ಮೊನ್ನೆ ೨೧ರ ರಾತ್ರಿ ಸಿರ್ಸಿ ಜಾತ್ರೆಯಲ್ಲಿ ಹುಡುಗಿಯೊಬ್ಬಳನ್ನು ನೋಡಿ ನಾನು ಏನೋ ಅಂದಿದ್ದೆ. ಮರುದಿನ ಮನೆಗೆ ಬಂದ ಮೇಲೂ ಅದನ್ನೇ ಯೋಚಿಸುತ್ತಿದ್ದೆ. ನಾನು ಚಿಕ್ಕವನಿದ್ದಾಗಿಂದ ಹಿಡಿದು ಇಲ್ಲಿಯವರೆಗೆ ಹುಡುಗಿಯರ ಬಗ್ಗೆ ಅದೆಷ್ಟೋ ವರ್ಣನೆಗಳನ್ನು ಕೇಳಿಬಿಟ್ಟಿದ್ದೇನೆ. ಅವುಗಳಲ್ಲಿ ಕೆಲವೊಂದು ಸ್ವಲ್ಪ ಅತಿಯೆನಿಸುವಂತದ್ದೂ, ಇನ್ನು ಕೆಲವು ಮತ್ತೊಬ್ಬರ ಮನಸ್ಸಿಗೆ ನೋವನ್ನುಂಟುಮಾಡುವಂತದ್ದು ಇರುವುದು ಆಶ್ಚರ್ಯವೇನೂ ಅಲ್ಲ.
ಇವುಗಳಲ್ಲಿ ಕೆಲವೊಂದನ್ನು ಯಾರು ಹೇಳಿದ್ದೆಂದು ಗೊತ್ತಿದ್ದರೂ, ದಾಖಲಿಸುತ್ತಿಲ್ಲ!
ಹೆಚ್ಚಿನವು ಹೆಣ್ಣು ನೋಡಲು ಹೋದವರ ಬಾಯಿಂದ ಉದುರಿದ ಉದ್ಗಾರಗಳು
೧. ಹಲ್ ಮೇಲ್ ಕಾಲಿಟ್ರೆ ಜಾರ್ತು!!
೨. ಫೋಟೋಕ್ಕೆ ಹಳ್ ಹಾಕ್ಸಕೆ ಬರದಿಲ್ಲೆ!!
೩. ಹಿಡಿಕಡ್ಡಿಗೆ ಸೀರೆ ಉಡ್ಸಿದಾಂಗಿದ್ದು!!
೪. ಕೈ ತೊಕ್ಕಂಡ್ ಮುಟ್ಟವು, ಹಾಂಗಿದ್ದು!
೫. ಮುಟ್ಟಿರೆ ಕೈ ತೊಕ್ಕಳವು!!
೬. ತಲೆ ದಿಂಬಿಗೂ ಬರದಿಲ್ಲೆ!!
೭. ನ ಭೂತೋ ನ ಭವಿಷ್ಯತಿ..
ತೀರಾ ಮೊನ್ಮೊನ್ನೆ ಕೇಳಿದ್ದು...
೮. ಕೂಸಿನ್ ಫೋಟೊ ತೆಗದ್ರೆ X-Ray ಬರ್ತು!
Wednesday, March 26, 2008
Monday, March 24, 2008
ಬಂದು ತಲುಪಿದ್ದೇನೆ
ನಾಲ್ಕು ದಿನಗಳ ಹಿಂದೆ ಬೈಕಿನಲ್ಲಿ ಬೆಂಗಳೂರಿಂದ ಹೊರಟವರು ಸಾವಿರ ಕಿ.ಮಿ. ಸುತ್ತಿ ನಿನ್ನೆ ರಾತ್ರಿ ಸುರಕ್ಷಿತವಾಗಿ ಬಂದಿದ್ದಾಗಿದೆ.
