Sunday, December 13, 2009

ಬೇಕಾಗಿದ್ದಾರೆ

’ಅಟ್ ಲೀಸ್ಟ್’ ಏಳನೇ ತರಗತಿ ’ಪಾಸ್’ ಆಗಿರುವ,
ಕನ್ನಡ ಓದಲು ಬರುವ(ಬರೆಯಲು ಬರಲೇ ಬೇಕೆಂದಿಲ್ಲ!),
ಕಣ್ಣು/ದೃಷ್ಟಿ ದೋಷಗಳು ಹೆಚ್ಚಾಗಿಲ್ಲದ,

’proof reader' ಒಬ್ಬರು ’ಸಮಸ್ತ ಕನ್ನಡಿಗರ ಹೆಮ್ಮೆ’ಯ ದಿನಪತ್ರಿಕೆಗೆ ತುರ್ತಾಗಿ ಬೇಕಾಗಿದ್ದಾರೆ.

ಸಂಪಾದಕರಿಗೆ ಮರೆತು ಹೋದ ಈ ವಿಷಯವನ್ನು ಅಭಿ’ಮಾನಿ’ ಓದುಗರೊಬ್ಬರು ಗಮನಕ್ಕೆ ತರುತ್ತಿದ್ದಾರೆ.

ವಿಜಯ ಕರ್ನಾಟಕದ ಇತ್ತೀಚಿನ Vಕಾರಗಳ ಒಂದೆರಡು ಸ್ಯಾಂಪಲ್ ನೋಡಿ:
೧. "ದೇವರು ನಮಗೆ ಸಿಕ್ಕ ಗಿಫ್ಟ್"!!


--> ನಿಮಗೂ ಸ್ವಲ್ಪ ಸಿಕ್ಬೋದಾಗಿತ್ತು, ಪಾಪ!!

೨. "ಅರ್ಥವಾಗಲಿಲ್ಲ"!


--> ಅರ್ಥ ಆಗೋದೂ ಇಲ್ಲ ನಿಮ್ಗೆ!!


ಇದು ಮುಖಪುಟದ ಅವಾಂತರ, ಒಳಗಿಂದೆಲ್ಲಾ ಕೆದಕಿದ್ರೆ ಅದೇ ಇನ್ನೊಂದ್ ಲೇಖನಕ್ಕಾಗುವಷ್ಟಿದೆ. ನಾನಂತೂ vkಗೆ ಟಾಟಾ ಹೇಳಿ ಆಗಿದೆ.

ಓದುಗರೇ, ನೀವು
ಇಷ್ಟ್ ಮಾಡಿ:
ನನಗಿಂತಲೂ ಹೆಚ್ಚು ಆಶಾವಾದಿಗಳಾಗಿದ್ದಲ್ಲಿ, ಇನ್ನೊಂದಿಷ್ಟು ದಿನ ಕಾದು ನೋಡಿ!

VK, ಆಶಾವಾದಿ ಓದುಗರು ನಿರಾಶೆಹೊಂದುವ ಮೊದಲು,
ಇಷ್ಟ್ ಮಾಡಿ:

ನೀವು ಗೀಚಿದ್ದನ್ನು ಓದುಗರ ಮುಂದೆ ಎರಚುವ ಮುನ್ನ ಒಂದು ಸಾರಿ, ಒಂದೇ ಒಂದು ಸಾರಿ ಓದಿ.
(ಇಲ್ಲದಿದ್ದರೆ ಮುಂದೆ ನಿಮಗೆ ನೀವೇ ಸಾರಿ ಹೇಳಿಕೊಳ್ಳಬೇಕಾಗಬಹುದು!)

ಫಸ್ಟ್ ಮಾಡಿ:
’ತಪ್ಪು ಒಪ್ಪು’ ಅಂಕಣದಲ್ಲಿ ಓದುಗರ ಅಭಿಪ್ರಾಯವನ್ನು ಪ್ರಕಟಿಸುತ್ತಿದ್ದೀರಿ, ಸಂತೋಷ. ಆದರೆ, ಜವಾಬ್ದಾರಿಯುತ ಎನಿಸಿಕೊಂಡ ಪತ್ರಿಕೆಯಿಂದ ಸಮಾಜ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತದೆ. ಸೊ, ತಪ್ಪಿದ್ದರೆ ಒಪ್ಪಿಕೊಂಡು ಬಿಡಿ. ಸಾದ್ಯವಾದರೆ, ತಿದ್ದಿಕೊಳ್ಳಿ.

ಮಸ್ಟ್ ಮಾಡಿ:
ಲವಲvk ಯನ್ನು ಹೊಗಳಿಕೊಂಡಿದ್ದು/ಸಮರ್ಥಿಸಿಕೊಂಡಿದ್ದು ಸಾಕೆನಿಸುತ್ತದೆ, ನಿಲ್ಸಿ.
ಒಟ್ಟಿನಲ್ಲಿ,
ವಿಜಯ ಕರ್ನಾಟಕ ತನ್ನ ಮೊದಲಿನ ಗಂಭೀರತೆಯನ್ನು ಬಿಚ್ಚಿ ಒಗೆದು ಹೀಗೆ ಬೀದಿಯಲ್ಲಿ ಬೆತ್ತಲಾಗಿ ಸ್ವಕುಚಮರ್ದನ ಮಾಡುವುದನ್ನು ನಿಲ್ಲಿಸಿ, ಸ್ಲೀವ್’ಲೆಸ್ ಆದರೂ ಪರವಾಗಿಲ್ಲ, ಒಂದು ಸಣ್ಣ ’ಸಾಮಾನ್ಯ ಜ್ಞಾನದ’ ರVK ತೊಟ್ಟುಕೊಳ್ಳುವಂತಾಗಲಿ ಎಂಬುದೇ ನನ್ನ ಆಶಯ.

