Tuesday, January 13, 2009

ದಂಡಾವತಿ ಅಣೆಕಟ್ಟು ಯೋಜನೆ

ನೀವು ಪ್ರತಿನಿತ್ಯ ವೃತ್ತ ಪತ್ರಿಕೆಗಳನ್ನು ಓದುವವರಾಗಿದ್ದರೆ, ಅಥವಾ ದೂರದರ್ಶನದಲ್ಲಿ ಪ್ರಸಾರವಾಗುವ ವಾರ್ತೆಯನ್ನು ನೋಡುವವರಾಗಿದ್ದರೆ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ದಂಡಾವತಿ ಅಣೆಕಟ್ಟಿನ ಬಗ್ಗೆ ಇಷ್ಟರಲ್ಲೇ ಕೇಳಿರುತ್ತೀರಿ. ಇಲ್ಲವಾದಲ್ಲಿ ಇನ್ನು ಮುಂದೆ ಕೇಳುತ್ತೀರಿ/ಓದುತ್ತೀರಿ. ಇನ್ನು ಸ್ವಲ್ಪದಿನವಾದರೂ ಈ ಯೋಜನೆ ಸುದ್ದಿಯಲ್ಲಿರುತ್ತದೆ ಎಂಬುದು ನನ್ನ ಅನಿಸಿಕೆ.

ಯೋಜನೆಯ ಪರ/ವಿರೋಧವಾಗಿ ಸುಮಾರು ಅಭಿಪ್ರಾಯ/ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದೆ.


ಕೆಲವು ಕೊಂಡಿಗಳು:
July 02, 2008
ದಂಡಾವತಿ ಅಣೆಕಟ್ಟು ಯೋಜನೆ : ರೈತರಿಂದ ಸರ್ವೇ ಕಾರ್ಯಕ್ಕೆ ತಡೆ, ಪ್ರತಿಭಟನೆ
‘ನಮ್ಮ ಜೀವ ಹೋದರೂ ಅಣೆಕಟ್ಟು ನಿರ್ಮಿಸಲು ಅವಕಾಶ ನೀಡುವುದಿಲ್ಲ. ನಮಗೆ ಪರಿಹಾರ ಬೇಡ, ವಿಷ ಕೊಡಿ’ ಎಂದು ಗ್ರಾಮಸ್ಥರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
Oct 14, 2008
Opposition to Dandavati project criticized

1,203 acres of land will get submerged of which 160 acres is forest land, 143 acres is fertile land.

97 houses in Cheelanuru village, 47 in Jedigere and 43 houses in Holisalu will go under water

Jan 12, 2009
Opposition growing against Dandavati Irrigation Project


(Photo courtesy The Hindu)
Up in arms: Residents of villages to be affected by the irrigation project in Sorab taluk camping at the proposed site of a dam at Marur.

Jan 12, 2009
Centre has not approved the project, says Bangarappa
“How can the project be implemented when there is no approval [for it] from the Centre and no survey has been taken up”? he said and added that compensation had not been fixed for the land to be acquired for the project.

The List of Projects on the official website of Water Resources Department, Government of Karnataka does not mention this project!!

ನಾನಿನ್ನೂ ಮಾಹಿತಿ ಕಲೆಹಾಕುವ ಹಂತದಲ್ಲಿರುವುದರಿಂದ ಈ ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ಈಗ ಇಲ್ಲಿ ಬರೆಯುತ್ತಿಲ್ಲ. ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಗೆ ಕೊಂಡಿಗಳನ್ನು ಇಲ್ಲಿ ಕೊಟ್ಟಿದ್ದೇನೆ ಅಷ್ಟೆ. ನಿಮಗೆ ಆಸಕ್ತಿಯಿದ್ದರೆ ಓದಿಕೊಳ್ಳಿ. ಹಾಗೆಯೇ ಹೆಚ್ಚಿನ ಮಾಹಿತಿ ನಿಮ್ಮ ಬಳಿಯಿದ್ದರೆ ದಯವಿಟ್ಟು ನನಗೆ ತಿಳಿಸಿ.

ಧನ್ಯವಾದಗಳು.

P.S: ನಾನು ಕೂಡ ಸೊರಬ ತಾಲ್ಲೂಕಿನವನೆ. ಮುಳುಗಲಿರುವ ಗ್ರಾಮಗಳು ನಮ್ಮೂರಿಗೆ ಎಷ್ಟು ಹತ್ತಿರವೋ, ಅಲ್ಲಿಯ ಗ್ರಾಮಸ್ಥರು ನನ್ನ ಮನಕ್ಕೆ ಅಷ್ಟೇ ಹತ್ತಿರ.

11 comments:

ಸುಶ್ರುತ ದೊಡ್ಡೇರಿ said...

When asked whether he (ಬಂಗಾರಪ್ಪ) would participate in the anti-Dandavati demonstration, he asked “Why should I go there. Local people themselves are capable of opposing the project effectively.”

ಈ ರಾಜಕಾರಣಿಗಳನ್ನ ನಂಬಿಕೊಂಡು ಕೂತ್ರೆ ಮುಗಿದ ಹಾಗೇನೇ ಕಥೆ!

ಸಮಸ್ಯೆ ಅಂದ್ರೆ, ಯಾರ್ಯಾರ ಮನೆ ಮುಳುಗೊತ್ತೆ, ಯಾರ್ಯಾರ ಎಷ್ಟೆಷ್ಟು ತೋಟ ಮುಳುಗೊತ್ತೆ ಎಂಬುದರ ನಿಖರ ಮಾಹಿತಿ ಎಲ್ಲರಿಗೂ ಇನ್ನೂ ಸಿಕ್ಕೇ ಇಲ್ಲ. ಅಷ್ಟರೊಳಗೇ ಇಲ್ಲಿ ಶಂಕುಸ್ಥಾಪನೆ ಅಂತ ತಯಾರಾಗಿದಾರೆ. ಕೆರೆಕೋಡಿ ಹಾಗೆ ಹರಿಯೋ ದಂಡಾವತಿಗೆ ಆಣೆಕಟ್ಟು ಕಟ್ಟಿದ್ರೆ ಅಷ್ಟೆಲ್ಲಾ ಪ್ರಯೋಜನ ಇದೆ ಅಂದ್ರೆ ನಂಬೋದೇ ಕಷ್ಟವಾಗ್ತಿದೆ.

ಕಳವಾಗುತ್ತೆ.. ಅಕ್ಕಪಕ್ಕದ ಊರುಗಳು ಮುಳುಗೋದನ್ನು ನೋಡೋಕೆ..

ಸುಶ್ರುತ ದೊಡ್ಡೇರಿ said...

Even I'm trying to collect information.. Lets see what happens.

Alpazna said...

@ಸುಶ್ರುತ,
"ಯಾರ್ಯಾರ ಎಷ್ಟೆಷ್ಟು ತೋಟ ಮುಳುಗೊತ್ತೆ ಎಂಬುದರ ನಿಖರ ಮಾಹಿತಿ ಎಲ್ಲರಿಗೂ ಇನ್ನೂ ಸಿಕ್ಕೇ ಇಲ್ಲ." - ನಾನು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಆಶಾದಾಯಕ ಪ್ರತಿಕ್ರಿಯೆ(ನನಗೆ ಬೇಕಾಗಿರುವ ಮಾಹಿತಿಯನ್ನು ಒದಗಿಸಿಕೊಡಲು) ವ್ಯಕ್ತವಾಗಿದೆ. ನಾಳೆ ಸರ್ಕಾರಿ ರಜೆ ಇರುವುದರಿಂದ ನಾಡಿದ್ದು ಅವರ ಕಛೇರಿಗೆ ಹೋಗುವವನಿದ್ದೇನೆ.

ಶರಶ್ಚಂದ್ರ ಕಲ್ಮನೆ said...

ನಾನೂ ಇಂದು ಪತ್ರಿಕೇಲಿ ಓದಿದೆ ಈ ವಿಷಯದ ಬಗ್ಗೆ. ನಿಸರಾಣಿಯ ನನ್ನ ಗೆಳೆಯನೊಬ್ಬ ಒಂದು ವರ್ಷದ ಹಿಂದೆ ದಂಡಾವತಿ ಯೋಜನೆ ಬಗ್ಗೆ ಹೇಳಿಕೊಂಡು ಬೇಸರಗೊಂಡಿದ್ದ. ನಾನು ಅವನಿಗೆ ಫೋನ್ ಮಾಡಿದಾಗಲೆಲ್ಲ ಆ ವಿಷಯದ ಬಗ್ಗೆ ಕೇಳುತ್ತಿದ್ದೆ. ಇಂದು ಪತ್ರಿಕೆಯಲ್ಲಿ ಈ ವಿಷಯದ ಬಗ್ಗೆ ಓದಿ ತೀವ್ರ ಬೇಸರವಾಯಿತು. ನಾನು ಮೂರು ವರ್ಷಗಳು ಆ ಗ್ರಾಮಗಳ ಮೂಲಕ ಸವೆಸಿದ ಹಾದಿ ನೆನಪಾಯಿತು. ಆ ಊರುಗಳೆಲ್ಲ ಮುಳುಗುತ್ತವೆ ಎಂಬುದನ್ನು ಇನ್ನೂ ನನ್ನಿಂದ ಅರಗಿಸಿಕೊಳ್ಳದಾಗಿದೆ. ಹೇಗಾದರು ಈ ಯೋಜನೆ ಕಾರ್ಯರೂಪಕ್ಕೆ ಬರದಿದ್ದರೆ ಸಾಕು. ಯಡಿಯೂರಪ್ಪನವರು ಶಂಕು ಸ್ಥಾಪನೆ ಮಾಡಿದ್ದು, ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ವಿಷಾದನೀಯ. ಬಂಗಾರಪ್ಪನವರು ಇದರ ವಿರೋಧವಾಗಿ ಆಸಕ್ತಿ ತೋರದೆ ಇದ್ದುದ್ದು ನೋಡಿ ಆಶ್ಚರ್ಯಗೊಂಡಿದ್ದೇನೆ.