ಜಡಿಮಳೆ, ಉರಿ ಬಿಸಿಲು, ಬೆಳದಿಂಗಳು ಬೆರೆತ ತಂಗಾಳಿ ಎಲ್ಲಾ ಈ ನಾಲ್ಕು ದಿನಗಳಲ್ಲಿ ಅನುಭವಿಸಿದ್ದೇವೆ. ಜೊತೆಗೆ ಸಿರ್ಸಿ ಜಾತ್ರೆಯೂ, ಹುಟ್ಟಿದ ದಿನವೂ ಎಲ್ಲಾ ಒಟ್ಟೊಟ್ಟಿಗೇ ಬಂದು ಖುಷಿ ಸ್ವಲ್ಪ ಜಾಸ್ತಿಯಾಗಿದ್ದು ಸುಳ್ಳಲ್ಲ.
?-"ಯಾವಾಗ್ ಬಂದಿ? journey ಹೆಂಗಿತ್ತು?"
- "ನಿನ್ನೆ ರಾತ್ರಿ ಬಂದ್ಯ, ಅದ್ಭುತ!"
?-"ಹುಶಾರಿದ್ಯ? ಸುಸ್ತಾಯ್ದ?"
-"ಅರಾಮಿದ್ದಿ, ಸ್ವಲ್ಪ ಸುಸ್ತಿದ್ದು ಅಷ್ಟೆ"
? -"ಜಾತ್ರೆ ಚೆನಾಗಾತ? ಮಳ್ಯಡ!"
- "ಮಳೆ ಇತ್ತು, ಆದ್ರು ಜಾತ್ರೆ ಸಕ್ಕತ್ ಮಜ ಬಂತು"
?-"ಮೆಸ್ಸೇಜ್ ಮಾಡ್ಲೇ ಇಲ್ಲೆ!?"
- "ನೆಟ್'ವರ್ಕ್ ಇರ್ಲೆ"
?- "ನಿನ್ನೆ ಫೋನ್ ಮಾಡಿರು ಎತ್ಲೆ?"
- "sorry, ಡ್ರೈವ್ ಮಾಡ್ತಾ ಇದ್ದಿದ್ದಿ"
?- "ದಾವಣ್ಗೆರೆಲ್ಲಿ ನಿಸ್ಲಿದ್ರ?"
- "ಹೌದು, ನಿಲ್ಸಿ ನಾಕ್ ನಾಕ್ ಬೆಣ್ಣೆ ದೋಸೆ ಹೊಡ್ಕಂಡ್ ಬಂದ್ಯ"
?- "ಎಲ್ಲೊ ಮತ್ತೆ, ಫೋಟೊ ಕತೆ ಎಲ್ಲಾ?"
- "ಅವಸ್ರ ಮಾಡ್ಬೇಡ, ಎಲ್ಲಾ ಬರುತ್ತೆ. ಒಂದೆರ್ಡು ದಿನ ಕಾಯಿ"
ಇವಿಷ್ಟು ನಿನ್ನೆ ರಾತ್ರಿಯಿಂದ ಇಲ್ಲಿಯವರೆಗಿನ FAQಗಳು, ಉತ್ತರ ಸಮೇತ!
ಜಡಿಮಳೆ, ಉರಿ ಬಿಸಿಲು, ಬೆಳದಿಂಗಳು ಬೆರೆತ ತಂಗಾಳಿ ಎಲ್ಲಾ ಈ ನಾಲ್ಕು ದಿನಗಳಲ್ಲಿ ಅನುಭವಿಸಿದ್ದೇವೆ. ಜೊತೆಗೆ ಸಿರ್ಸಿ ಜಾತ್ರೆಯೂ, ಹುಟ್ಟಿದ ದಿನವೂ ಎಲ್ಲಾ ಒಟ್ಟೊಟ್ಟಿಗೇ ಬಂದು ಖುಷಿ ಸ್ವಲ್ಪ ಜಾಸ್ತಿಯಾಗಿದ್ದು ಸುಳ್ಳಲ್ಲ.
