Monday, March 02, 2009

ವಿಳಾಸ ಬದಲಾಗುತ್ತಿದೆ..

ಅಡಚಣೆಗಾಗಿ ಕ್ಷಮಿಸಿ...

ನನ್ನ ಬ್ಲಾಗಿನ ವಿಳಾಸ ಬದಲಾಗುತ್ತಿದೆ!!

ವಿವರ ಇಂತಿದೆ..
ಹಳೆಯ ವಿಳಾಸ: http://snhalli.blogspot.com / http://www.snhalli.blogspot.com

ಹೊಸ ವಿಳಾಸ: http://blog.nadahalli.com

ಸದ್ಯಕ್ಕೆ ಹಳೆಯ ಹಾಗು ಹೊಸ ವಿಳಾಸಗಳಲ್ಲಿ ಯಾವುದನ್ನಾದರು ಬಳಸಬಹುದು. ಆದರೆ ಇನ್ನು ಕೆಲವೇ ದಿನಗಳಲ್ಲಿ ಕೇವಲ ಹೊಸ ವಿಳಾಸವನ್ನೇ ಬಳಸಬೇಕಾಗುತ್ತದೆ.

ನೀವು ಮಾಡಬೇಕಾದ ಕೆಲಸವಿಷ್ಟೆ:
ನಿಮ್ಮ ಬ್ಲಾಗಿನಿಂದ ನನ್ನ ಬ್ಲಾಗಿಗೆ ಲಿಂಕಿಸಿದ್ದಲ್ಲಿ, ಆ ಲಿಂಕನ್ನು ದಯವಿಟ್ಟು ಹೊಸ ವಿಳಾಸಕ್ಕೆ ಬದಲಾಯಿಸಿ. ಊಹೂಂ.. ಅಷ್ಟೊಂದು ಅವಸರವಿಲ್ಲ, ಈಗಲೇ ಆಗಬೇಕೆಂದಿಲ್ಲ. ಕೆಲವು ದಿನಗಳ ಒಳಗೆ ಮಾಡಿದರೆ ಸಾಕು.

ನೀವು ಬ್ರೌಸರ್’ನಲ್ಲಿ ನನ್ನ ಬ್ಲಾಗಿಗೆ ಬುಕ್’ಮಾರ್ಕ್ ಮಾಡಿಕೊಂಡಿದ್ದರೆ ಅದನ್ನು ಬದಲಿಸಬೇಕಾಗುತ್ತದೆ.

ಮತ್ತೆ ನಿಮ್ಮ RSS ಫೀಡು, ಈಗಿದ್ದಂತೆ ಕೆಲಸ ಮಾಡದಿದ್ದರೆ, ಹೊಸತಾಗಿ(ಹೊಸ ವಿಳಾಸದಿಂದ) ಚಂದಾದಾರರಾಗಬೇಕಾಗಬಹುದು.

ನನ್ನ ಬ್ಲಾಗಿನಲ್ಲಿರುವ ಬರಹಗಳಿಗೆ ನೇರವಾದ ಕೊಂಡಿಯಿದ್ದರೆ ಅದನ್ನು ಬದಲಾಯಿಸುವುದು ತುಂಬಾ ಸುಲಭ.
ಅಂತಹ ಕೊಂಡಿಯಲ್ಲಿನ "snhalli.blogspot.com" ನ್ನು "blog.nadahalli.com" ಗೆ ಬದಲಿಸಿ.

ಉದಾ:
http://snhalli.blogspot.com/2007/08/blog-post_31.html ಎಂದಿದ್ದದ್ದು,

http://blog.nadahalli.com/2007/08/blog-post_31.html ಎಂದಾಗಬೇಕು.

ಇವಿಷ್ಟು ನಿರೀಕ್ಷಿತ ಬದಲಾವಣೆಗಳು. ಬೇರೆ ಏನಾದರು ಹೆಚ್ಚು ಕಮ್ಮಿಯಾದರೆ ಅದು ಕೇವಲ ಆಕಸ್ಮಿಕ.

ಈ ವಿಷಯದ ಬಗ್ಗೆ ಏನೇ ಸಂದೇಹವಿದ್ದರು ಕಾಮೆಂಟಿನಲ್ಲಿ ಕೇಳಿ ಅಥವಾ ನನಗೆ ಪತ್ರ ಬರೆಯಿರಿ.

ಸಹಕರಿಸುವಿರೆಂದು ನಂಬಿದ್ದೇನೆ.
_

0 comments: