Wednesday, December 31, 2008

2008

ಇವತ್ತು Dec 31. 2008ನೇ ಇಸವಿಯ ಕೊನೆಯ ದಿನ. ಇನ್ನು ಕೆಲವೇ ತಾಸುಗಳಲ್ಲಿ 2009 ಬಂದೆರಗುತ್ತದೆ. ಎಲ್ಲರಿದ್ದೂ ಒಂದೇ ಪ್ರಶ್ನೆ, "ರಾತ್ರಿ ಆಚರಣೆ ಎಲ್ಲಿ?"

ಎಲ್ಲರಿಗೂ ಏನೊ ಒಂತರಾ ಖುಶಿ! ಯಾವುದೋ ಹೊಸನದಿಗೆ ದುಮುಕ ಹೊರಟವರಂತೆ ಸಂಭ್ರಮ, ಏನೊ ಹೊಸ ಉತ್ಸಾಹ, ಸ್ವಲ್ಪ ಅನಿಶ್ಚಿತತೆ. ಬಾಹ್ಯ ಜಗತ್ತಿನ ಬೆಳವಣಿಗೆಗಳು, ಮನಸ್ಸಿನೊಳಗಿನ ಯುದ್ಧಗಳು, ಕಾಯುವಿಕೆಯಲ್ಲೇ ಕಂಡುಬಿಡುವ ಸಂತೋಷ. ಎಲ್ಲರಂತಿರಬೇಕೆಂಬ ಒತ್ತಡ, ಎಲ್ಲರಂತಿದ್ದುಕೊಂಡೆ ಬೇರೆಯವನಾಗಬೇಕೆಂಬ ಹಂಬಲ. ಒಬ್ಬೊಬ್ಬರೊಳಗೂ ನೂರೆಂಟು ಭಾವನೆಗಳು, ಬಳಲಿಕೆಗಳು.

ಇವೆಲ್ಲವುಗಳ ನಡುವೆಯೇ ಹೀಗೆ ೩೧ರ ರಾತ್ರಿ ಕುಳಿತು ಈ ವರ್ಷದ ’ಆದಹೋದ’ಗಳ ಬಗ್ಗೆ ಗಂಬೀರಾಲೋಚನೆ ನಡೆಸುವುದು ನನ್ನದೊಂದು ರೂಢಿ. ಆದರೆ ಇಂದೇಕೋ ಮಧ್ಯಾಹ್ನವೇ ಈ ವಿಚಾರ ತಲೆಗೆ ಹೊಕ್ಕಿದೆ. ಹೀರುತ್ತಿರುವ (ಮರ್)ಕಣ್ಣಿನ್’ದೇವನ್ ಟೀ ಯ ಮಹಾತ್ಮೆಯಿದ್ದರೂ ಆಶ್ಚರ್ಯವಿಲ್ಲ.

ಪುಸ್ತಕಗಳು:
2008ರಲ್ಲಿ ಪುಸ್ತಕವನ್ನು ಓದಿದ್ದು ತುಂಬಾ ಕಡಿಮೆಯೆಂದೇ ಹೇಳಬೇಕು. ಅದರಲ್ಲೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಿಕ್ಕಾಪಟ್ಟೆ ಕಡಿಮೆ. ಇರ್ಲಿ, ಇಲ್ಲಿದೆ ಓದಿದ ಪುಸ್ತಕಗಳ ಪಟ್ಟಿ:
  1. ನಮ್ಮೊಳಗಿನ ಬ್ರಹ್ಮಾಂಡ - ನಾಗೇಶ ಹೆಗಡೆ, ಬಕ್ಕೆಮನೆ
  2. ವ್ಯಾಸರಾಯ ಬಲ್ಲಾಳರ ಸಮಗ್ರ ಕತೆಗಳು
  3. Tara's Child - Susan Kearney
  4. ಗರುಡಗಂಬದ ದಾಸಯ್ಯ - ಗೊರೂರು ರಾಮಸ್ವಾಮಿ ಐಯ್ಯಂಗಾರ್
  5. Fortune's Formula - William Poundstone
  6. Where Eagles Dare - Alistair MacLean
ಚಲನಚಿತ್ರಗಳು:
ಈ ಜಗತ್ತಿಗೆ ನಾನು ಹೊಸಬ. ನೋಡಿದ್ದು ಕಡಿಮೆ, ಆದರೆ ತುಂಬಾ ಕಲೆಹಾಕಿದ್ದೇನೆ.
ಇವಿಷ್ಟು ೨೦೦೮ರಲ್ಲಿ ನೋಡಿದ್ದು:
  1. Jab We Met
  2. Dor
  3. 12 Angry Men
  4. Chak De! India
  5. Michael Clayton
  6. Anupama
  7. 21
  8. ಎದುರುಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ
  9. A Wednesday
  10. Sangama
  11. WALL-E
  12. Kung Fu Panda
  13. Navagraha
  14. Finding Nemo