?-"ಯಾವಾಗ್ ಬಂದಿ? journey ಹೆಂಗಿತ್ತು?"
- "ನಿನ್ನೆ ರಾತ್ರಿ ಬಂದ್ಯ, ಅದ್ಭುತ!"
?-"ಹುಶಾರಿದ್ಯ? ಸುಸ್ತಾಯ್ದ?"
-"ಅರಾಮಿದ್ದಿ, ಸ್ವಲ್ಪ ಸುಸ್ತಿದ್ದು ಅಷ್ಟೆ"
? -"ಜಾತ್ರೆ ಚೆನಾಗಾತ? ಮಳ್ಯಡ!"
- "ಮಳೆ ಇತ್ತು, ಆದ್ರು ಜಾತ್ರೆ ಸಕ್ಕತ್ ಮಜ ಬಂತು"
?-"ಮೆಸ್ಸೇಜ್ ಮಾಡ್ಲೇ ಇಲ್ಲೆ!?"
- "ನೆಟ್'ವರ್ಕ್ ಇರ್ಲೆ"
?- "ನಿನ್ನೆ ಫೋನ್ ಮಾಡಿರು ಎತ್ಲೆ?"
- "sorry, ಡ್ರೈವ್ ಮಾಡ್ತಾ ಇದ್ದಿದ್ದಿ"
?- "ದಾವಣ್ಗೆರೆಲ್ಲಿ ನಿಸ್ಲಿದ್ರ?"
- "ಹೌದು, ನಿಲ್ಸಿ ನಾಕ್ ನಾಕ್ ಬೆಣ್ಣೆ ದೋಸೆ ಹೊಡ್ಕಂಡ್ ಬಂದ್ಯ"
?- "ಎಲ್ಲೊ ಮತ್ತೆ, ಫೋಟೊ ಕತೆ ಎಲ್ಲಾ?"
- "ಅವಸ್ರ ಮಾಡ್ಬೇಡ, ಎಲ್ಲಾ ಬರುತ್ತೆ. ಒಂದೆರ್ಡು ದಿನ ಕಾಯಿ"
ಇವಿಷ್ಟು ನಿನ್ನೆ ರಾತ್ರಿಯಿಂದ ಇಲ್ಲಿಯವರೆಗಿನ FAQಗಳು, ಉತ್ತರ ಸಮೇತ!
Thursday, March 06, 2008
13
ಸುಶ್ರುತ ವಿನಾಯಕ ಹಾಗು ನಾನು
ಆಡುತ್ತಿದ್ದೆವು ಬೆಸ್ಟ್ ಆಫ್ ತರ್ಟೀನು
ನನಗೆ ಆಗ ನಿದ್ರೆ ಬಂದಿತ್ತು
ಅಥವಾ ಹಾಗೆ ಅನ್ನಿಸುತ್ತಿತ್ತು
ಆರ್‍ನೆ ಆಟ್ದಲ್ಲಿ ಸುಶಿ ಜೋಕರ್ ಬಿಟ್ಟಿದ್ದ
ನಾ ಡಿಪ್ಪಲ್ಲಿ ಇಸ್ಪೀಟ್ ಹತ್ ಜಗ್ಗಿದ್ದೆ
"ಅರೆ ಯಾರೋ ಜೋಕರ್ ಬಿಟ್ಟಿದ್ದ!" ಅವ ನಕ್ಕ
ಎಲ್ಲ ಬಲ್ಲವನಂತೆ ನಾನೂ ಗಂಭೀರವಾಗಿ ನಕ್ಕೆ
ನನಗೆ ಆಗ ನಿದ್ರೆ ಬಂದಿತ್ತು
ಅಥವಾ ಹಾಗೆ ಅನ್ನಿಸುತ್ತಿತ್ತು
ಮಲಗಿದ್ದ ಫೋನಿನಲ್ಲಿ ಚನ್ನಪ್ಪ ಚೆನ್ನಗೌಡ
ನಾ ಕನ್ಫ್ಯೂಸಾಗಿ "ಎಕ್ಕಕ್ ಒಂದ್ ಹುಂಡಾ?"
