ಮೈಮುರಿದು ತಲೆ ಕೆರೆದು
ಗಲ್ಲಕ್ಕೆ ಕೈಕೊಟ್ಟು
ಕಾಪಿ ಹಿಡಿದು ಕೂತರೂ, ಕವಿತೆ
ಹುಟ್ಟುತ್ತಿಲ್ಲ!
ಕತ್ತಲೆಯ ರಾತ್ರಿಯಲಿ
ಹೊತ್ತು ಮಲಗಿದ ಮೇಲೆ
ಕತ್ತೆತ್ತಿ ನೋಡಿದರೂ, ಚುಕ್ಕೆ
ಹೊಳೆಯುತ್ತಿಲ್ಲ!
ಸೋಗೆ ಅಟ್ಲಲಿ ಬಿದ್ದ
ಸುರಗಿ ದಂಡೆಯ ರೀತಿ
ಕಳೆದು ಹೋಗಿದೆ ಮನವು, ಕೈಗೆ
ಸಿಕ್ಕುತ್ತಿಲ್ಲ!
ಓಡಿ ಹೋಗುವ ಮನವ
ಹಿಡಿದು ಕೂಡಿಡಲಿಕ್ಕೆ
ಬರಿಯ ಗೂಟದ ಬೇಲಿ
ದಬ್ಬೆಯಿಲ್ಲ!
-೦-
ಗಲ್ಲಕ್ಕೆ ಕೈಕೊಟ್ಟು
ಕಾಪಿ ಹಿಡಿದು ಕೂತರೂ, ಕವಿತೆ
ಹುಟ್ಟುತ್ತಿಲ್ಲ!
ಕತ್ತಲೆಯ ರಾತ್ರಿಯಲಿ
ಹೊತ್ತು ಮಲಗಿದ ಮೇಲೆ
ಕತ್ತೆತ್ತಿ ನೋಡಿದರೂ, ಚುಕ್ಕೆ
ಹೊಳೆಯುತ್ತಿಲ್ಲ!
ಸೋಗೆ ಅಟ್ಲಲಿ ಬಿದ್ದ
ಸುರಗಿ ದಂಡೆಯ ರೀತಿ
ಕಳೆದು ಹೋಗಿದೆ ಮನವು, ಕೈಗೆ
ಸಿಕ್ಕುತ್ತಿಲ್ಲ!
ಓಡಿ ಹೋಗುವ ಮನವ
ಹಿಡಿದು ಕೂಡಿಡಲಿಕ್ಕೆ
ಬರಿಯ ಗೂಟದ ಬೇಲಿ
ದಬ್ಬೆಯಿಲ್ಲ!
-೦-


16 comments:
ಹುಡುಕಾಟದ
ತುಡುಕಾಟದಲೇ
ಕವನ ಹೊರಬಂದಿದೆಯಲ್ಲ!
ಸುಂದರ ಸರಳ ಕವನ... ತುಂಬಾ ಇಷ್ಟವಾಯಿತು. "ಕತ್ತಲೆಯ ರಾತ್ರಿಯಲಿ ಹೊತ್ತು ಮಲಗಿದ ಮೇಲೆ ಕತ್ತೆತ್ತಿ ನೋಡಿದರೂ, ಚುಕ್ಕೆಹೊಳೆಯುತ್ತಿಲ್ಲ!" ಈ ಸಾಲುಗಳು ಕಾಡುತ್ತಿವೆ
ಸುರುಗಿಯ ಪರಿಮಳ ಹಿಡಿದು ಹೊರಟರೆ ಮನಸ್ಸು ಕೈಗೆ ಸಿಗಬಹುದೇನೋ...
"ಸೋಗೆ ಅಟ್ಲಲಿ ಬಿದ್ದ
ಸುರಗಿ ದಂಡೆಯ ರೀತಿ
ಕಳೆದು ಹೋಗಿದೆ ಮನವು, ಕೈಗೆ
ಸಿಕ್ಕುತ್ತಿಲ್ಲ!"
ಚೊಲೊ ಇದ್ದು..
ಇನ್ನೂ , ' ಆ' ಮುತ್ತಿನ ಗುಂಗಲ್ಲೇ ಇದ್ಯಾ ಹೆಂಗೆ? ಅದಕ್ಕೆ ಕವನ ಹುಟ್ಟೋದು ಕಷ್ಟ ಆದಂಗಿದ್ದು.