7 comments:

Deepthi said...

Good write up!
After supposedly being the highest selling Kannada daily, repeated negligence with respect to some basic necessities of print media like meaningful sentence formation, etc are unforgivable!
Of late there have been more complaints of VK carrying redundant/useless news.

Print media is the most trusted medium of regional/national/ international news. Hope to see the stakeholders act more responsibly!

ಚಿತ್ರಾ said...

ಸಂದೀಪ,
ಬಹುದಿನಗಳ ನಂತರದ ಬರಹ !! ಯೋಚನೆ ಮಾಡುವ ಹಾಗೆ ಇದೆ .
ಸರಿಯಾಗಿ ಗಮನಿಸಿದರೆ , ಬರಿಯ VK ಒಂದೇ ಏನು ಕನ್ನಡದ ಬಹುತೇಕ ದಿನ ಪತ್ರಿಕೆಗಳಲ್ಲಿ ಇದೇ ಹಾಡು !
ದಿನ ಪತ್ರಿಕೆಯಾದ್ದರಿಂದ ತಪ್ಪುಗಳನ್ನು ತಿದ್ದಲು ಸಮಯವಿರುವುದಿಲ್ಲವೇ ಎಂಬ ಅನುಮಾನ !! ಓದುಗರು ಕನ್ನಡಿಗರೇ ತಾನೇ? adjust ಮಾಡಿಕೊಳ್ಳುತ್ತಾರೆ ಅನ್ನೋ ಧೋರಣೆಯೂ ಇರಬಹುದೇ? ( ಅಥವಾ proof reading ಗೆ ಪರಭಾಷೆಯವರನ್ನು ನೇಮಿಸಿರಬಹುದೆ ? )
ಅಷ್ಟೇ ಅಲ್ಲ, ಟೀ ವಿ ಯಲ್ಲೂ ಅದೇ ಕಥೆ ! ಬಹಳ ತಪ್ಪು ತಪ್ಪಾದ ಅಡಿ ಬರಹಗಳು, breaking news line ಗಳು , ಅಶುದ್ಧವಾದ ಕನ್ನಡದ ಬಳಕೆ, ಉಚ್ಚಾರಣೆ .. ನೋಡುವುದೇ ಬೇಡವೆನಿಸಿಬಿಡುತ್ತದೆ ! ಆದರಕ್ಕೂ -ಹಾದರಕ್ಕೂ ಉಚ್ಚಾರಣೆಯಲ್ಲಿ ವ್ಯತ್ಯಾಸವೇ ಇಲ್ಲ !
ಒಟ್ಟಿನಲ್ಲಿ " ಸಿರಿಗನ್ನಡಂ ಗಲ್ಗೆ ' ಎಂಬಂತಾಗಿದೆ !

ಶಿವಪ್ರಕಾಶ್ said...

Well Said Sandeep

sunaath said...

ಸಂದೀಪ,
ತುಂಬಾ ಉತ್ತಮವಾದ ವಿಶ್ಲೇಷಣೆ. ಇದೀಗ ವಿಜಯಕರ್ನಾಟಕ ಸ್ವಮೋಹಕ್ಕೆ, ಸ್ವರತಿಗೆ ಒಳಗಾಗಿದೆ. ಇದೇ ರೀತಿಯಲ್ಲಿ ಮುಂದುವರೆದರೆ, ಓದುಗರು ಈ ಪತ್ರಿಕೆಯನ್ನು ಕಸದ ಡಬ್ಬಿಗೆ ಎಸೆದಾರು!

Anonymous said...

Nice one. now days 'sompaada karu' galu don't bother about the language and content.

Pramod said...

A middle finger to new VK design and content

Sandeepa Nadahalli said...

@Deepthi,
Thanks Deepthi. VK hasn't showed any sign of improvement. Recently a friend wrote more about it here.

@ಚಿತ್ರಾ,
ಹೌದು. ಇದನ್ನು ಬರೆದ ಮೇಲೆ ಕೂಡ ಮತ್ತೆ ಹೆಚ್ಚು ಬರೆಯಲಾಗಲಿಲ್ಲ.
ನಾನು ಟಿ.ವಿ ಯನ್ನು ನೋಡುವುದು ಕಡಿಮೆಯಾದ್ದರಿಂದ ಅದರ ಬಗ್ಗೆ ಅಷ್ಟು ಮಾಹಿತಿಯಿಲ್ಲ.
ಆದರೆ ಕೇಳಿದ್ದೇನೆ.

ಅಂತದ್ದನ್ನೆಲ್ಲ ಓದುಗರು/ನೋಡುವರು ಸಹಿಸಿಕೊಳ್ಳುವವರೆಗೂ ಅವರು ನಡೆಸುತ್ತಲೇ ಇರುತ್ತಾರೆ.

@ಶಿವಪ್ರಕಾಶ್,
ಧನ್ಯವಾದಗಳು!

@sunaath,
ಈಗೀಗ, ನನಗೆ ಗೊತ್ತಿರುವ ಹವಲರು ವಿ,ಕ.ಕ್ಕೆ ವಿದಾಯ ಹೇಳಿಯಾಗಿದೆ.
ನೋಡೋಣ ಎಲ್ಲಿಯವರೆಗೆ ನಡೆಸುತ್ತಾರೆ ಅಂತ!

@anonymous
'ಸೊಂಪಾದ ಕರು’ ಚೆನ್ನಾಗಿದೆ :)

@Pramod,
Well said!