ಸುಶ್ರುತ ಅದ್ಯಾವಾಗಲೋ ಫೋನಿಗೆ ಜಾರಿದ್ದ
ವಿನಾಯಕಗಿನ್ನೂ ನಕ್ಕೇ ಮುಗಿದಿರಲಿಲ್ಲ
ನನಗೆ ಆಗ ನಿದ್ರೆ ಬಂದಿತ್ತು
ಅಥವಾ ಹಾಗೆ ಅನ್ನಿಸುತ್ತಿತ್ತು
ಅವರಿಬ್ಬರಿಗೆ ಅರ್ಧರ್ದ ಜಾಗರಣೆಯಾಗಿತ್ತು
ನನಗೇನೂ ಲಾಸಾಗಿರಲಿಲ್ಲ, ಯಾಕೆಂದರೆ
ನಾನಾಗ ನಿದ್ರೆ ಮಾಡುತ್ತಿದ್ದೆ
ಅಥವಾ ಹಾಗೆ ಅಂದುಕೊಂಡಿದ್ದೆ!
ಆಡುತ್ತಿದ್ದೆವು ಬೆಸ್ಟ್ ಆಫ್ ತರ್ಟೀನು
ನನಗೆ ಆಗ ನಿದ್ರೆ ಬಂದಿತ್ತು
ಅಥವಾ ಹಾಗೆ ಅನ್ನಿಸುತ್ತಿತ್ತು
ಆರ್‍ನೆ ಆಟ್ದಲ್ಲಿ ಸುಶಿ ಜೋಕರ್ ಬಿಟ್ಟಿದ್ದ
ನಾ ಡಿಪ್ಪಲ್ಲಿ ಇಸ್ಪೀಟ್ ಹತ್ ಜಗ್ಗಿದ್ದೆ
"ಅರೆ ಯಾರೋ ಜೋಕರ್ ಬಿಟ್ಟಿದ್ದ!" ಅವ ನಕ್ಕ
ಎಲ್ಲ ಬಲ್ಲವನಂತೆ ನಾನೂ ಗಂಭೀರವಾಗಿ ನಕ್ಕೆ
ನನಗೆ ಆಗ ನಿದ್ರೆ ಬಂದಿತ್ತು
ಅಥವಾ ಹಾಗೆ ಅನ್ನಿಸುತ್ತಿತ್ತು
ಮಲಗಿದ್ದ ಫೋನಿನಲ್ಲಿ ಚನ್ನಪ್ಪ ಚೆನ್ನಗೌಡ
ನಾ ಕನ್ಫ್ಯೂಸಾಗಿ "ಎಕ್ಕಕ್ ಒಂದ್ ಹುಂಡಾ?"
ಸುಶ್ರುತ ಅದ್ಯಾವಾಗಲೋ ಫೋನಿಗೆ ಜಾರಿದ್ದ
ವಿನಾಯಕಗಿನ್ನೂ ನಕ್ಕೇ ಮುಗಿದಿರಲಿಲ್ಲ
ನನಗೆ ಆಗ ನಿದ್ರೆ ಬಂದಿತ್ತು
ಅಥವಾ ಹಾಗೆ ಅನ್ನಿಸುತ್ತಿತ್ತು
ಅವರಿಬ್ಬರಿಗೆ ಅರ್ಧರ್ದ ಜಾಗರಣೆಯಾಗಿತ್ತು
ನನಗೇನೂ ಲಾಸಾಗಿರಲಿಲ್ಲ, ಯಾಕೆಂದರೆ
ನಾನಾಗ ನಿದ್ರೆ ಮಾಡುತ್ತಿದ್ದೆ
ಅಥವಾ ಹಾಗೆ ಅಂದುಕೊಂಡಿದ್ದೆ!
Subscribe to:
Posts (Atom)

