ಇಲ್ಲ, ಇದಾಗದಿಲ್ಲ. ಹಿಂಗೇ ಆದ್ರೆ ಮುಂದೆಂಗೇನ ಮಾರಾಯ.. ಅಲ್ಲ ನೋಡು, ಅದು ಇದು ಅಂತಿಲ್ಲ. ಎಲ್ಲಾ ಸಾಮಾನಿನ್ ರೇಟು ಹಿಂಗ್ ಜಾಸ್ತಿ ಆಗಕಿಡುದ್ರೆ ನಮ್ಮಂತವ್ರು ಸಂಸಾರ ಮಾಡದ್ಹೆಂಗೆ ಅಂತ..
ಮೊನ್ನ್ ಮೊನ್ನಿನ್’ವರಿಗು ಒಂದ್ ನೂರ್ ರುಪಾಯ್ ಹಿಡ್ಕಂಡೋಗಿ ಎರಡ್ಚೀಲ ತುಂಬಾ ಸಂತೆ ಮಾಡ್ಕ್ಯಂಡ್ ಬರ್ಬೋದಿತ್ತು. ಈಗೆಲ್ಲ ಎಂತದಾ.. 200-300 ರುಪಾಯಿದ್ರು ಸಾಕಾಗದಿಲ್ಲ. ನೂರ್ ರುಪಾಯ್ ನೋಟ್ ಮುರ್ಸದೆ ತಡ ಕಣ, ಆಚೀಚಿಗ್ ನೋಡರೊಳಗೆ ಕೈಯಗ್ ಬರೀ ಚಿಲ್ರೆ!
ಬೇರೆದೆಲ್ಲ ಹೋಗ್ಲಲೆ, ಬೆಂಕಿ ಪಟ್ಣ ಸೈತ ಈಗ 1 ರೂಪಾಯಾಗ್ಯೋಗೈತಿ.. ಎಷ್ಟ್ ವರ್ಷದಿಂದ ಎಂಟಾಣಿ ಇದ್ದುದ್ದು.. ಆಂ..
ಮೊನ್ನಿ ನಮ್ಮ ಒಡೇರ್ ಮನೆ ಮಾಣಿ ಹೇಳ್ತುತ್ತಲ್ಲಾ.. ಅಲ್ಲಿ ಬೆಂಗ್ಳೂರಗು ಹಿಂಗೆ ಅಂತೆ ಕಣಾ.. ಯಾರ್ ಕೈಯ್ಯಗು ದುಡ್ಡೇ ಇಲ್ಲಂತೆ..
ರೇಟು ರೇಟು ಅಂದ್ರೆ ಅದಕ್ಕೇನಾರ ಲೆಕ್ಕ್ ಐತನಾ? ಹಿಂದಿನ್ ಮಂಗ್ಳಾರದ್ ಸಂತ್ಯಗೆ.. ಟೊಮ್ಯಾಟೊ ಹಣ್ಣಿಗ್ 30 ರುಪಾಯಲೆ.. ನಂಬ್ತೀಯ ಬಿಡ್ತೀಯಾ..
ಬೀಜೇಪಿ ಸರ್ಕಾರ್ಬಂತು ಇನ್ನೆಲ್ಲಾ ಸಮ ಆಗ್ತೈತಿ ಅಂತ್ ಬ್ರಾಮ್ರುಕೇರ್ಯಗೆ ಮಾತಾಡ್ಕ್ಯಂಡಿದ್ದೆ ಬಂತು.. ಇಲ್ನೋಡಿರೆ..
ಮನೆ ಮುರ್ದು ಚಪ್ರಾಗೈತಿ..
ಅಕ್ಕಿ ರೇಟಿಗ್ ನುಚ್ಚು ಸಿಗ್ದಾಂಗಾಗೈತಿ..
ಹಿಂಗೆಲ್ಲ ಆಗಿ.. ನಮ್ಮನ್ಯಗೀಗ.. ಕೂಪನ್ನಕ್ಕಿ ಬಾನಾಗೈತಿ...
_
Wednesday, December 17, 2008
Subscribe to:
Post Comments (Atom)


8 comments:
ಸರೀ ಹೇಳ್ದೆ ನೋಡು ಮಾರಾಯ,
ಈಗ ಬ್ಯಾಗಗೆ ದುಡ್ಡು ತುಂಬ್ಕ್ಯಂಡ್ ಸಂತಿಗೆ ಹೋಗಿ ಜೇಬಗೆ ತರಕಾರಿ ತಗಬರ ಕತೆ! ಅಲ್ಲಾ, ಹೀಂಗೆ ನಡದ್ರೆ ಊಟಾ ಮಾಡಿ ಬದ್ಕ ಆಟ ಆದ್ರು ಐತನಾ ಮಾರಾಯ?