ಆಕಾಶದ ಬದಲು ಪಕ್ಕಕ್ಕೋ ಅಥವಾ ಎದುರಿಗೋ ನೋಡು ಚೆಂದದ ಪ್ರೇಮ ಕವಿತೆ ತನ್ನಿಂದತಾನೆ ಹುಟ್ಟಲಕ್ಕು !
ನಿಜ ಹೇಳವು ಅಂದ್ರೆ .. ಚೆನಾಗಿದ್ದು ಕವಿತೆಯ ಹುಡುಕಾಟ ! ಇಷ್ಟ ಆತು
@sunaath,
ಹಾಗಾಗಿ, ಮತ್ತೊಂದು ಪ್ರಶ್ನೆ ಹುಟ್ಟುತ್ತದೆ.
ಯಾವುದಕ್ಕಾಗಿ ಹುಡುಕಾಟ ಎಂದು!
@ಶರಶ್ಚಂದ್ರ ಕಲ್ಮನೆ,
ತುಂಬಾ ತುಂಬಾ ಧನ್ಯವಾದ:)
@Niveditha,
ಕಳೆದುಕೊಂಡದ್ದೆಲ್ಲ ಹಾಗೆ ಬೇಗ ಬೇಗ
ಸಿಕ್ಕಿಬಿಟ್ಟರೆ,
ಹುಡುಕುವ ಖುಶಿಯೇ ಕಳೆದುಹೋದೀತು!
@Deleted comment!,
ನೀನೆ ಬಂದು delete ಮಾಡ್ತೆ ಅಂತ ಕಾಯ್ತಾ ಇದ್ದಿದ್ದಿ :-)
@ಚಿತ್ರಾ,
ಹೌದು, ಮಳೆ ಜಾಸ್ತಿ ಅಲ್ದ?
ಹಂಗಾಗಿ ಇನ್ನೂ ಮುತ್ತಿನ ಗುಂಗಲ್ಲೇ ಇದ್ದಿ.
’ಮುತ್ತು ಬಿತ್ತಿ’ ಮುಗಿಯಲ್ಲೆ ಇನ್ನು;-)
ಏನ್ ಗುರುವೇ.. ಇದ್ದಕ್ಕಿದ್ದಂತೆ ಒಂದಕ್ಕಿಂತ ಒಂದು ಚೆನ್ನಾಗಿರೋ ಕವನ ಬರ್ಯಕ್ಕೆ ಶುರು ಮಾಡಿದ್ದೆ?
ಮತ್ತೊಂದು ಚಂದದ ಕವಿತೆ... :-)
@Harish,
ಏನೋ ಹಿಂಗೆ.. :)
@Sinchana,
:-)
:)
" ಮೈಮುರಿದು ತಲೆ ಕೆರೆದು
ಗಲ್ಲಕ್ಕೆ ಕೈಕೊಟ್ಟು
ಕಾಪಿ ಹಿಡಿದು ಕೂತರೂ, ಕವಿತೆ
ಹುಟ್ಟುತ್ತಿಲ್ಲ!"
ಸಂದೀಪಾ... ಸುಳ್ ಹೇಳಡಾ....ಇಲ್ಲಿ ಬರ್ದಿದ್ದು ಎಂತು ಈಗ!!! :-)
@ಶಾಂತಲಾ,
ಇದು ಕವಿತನ್ ಅಕ್ಕ, ಕವನ :-)
ಸಂದೀಪ್..ಮನಸ್ಸಿನ ಓಟಕ್ಕೆ ಗೂಟ..ಬೇಲಿ..ಹಗ್ಗ ಯಾವುದೂ ಬ್ರೇಕು ಹಾಕಲಾರವು ಎಂದು ಬಹಳ ಚನ್ನಾಗಿ ಕೆಲವೇ ಪದಗಳ ಪಂಜರದಲ್ಲಿ ಬಂಧಿಸಿ ಕವನಿಸಿದ್ದಿರಿ...ಅಭಿನಂದನೆಗಳು
Happy Deewali
@ಜಲನಯನ,
ಧನ್ಯವಾದಗಳು.ನಿಮಗೂ ದೀಪಾವಳಿಯ ಶುಭಾಶಯಗಳು.
:D
@kenecoffee,
:-)
Post a Comment