ಮೈಮುರಿದು ತಲೆ ಕೆರೆದು
ಗಲ್ಲಕ್ಕೆ ಕೈಕೊಟ್ಟು
ಕಾಪಿ ಹಿಡಿದು ಕೂತರೂ, ಕವಿತೆ
ಹುಟ್ಟುತ್ತಿಲ್ಲ!
ಕತ್ತಲೆಯ ರಾತ್ರಿಯಲಿ
ಹೊತ್ತು ಮಲಗಿದ ಮೇಲೆ
ಕತ್ತೆತ್ತಿ ನೋಡಿದರೂ, ಚುಕ್ಕೆ
ಹೊಳೆಯುತ್ತಿಲ್ಲ!
ಸೋಗೆ ಅಟ್ಲಲಿ ಬಿದ್ದ
ಸುರಗಿ ದಂಡೆಯ ರೀತಿ
ಕಳೆದು ಹೋಗಿದೆ ಮನವು, ಕೈಗೆ
ಸಿಕ್ಕುತ್ತಿಲ್ಲ!
ಓಡಿ ಹೋಗುವ ಮನವ
ಹಿಡಿದು ಕೂಡಿಡಲಿಕ್ಕೆ
ಬರಿಯ ಗೂಟದ ಬೇಲಿ
ದಬ್ಬೆಯಿಲ್ಲ!
-೦-
ಗಲ್ಲಕ್ಕೆ ಕೈಕೊಟ್ಟು
ಕಾಪಿ ಹಿಡಿದು ಕೂತರೂ, ಕವಿತೆ
ಹುಟ್ಟುತ್ತಿಲ್ಲ!
ಕತ್ತಲೆಯ ರಾತ್ರಿಯಲಿ
ಹೊತ್ತು ಮಲಗಿದ ಮೇಲೆ
ಕತ್ತೆತ್ತಿ ನೋಡಿದರೂ, ಚುಕ್ಕೆ
ಹೊಳೆಯುತ್ತಿಲ್ಲ!
ಸೋಗೆ ಅಟ್ಲಲಿ ಬಿದ್ದ
ಸುರಗಿ ದಂಡೆಯ ರೀತಿ
ಕಳೆದು ಹೋಗಿದೆ ಮನವು, ಕೈಗೆ
ಸಿಕ್ಕುತ್ತಿಲ್ಲ!
ಓಡಿ ಹೋಗುವ ಮನವ
ಹಿಡಿದು ಕೂಡಿಡಲಿಕ್ಕೆ
ಬರಿಯ ಗೂಟದ ಬೇಲಿ
ದಬ್ಬೆಯಿಲ್ಲ!
-೦-