ಇತರೆ:
ಭೇಟಿಕೊಟ್ಟ ಸ್ಥಳಗಳು ಮತ್ತು ನೆನಪಿನಲ್ಲುಳಿಯುವ ಇನ್ನಿತರೆ...
  1. La Centre(Map, Website) - Black Jack, Poker
  2. Mounthood, OR (Website, My Photos) ಫೆಬ್ರವರಿ ೧೭
  3. ಬುಲೆಟ್ಟಿನಲ್ಲಿ ಬೆಂಗಳೂರು-ನಡಹಳ್ಳಿ-ಬೆಂಗಳೂರು, ಮಾರ್ಚ್ ೨೦, ೨೧, ೨೨, ೨೩
  4. ಪ್ಯಾರಾಸೈಲಿಂಗ್, ಮೇ ೧೭ & ಸೆಪ್ಟೆಂಬರ್ ೨೮
  5. ಪ್ರಭಾಳ ವಿವಾಹ, ಮೇ ೨
  6. ಕಾರು ಖರೀದಿ, ಮೇ ೨
  7. ಮುಳ್ಳಯ್ಯನ ಗಿರಿ, ಬಾಬಾಬುಡನ್ ಗಿರಿ, ಮಾಣಿಕ್ಯಧಾರ ಜಲಪಾತ, ಚಿಕ್ಕಮಗಳೂರು ಜುಲೈ ೨೦
  8. ಕೇರಳ ಪ್ರವಾಸ, ಆಗಸ್ಟ್ ೧೫, ೧೬, ೧೭
  9. ಚಿಕ್ಕಪ್ಪನ ಮರಣ, ಅಕ್ಟೋಬರ್ ೨೬
  10. ದೀಪೋತ್ಸವ (Photos), ನವೆಂಬರ್ ೧೫
  11. ಕಾರಿನಲ್ಲಿ ಊರಕಡೆ ಒಂದು ವಾರ, ತೀರ ಮೊನ್ಮೊನ್ನೆ(ಡಿಸೆಂಬರ್ ೨೧-೨೮)
  12. ಶೇರು ಮಾರುಕಟ್ಟೆಯಲ್ಲಿ ಕೊಚ್ಚಿಹೋದ ಹಣ (ಬೆರಳು ಸವೆಸಿ ದುಡಿದದ್ದು!)
ನಾಳೆ ಬೆಳಗಾದರೆ ಎದುರಾಗುವ ಪ್ರಶ್ನೆ
"ನಿಂದು New Year Resolution ಏನು..?"
ನಿಮ್ದೆಲ್ಲಾ ಏನೇನಿದ್ಯೊ ಗೊತ್ತಿಲ್ಲ.. ನಂದಂತು ತೀರ್ಮಾನ ಆಗೋಗಿದೆ..
೨೦೦೯ಕ್ಕೆ resolutionಉ..

"1680 x 1050"

ಈ ಬ್ಲಾಗಿನ ಎಲ್ಲ ಓದುಗರಿಗೂ, ಸಹಬ್ಲಾಗಿಗರಿಗೂ ಮತ್ತು ಅವರ ಬ್ಲಾಗಿನ ಓದುಗರಿಗೂ ಹೊಸ ವರ್ಷದ ಶುಭಾಷಯಗಳು.

Monday, December 29, 2008

ಬಂದಿಳಿದಿದ್ದೇನೆ

ಒಂದು ವಾರದ ಸುಧೀರ್ಘ ರಜೆಯನ್ನು ಮುಗಿಸಿ ಬೆಂಗಳೂರಿಗೆ ಮರಳಿದ್ದೇನೆ. 21ರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟವನು ನಿನ್ನೆ(28) ಮಧ್ಯಾಹ್ನ ಬೆಂಗಳೂರಿಗೆ ಬಂದೆ.

ಪ್ರಯಾಣದ ಕಿರು ಸಾರಾಂಶ:
ದಿನಗಳು: ೮
ಸುತ್ತಿದ ದೂರ: ೧೩೬೯ ಕಿ.ಮೀ.
ಸುಟ್ಟ ಪೆಟ್ರೋಲು: ೮೩ ಲೀ.
ಗರಿಷ್ಠ ವೇಗ: ೧೭೦ ಕಿ.ಮೀ./ಗಂ

ಬೆಂಗಳೂರೇನೂ ಬಹಳ ಬದಲಾಗದಿದ್ದರೂ, ಮಾಡಬೇಕಾದ ಕೆಲಸಗಳದೇ ಸುಮಾರು ದೊಡ್ಡ ರಾಶಿಯಾಗಿದೆ.
ಆರ್ಕುಟ್’ನ ಪೆಂಡಿಂಗ್ ರಿಕ್ವೆಸ್ಟುಗಳು,
ಓದಬೇಕಿರುವ ನೂರಾರು ಈಮೇಲುಗಳು,
ಫೀಡುಗಳೋ., ಸಹಸ್ರಾರು..