Alpazna said...

@ಶರಶ್ಚಂದ್ರ,
ಏನಾಗುವುದೆಂದು ಹೇಳುವುದು ಕಷ್ಟವೇ ಇದೆ.
ಕಾದು ನೋಡಬೇಕು, ಸುಮ್ಮನೆ ಕೂರಲು ಮನಸ್ಸಿಲ್ಲ.
ಹ್ಮ್ಮ್..

shreepada said...

ಪ್ರೀತಿಯ ಬ್ಲಾಗಿಗ ,
ನಾನು ಸೊರಬದಲ್ಲಿ ೩ ವರ್ಷ ಡಿಪ್ಲೋಮಾ ಓದುವಾಗ ದಂಡಾವತಿ ಒಂದು ನದಿ ಅಂತಾನೆ ಅನ್ನಿಸಿರಲಿಲ್ಲ .
ಹಾಗೆಯೆ ನೀರು ಹೇಳುವುದು ಜೀವಸೆಲೆಯನ್ನು ಹೊತ್ತಿಸಬೇಕಾದ ಮೂಲವೇ ಹೊರತು ರಾಜಕೀಯದ ಮೇಲಾಟಕ್ಕೆ ಚದುರಂಗವಾಗಿದ್ದು ದುರಂತ..,ನಮ್ಮ ಭಾವನಾತ್ಮಕ ಸಂಬಂಧಗಳಿಗಿಂತ ನಿಜವಾದ ಉಪಯೋಗ ಅನುಪಯೊಗಗಳು ಮುಖ್ಯವಾಗಬೇಕಿತ್ತು.
ನಮಗೂ , ಆಳುವವರಿಗೂ.., ಅಲ್ಲವಾ
ಧನ್ಯವಾದಗೊಲೊಂದಿಗೆ
shreepadu

Anonymous said...

MAzÀÄ

Anonymous said...

Ella Kannadigarigu namaskara idralli kannada font balasodu hege antha nange gottilla adke english balasiddene
ondu yojanege +, - idde iratte, adare e dandavathi yojane yara hithakkago gottilla, yojane sadhuvalla antha gottiddaru nirmisalu horatiddare. vamadeva gowdara nethrathvadalli virodha nadithide. avara horata yashassu kanali

Sandeep U.L
Soraba

Alpazna said...

@Sandeep U.L
ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.

Str8 Talk said...

Interesting post - though you say that you are in the process of collating information to make uo your view on Dandavathi project, there seems to be a slight slant towards pro dandavathi project.

Though not from Soraba, having visited there mant a times in summer adn in rainy season, it is ludicurious to have a irrigation project over a small river or pond which gets flooded in extereme rainy season and remains dry the rest of the time.

Also i disagree with one of the post which says that bangarappa has not lent his voice to the fight against the project which is aimed at appeasing one section of the society. Being a lingayat myself i am ashamed by the antics of our Hon. Chief Minister of appeasing one community over the other. Clearly he has not understood sarva dharma samabhava that BJP likes to use with their own skewed defition.

I will be eager to read your post of Dandavathi project.

Str8 Talk said...

Also please note Bangarappa has fought for the cause of Soraba people all through his political life and has been with the people of Soraba and treated them as his extended family.

I would urge you to correct and ammend some of the comments. As given this is the election year, it would be helpful if you and your friends in Soraba could help Bangarappa win one last time and bow out of politics on a winning note.