Monday, December 29, 2008

ಬಂದಿಳಿದಿದ್ದೇನೆ

ಒಂದು ವಾರದ ಸುಧೀರ್ಘ ರಜೆಯನ್ನು ಮುಗಿಸಿ ಬೆಂಗಳೂರಿಗೆ ಮರಳಿದ್ದೇನೆ. 21ರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟವನು ನಿನ್ನೆ(28) ಮಧ್ಯಾಹ್ನ ಬೆಂಗಳೂರಿಗೆ ಬಂದೆ.

ಪ್ರಯಾಣದ ಕಿರು ಸಾರಾಂಶ:
ದಿನಗಳು: ೮
ಸುತ್ತಿದ ದೂರ: ೧೩೬೯ ಕಿ.ಮೀ.
ಸುಟ್ಟ ಪೆಟ್ರೋಲು: ೮೩ ಲೀ.
ಗರಿಷ್ಠ ವೇಗ: ೧೭೦ ಕಿ.ಮೀ./ಗಂ

ಬೆಂಗಳೂರೇನೂ ಬಹಳ ಬದಲಾಗದಿದ್ದರೂ, ಮಾಡಬೇಕಾದ ಕೆಲಸಗಳದೇ ಸುಮಾರು ದೊಡ್ಡ ರಾಶಿಯಾಗಿದೆ.
ಆರ್ಕುಟ್’ನ ಪೆಂಡಿಂಗ್ ರಿಕ್ವೆಸ್ಟುಗಳು,
ಓದಬೇಕಿರುವ ನೂರಾರು ಈಮೇಲುಗಳು,
ಫೀಡುಗಳೋ., ಸಹಸ್ರಾರು..

ಸಮಯ ಸಿಕ್ಕಾಗ ಫೋಟೋಗಳು ಹಾಗು ಹಂಚಿಕೊಳ್ಳಬಹುದಾದ ಇತರ ಅನುಭವಗಳನ್ನು ಹಂಚಿಕೊಳ್ಳುವ ಆಸೆಯಿದೆ.

9 comments:

ಸಿಮೆಂಟು ಮರಳಿನ ಮಧ್ಯೆ said...

WELLCOME TO TRAAFIC CITY...!
PLEASE WRITE ABOUT YOUR JOURNEY...EXPERIENCE.. ETC..
THANK YOU...

sunaath said...

ನಾವೂ ಸಹ ನಿಮ್ಮ ಪ್ರಯಾಣದ ವಿವರಗಳನ್ನು ಓದಲು ಉತ್ಸುಕರಾಗಿದ್ದೇವೆ.

Harish - ಹರೀಶ said...

ಗಾಡಿ ತಗಂಡು ಹೋಗಿದ್ಯಾ??????

>> ಸುಟ್ಟ ಪೆಟ್ರೋಲು: ೮೩ ಲೀ.

ಹೋಪ್ಲೆಸ್ ಫೆಲೋ... ಅದರಲ್ಲಿ ಒಂದು ಬಡ ಕುಟುಂಬ ೧೬೬ ದಿನ ಊಟ ಮಾಡ್ತಿತ್ತು... ;-)

Harish - ಹರೀಶ said...

ಪೆಟ್ರೋಲ್ ಅಲ್ಲಿ ಅಲ್ದಪಾ ಮತ್ತೆ.. ಅದರ equivalent ದುಡ್ಡಿನಲ್ಲಿ..

ಚಿತ್ರಾ said...

ಪೆಂಡಿಂಗ್ ಕೆಲಸನೆಲ್ಲ ಬೇಗ ಮುಗಿಸಿ ಪ್ರವಾಸದ ಬಗ್ಗೆ ಬರಿ ಮಾರಾಯ.
ನಂಗ ಕಾಯ್ತ ಇದ್ಯ .

Anonymous said...

ಸಂದೀಪ,ಈ ಬರಹದ ಉದ್ದೇಶ ನನಗಂತೂ ಅರ್ಥವಾಯಿತು.:) ಸುಮ್ನೆ ಪಾಪ ಜನ ನೀನು ಹೋಗ್ ಬಂದ ಅನುಭವ ಬರೀತಿ ಅಂತೆಲ್ಲ ಕಾಯ್ತಾ ಕೂರ್ತಾರೆ!:) ಆ ೧೭೦ ಕಿ.ಮೀ ಅಂತ ಬರ್ದಿದ್ದು ಯಾಕೆ ಅಂತ್ಲೂ ಗೊತ್ತು,

ಈ ಪೋಸ್ಟು ಉದಾಹರಣೆ- http://snhalli.blogspot.com/2008/03/blog-post.html

shreenidhi.

Alpazna said...

@ಸಿಮೆಂಟು,
ಕಾಮೆಂಟಿಗೆ ಧನ್ಯವಾದಗಳು. ಸಾದ್ಯವಾದಷ್ಟು ಬೇಗ ಬರೆಯುತ್ತೇನೆ.

@sunaath,
ನಿಮ್ಮ ಉತ್ಸುಕತೆಯನ್ನು ತಿಳಿದು ಸಂತೋಷವಾಗಿದೆ.

@ಹರೀಶ,
ಹೌದು.. ೧೬೬ ಎಲ್ಲಿಂದ ಬಂತು?!

@ಚಿತ್ರಾ,
ಸಾದ್ಯವಾದಷ್ಟು ಬೇಗ..

@shreenidhi,
ಸೈಯ್ಯಪ... ೧೭೦ಕಿ.ಮೀ. ಎಂತಕೆ ಹಂಗರೆ ಹೇಳು!

Harish - ಹರೀಶ said...

83x2 = 166

Alpazna said...

@harish,
oh, Okay!