ಯಾಕ್ಲಾ ಅಂಗ್ ಬಾಯ್ ಬಾಯ್ ಬಡ್ಕಂತೀಯ? ವಸಿ ತಡ್ಕ.. ನೀ ಇಲ್ ಕೂಗಾಡಿರೆ ರೇಟ್ ಕಮ್ಮಿ ಆಯ್ತದೇನ್ಲಾ? ಈಟ್ ದಿನ ನಂ ದೇಸ ಹಂಗೈತೆ, ಹೊಳ್ಯಕ್ ಹತ್ತೈತೆ ಅಂತಿದ್ರಲ್ಲ; ಸದ್ಯಕ್ಕೆ ಕರೆಂಟ್ ಇಲ್ಲ, ಇನ್ ಚುಮುಣಿ ಎಣ್ಣಿಗೂ ಕಾಸಿಲ್ದಂಗ್ ಆಕೈತಲ ಆಗ್ಲೇ ಇವ್ರಿಗೆ ಬುದ್ಧಿ ಬರದು. ಅಂದ್ಹಂಗೆ ಈ ಎಣ್ಣಿ ತುಟ್ಟಿ ಆದ್ಹಂಗಿಲ್ಲಲ... ಇದ್ದಿದ್ರಾಗ್ ಅದೊಂದ್ ಚೊಲೋ ಆತ್ ನೋಡ್ ;-)
ಅಣ್ಣಾ....
ಎಲ್ಲಾ ಕೊಷ್ಟ್ಲೀ..ಅಬಿಟ್ಟದೆ...
ನಾವು ಮಾತ್ರ ಚೀಪು ..ಅಣ್ಣಾ
ಚೀಪು...
ಎಂತದು ಪರಿಹಾರಾ..?
ಈ ಬಾಂಬ್ರು ಪಕ್ಸ...ಬರೆ ಸಮಾರಂಭ ಮಾಡ್ತೈತೆ...
ನಮ್ಮನ್ನ ನೋಡೋರು ಯಾರು..?
prakash hegde
ittigecement
ಸಂದೀಪ ಅವರೆ...
ತುಂಬ ಚೆನ್ನಾಗಿ ಬರೆದಿದ್ದೀರ. ಹಳ್ಳಿ ರೈತಾಪಿ ಜನಭಾಷೆಯ ಸೊಗಡು ಓದುತ್ತಿರುವಂತೆಯೇ ಮನಸ್ಸನ್ನು ಮುದಗೊಳಿಸುತ್ತದೆ. ಸಕಾಲಿಕ ಬರಹ. ಇವತ್ತಿನ ದಿನಗಳಲ್ಲಿ ಇಂಥಹ ಬರಹಗಳ ಅವಷ್ಯಕತೆ ಇತ್ತು. ಬರೆಯುತ್ತಿರಿ, ಓದುತ್ತಲಿರುತ್ತೇವೆ.
ಸಣ್ಣ ಒಡೇರು ಸೊರಬದಾಕಿಂದನೆ ಅಕ್ಕಿ ತಕಂಡು ಹೋಗದಂತನ ಗಣಪ್ಯ!, ಒಡೇರ ಮನೆ ಮಾಣಿ ಎಲ್ಲ ಯವಾರನೂ ಪ್ಲಾಸ್ಟಿಕ್ ಕಾರಡನಾಗೆ ಮಾಡ್ತೈತಂತೋ, ಅದೆಂತದೋ ಶಿಟಿ ಬ್ಯಾಂಕು ಅಂತಂತಪ ಅಂಗ್ಡಿಗೆ ಹೋದ್ರಾತಂತೆ ಕಾರಡನ್ನ ಸುಗುದ್ರೆ ಆಗೋತಂತಲೆ! ಆಮ್ಯಾಲೆ ಅಂಗ್ಡಿಯವ ಹಾವ ನೈಶ್ ಇ..ಕೆಂಡ್ ಸಾರು ಅಂತನು ಎಂತದೋ ಹೇಳ್ತಾರಂತ್ಲ, ಮುಂದಿನ ಸಲ ನಮ್ಮ ಬಂಗಾರಿ ಭಾವನ ಮಕ್ಳಿಗೆ ಓಟು ಹಾಕಂಗ ಆಗ್ಬಾಕ ಇಲ್ದೇ ಹೋದ್ರೆ ದೇಶ ಹಿಂಗೇ ಇರ್ತೈತಿ, ಸೊರಬದವ್ರು "ಹುದ್ದಾರ ಹಾಗಕಿಲ್ಲ" ಗೊತಾತ!
ಈಗ ಇಷ್ಟಾದರೂ ಸಿಗ್ತಾ ಇದೆ.
ನಾಳೆ ಏನಾಗುತ್ತೊ?
sooper dosta
@ಚಿತ್ರಾ,
ಎಂತದೇನಪ..
@ಹರೀಶ,
:-)
@prakash hegde,
ನಮ್ಗ್ ನಾವು.. ಗ್ವಾಡಿಗ್ ಮಣ್ಣು!
@ಶಾಂತಲಾ,
ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು:-)
@ಮನಸ್ವಿ,
ಹಹ್ಹಹ..
@sunaath,
ನಾಳೆನ ಕತೆ ನಾರಾಯಣನೇ ಬಲ್ಲ!
@ರಾಘವೇಂದ್ರ ಹೆಗಡೆ,
ಥ್ಯಾಂಕ್ಯೂ ಗೆಳ್ಯ..
@All,
ಓದಿ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.
Post a Comment