂತು ತೀರ್ಮಾನ ಆಗೋಗಿದೆ..
೨೦೦೯ಕ್ಕೆ resolutionಉ..

"1680 x 1050"

ಈ ಬ್ಲಾಗಿನ ಎಲ್ಲ ಓದುಗರಿಗೂ, ಸಹಬ್ಲಾಗಿಗರಿಗೂ ಮತ್ತು ಅವರ ಬ್ಲಾಗಿನ ಓದುಗರಿಗೂ ಹೊಸ ವರ್ಷದ ಶುಭಾಷಯಗಳು.

15 comments:

ಚಿತ್ರಾ said...

ನಿಮಗೂ ಹೊಸವರ್ಷದ ಶುಭಾಶಯಗಳು !
ಪರವಾಗಿಲ್ಲ ,ಒಳ್ಳೆ ಡೈರಿ ಮೈಂಟೈಂನ್ ಮಾಡಿದಾಂಗಿದ್ದು ! ೨೦೦೯ ರಲ್ಲೂ ಮುಂದುವರೀಲಿ.

sunaath said...

ತುಂಬಾ ಚೆನ್ನಾಗಿಯೇ ಇತ್ತಲ್ರಿ ನಿಮ್ಮ ಹಳೆಯ ವರ್ಷ.
ಹೊಸ ವರ್ಷ ಹರ್ಷದಾಯಕವಾಗಲಿ!

Harish - ಹರೀಶ said...

ಹೊಸ ವರ್ಷದ ಹಾರ್ದಿಕ ಶುಭಾಶಯಗಳು..

PS: 1680 x 1050 resolution ಎಲ್ಲೂ ಇಲ್ಲೆ ;-)

ಸುಶ್ರುತ ದೊಡ್ಡೇರಿ said...

ಬೆರಳು ಸವೆಸಿ ದುಡಿದದ್ದು! -ಕೇಳಿರ್ಲೆ ಈ ಸೇಯಿಂಗು; ಸೋ, ನಕ್ಕಿ! :)

Parisarapremi said...

ಒಳ್ಳೇ ರೆಸಲ್ಯೂಷನ್ನು, ನನ್ನ ಲ್ಯಾಪ್‍ಟಾಪಿಗೆ ಹೇಳಿ ಮಾಡಿಸಿದ ಹಾಗ್ ಇದೆ..

Deepthi said...

"ಎಲ್ಲರಂತಿರಬೇಕೆಂಬ ಒತ್ತಡ, ಎಲ್ಲರಂತಿದ್ದುಕೊಂಡೆ ಬೇರೆಯವನಾಗಬೇಕೆಂಬ ಹಂಬಲ" -- ನನಗೆ ಈ ಸಾಲುಗಳು ಬಹಳ ಹಿಡಿಸಿದವು.

ಕಳೆದ ವರುಷದ ಹೈಲೈಟ್ಸ್ ಅನ್ನು ಚೆನ್ನಾಗಿ ಸಂಗ್ರಹಿಸಿದ್ದೀರಿ.

ನಿಮಗೂ ಸಹ ಹೊಸ ವರುಷದ ಹಾರ್ದಿಕ ಶುಭಾಶಯಗಳು!

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಹೊಸ ವರುಷದ ಶುಭಾಶಯಗಳು ಸರ್...
-ಚಿತ್ರಾ

Alpazna said...

@ಚಿತ್ರಾ,
ಧನ್ಯವಾದಗಳು.

@sunaath,
ಹ್ಮ್ಮ್.. ಇತ್ತು..
ಧನ್ಯವಾದಗಳು.

@ಹರೀಶ,
ಧನ್ಯವಾದ, ನೀವ್ಯಾಕೆ ಇಲ್ಲಿ ಕ್ಲಿಕ್ಕಿಸಿ ನೋಡಬಾರದು?

@ಸುಶ್ರುತ,
:-)

@Parisarapremi,
ಧಾರಾಳವಾಗಿ ಬಳಸಿಕೊಳ್ಳಿ!! :-)

@Deepthi,
ಧನ್ಯವಾದಗಳು!

@ಚಿತ್ರಾ ಕರ್ಕೇರಾ,
ಧನ್ಯವಾದಗಳು.

Harish - ಹರೀಶ said...

ಹಹ್ಹಾ! WSXGA!!

Alpazna said...

@Harish,
What you thought?!

ಮನಸ್ವಿ said...

ಬೆರಳು ಸವೆಸಿ ದುಡಿದದ್ದು.. ಜೊತೆಗೆ ತಲೆಯು ಸವೆದಿರುತ್ತದೆ!! Alpazna ;P

ಶಾಂತಲಾ ಭಂಡಿ said...

ಸಂದೀಪ...
ಹೊಸವರ್ಷದ ಶುಭಾಶಯ ನಿಂಗೂವ. ಹಾಗೂ ಶುಭಾಶಯ ಕೋರಿದ್ದಕ್ಕೆ ಧನ್ಯವಾದ.
ಒಳ್ಳೊಳ್ಳೆ ಬುಕ್ಸ್ ಓದಿದ್ದೆ. ಒಳ್ಳೊಳ್ಳೆ ಕೆಲ್ಸ ಮಾಡಿದ್ದೆ.
ಒಂದು ತಿಂಗಳು ಮೊದಲಾದ್ರು ಕಾರು ತಗಂಡಿದ್ರೆ ಯಾವ ಬಣ್ಣ ಹೇಳಾದ್ರೂ ನೋಡ್ಕ್ಯಬತ್ತಿದ್ದಿ. ಕಡೇ ಪಕ್ಷ ಕಾರಿನ ಬಣ್ಣನ ಈ ಲೇಖನದಲ್ಲಾದ್ರೂ ಬರೆಯದಲ್ದ?
ಹೊಸವರ್ಷ ಇನ್ನಷ್ಟು ಹೊಸ ಹೊಸ ಖುಶಿ ತರಲಿ.

Alpazna said...

@ಮನಸ್ವಿ,
ಹೆಹ್ಹೆ.. ತಲೆ ಸವೆಯುವುದಾ? ಹಂಗಂದ್ರೆ?!

@ಶಾಂತಲಾ,
ಕಾರ್ ಬಣ್ಣ ಎಂತ ಕೇಳ್ತೆ.. ಅದು ಬೆಳ್ಳಗಿದ್ದು(....!) :-)
ಶುಭಹಾರೈಕೆಗಳಿಗೆ ಧನ್ಯವಾದಗಳು.
ಮುಂದಿನ್’ಸರಿ ಬಂದಾಗ ಕಾರ್‍ ನೋಡ್ಲಕ್ಕಡ ಬಿಡು..

Harish - ಹರೀಶ said...

I thought (obviously) something else!

Alpazna said...

@Harish,
I'm not surprised!!