ಸಮಯ ಸಿಕ್ಕಾಗ ಫೋಟೋಗಳು ಹಾಗು ಹಂಚಿಕೊಳ್ಳಬಹುದಾದ ಇತರ ಅನುಭವಗಳನ್ನು ಹಂಚಿಕೊಳ್ಳುವ ಆಸೆಯಿದೆ.

Wednesday, December 17, 2008

ಕೂಪನ್ನಕ್ಕಿ ಬಾನ

ಇಲ್ಲ, ಇದಾಗದಿಲ್ಲ. ಹಿಂಗೇ ಆದ್ರೆ ಮುಂದೆಂಗೇನ ಮಾರಾಯ.. ಅಲ್ಲ ನೋಡು, ಅದು ಇದು ಅಂತಿಲ್ಲ. ಎಲ್ಲಾ ಸಾಮಾನಿನ್ ರೇಟು ಹಿಂಗ್ ಜಾಸ್ತಿ ಆಗಕಿಡುದ್ರೆ ನಮ್ಮಂತವ್ರು ಸಂಸಾರ ಮಾಡದ್ಹೆಂಗೆ ಅಂತ..

ಮೊನ್ನ್ ಮೊನ್ನಿನ್’ವರಿಗು ಒಂದ್ ನೂರ್ ರುಪಾಯ್ ಹಿಡ್ಕಂಡೋಗಿ ಎರಡ್ಚೀಲ ತುಂಬಾ ಸಂತೆ ಮಾಡ್ಕ್ಯಂಡ್ ಬರ್ಬೋದಿತ್ತು. ಈಗೆಲ್ಲ ಎಂತದಾ.. 200-300 ರುಪಾಯಿದ್ರು ಸಾಕಾಗದಿಲ್ಲ. ನೂರ್ ರುಪಾಯ್ ನೋಟ್ ಮುರ್ಸದೆ ತಡ ಕಣ, ಆಚೀಚಿಗ್ ನೋಡರೊಳಗೆ ಕೈಯಗ್ ಬರೀ ಚಿಲ್ರೆ!

ಬೇರೆದೆಲ್ಲ ಹೋಗ್ಲಲೆ, ಬೆಂಕಿ ಪಟ್ಣ ಸೈತ ಈಗ 1 ರೂಪಾಯಾಗ್ಯೋಗೈತಿ.. ಎಷ್ಟ್ ವರ್ಷದಿಂದ ಎಂಟಾಣಿ ಇದ್ದುದ್ದು.. ಆಂ..
ಮೊನ್ನಿ ನಮ್ಮ ಒಡೇರ್ ಮನೆ ಮಾಣಿ ಹೇಳ್ತುತ್ತಲ್ಲಾ.. ಅಲ್ಲಿ ಬೆಂಗ್ಳೂರಗು ಹಿಂಗೆ ಅಂತೆ ಕಣಾ.. ಯಾರ್ ಕೈಯ್ಯಗು ದುಡ್ಡೇ ಇಲ್ಲಂತೆ..

ರೇಟು ರೇಟು ಅಂದ್ರೆ ಅದಕ್ಕೇನಾರ ಲೆಕ್ಕ್ ಐತನಾ? ಹಿಂದಿನ್ ಮಂಗ್ಳಾರದ್ ಸಂತ್ಯಗೆ.. ಟೊಮ್ಯಾಟೊ ಹಣ್ಣಿಗ್ 30 ರುಪಾಯಲೆ.. ನಂಬ್ತೀಯ ಬಿಡ್ತೀಯಾ..

ಬೀಜೇಪಿ ಸರ್ಕಾರ್ಬಂತು ಇನ್ನೆಲ್ಲಾ ಸಮ ಆಗ್ತೈತಿ ಅಂತ್ ಬ್ರಾಮ್ರುಕೇರ್ಯಗೆ ಮಾತಾಡ್ಕ್ಯಂಡಿದ್ದೆ ಬಂತು.. ಇಲ್ನೋಡಿರೆ..
ಮನೆ ಮುರ್ದು ಚಪ್ರಾಗೈತಿ..
ಅಕ್ಕಿ ರೇಟಿಗ್ ನುಚ್ಚು ಸಿಗ್ದಾಂಗಾಗೈತಿ..

ಹಿಂಗೆಲ್ಲ ಆಗಿ.. ನಮ್ಮನ್ಯಗೀಗ..
ಕೂಪನ್ನಕ್ಕಿ ಬಾನಾಗೈತಿ...
_

Wednesday, December 03, 2008

ನಾನೂ ಸಹ!

ಬ್ಲಾಗಿನ ಹಣೆಗೆ ಕಪ್ಪು ಬಣ್ಣ ಬಳಿದು ಹೇಳುತ್ತಿದ್ದೇನೆ:
ಹೀಗ್ಯಾಕೆ ಮಾಡಬಾರದು ? � ನೀಲಾಂಜಲ
ತುಂತುರು ಹನಿಗಳು...: ನಾನೂ ಜೊತೆಗಿದ್ದೇನೆ.
ಮತ್ತು ಇನ್ನಿತರರ ಜೊತೆಗೆ ನಾನೂ ಇದ್ದೇನೆ.