’ಅಟ್ ಲೀಸ್ಟ್’ ಏಳನೇ ತರಗತಿ ’ಪಾಸ್’ ಆಗಿರುವ,
ಕನ್ನಡ ಓದಲು ಬರುವ(ಬರೆಯಲು ಬರಲೇ ಬೇಕೆಂದಿಲ್ಲ!),
ಕಣ್ಣು/ದೃಷ್ಟಿ ದೋಷಗಳು ಹೆಚ್ಚಾಗಿಲ್ಲದ,
’proof reader' ಒಬ್ಬರು ’ಸಮಸ್ತ ಕನ್ನಡಿಗರ ಹೆಮ್ಮೆ’ಯ ದಿನಪತ್ರಿಕೆಗೆ ತುರ್ತಾಗಿ ಬೇಕಾಗಿದ್ದಾರೆ.
ಸಂಪಾದಕರಿಗೆ ಮರೆತು ಹೋದ ಈ ವಿಷಯವನ್ನು ಅಭಿ’ಮಾನಿ’ ಓದುಗರೊಬ್ಬರು ಗಮನಕ್ಕೆ ತರುತ್ತಿದ್ದಾರೆ.
ವಿಜಯ ಕರ್ನಾಟಕದ ಇತ್ತೀಚಿನ Vಕಾರಗಳ ಒಂದೆರಡು ಸ್ಯಾಂಪಲ್ ನೋಡಿ:
೧. "ದೇವರು ನಮಗೆ ಸಿಕ್ಕ ಗಿಫ್ಟ್"!!

--> ನಿಮಗೂ ಸ್ವಲ್ಪ ಸಿಕ್ಬೋದಾಗಿತ್ತು, ಪಾಪ!!
೨. "ಅರ್ಥವಾಗಲಿಲ್ಲ"!

--> ಅರ್ಥ ಆಗೋದೂ ಇಲ್ಲ ನಿಮ್ಗೆ!!
ಇದು ಮುಖಪುಟದ ಅವಾಂತರ, ಒಳಗಿಂದೆಲ್ಲಾ ಕೆದಕಿದ್ರೆ ಅದೇ ಇನ್ನೊಂದ್ ಲೇಖನಕ್ಕಾಗುವಷ್ಟಿದೆ. ನಾನಂತೂ vkಗೆ ಟಾಟಾ ಹೇಳಿ ಆಗಿದೆ.
ಓದುಗರೇ, ನೀವು
ಇಷ್ಟ್ ಮಾಡಿ:ನನಗಿಂತಲೂ ಹೆಚ್ಚು ಆಶಾವಾದಿಗಳಾಗಿದ್ದಲ್ಲಿ, ಇನ್ನೊಂದಿಷ್ಟು ದಿನ ಕಾದು ನೋಡಿ!
VK, ಆಶಾವಾದಿ ಓದುಗರು ನಿರಾಶೆಹೊಂದುವ ಮೊದಲು,
ಇಷ್ಟ್ ಮಾಡಿ:
ನೀವು ಗೀಚಿದ್ದನ್ನು ಓದುಗರ ಮುಂದೆ ಎರಚುವ ಮುನ್ನ ಒಂದು ಸಾರಿ, ಒಂದೇ ಒಂದು ಸಾರಿ ಓದಿ.
(ಇಲ್ಲದಿದ್ದರೆ ಮುಂದೆ ನಿಮಗೆ ನೀವೇ ಸಾರಿ ಹೇಳಿಕೊಳ್ಳಬೇಕಾಗಬಹುದು!)
ಫಸ್ಟ್ ಮಾಡಿ:
’ತಪ್ಪು ಒಪ್ಪು’ ಅಂಕಣದಲ್ಲಿ ಓದುಗರ ಅಭಿಪ್ರಾಯವನ್ನು ಪ್ರಕಟಿಸುತ್ತಿದ್ದೀರಿ, ಸಂತೋಷ. ಆದರೆ, ಜವಾಬ್ದಾರಿಯುತ ಎನಿಸಿಕೊಂಡ ಪತ್ರಿಕೆಯಿಂದ ಸಮಾಜ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತದೆ. ಸೊ, ತಪ್ಪಿದ್ದರೆ ಒಪ್ಪಿಕೊಂಡು ಬಿಡಿ. ಸಾದ್ಯವಾದರೆ, ತಿದ್ದಿಕೊಳ್ಳಿ.
ಮಸ್ಟ್ ಮಾಡಿ:
ಲವಲvk ಯನ್ನು ಹೊಗಳಿಕೊಂಡಿದ್ದು/ಸಮರ್ಥಿಸಿಕೊಂಡಿದ್ದು ಸಾಕೆನಿಸುತ್ತದೆ, ನಿಲ್ಸಿ.ಒಟ್ಟಿನಲ್ಲಿ,
ವಿಜಯ ಕರ್ನಾಟಕ ತನ್ನ ಮೊದಲಿನ ಗಂಭೀರತೆಯನ್ನು ಬಿಚ್ಚಿ ಒಗೆದು ಹೀಗೆ ಬೀದಿಯಲ್ಲಿ ಬೆತ್ತಲಾಗಿ ಸ್ವಕುಚಮರ್ದನ ಮಾಡುವುದನ್ನು ನಿಲ್ಲಿಸಿ, ಸ್ಲೀವ್’ಲೆಸ್ ಆದರೂ ಪರವಾಗಿಲ್ಲ, ಒಂದು ಸಣ್ಣ ’ಸಾಮಾನ್ಯ ಜ್ಞಾನದ’ ರVK ತೊಟ್ಟುಕೊಳ್ಳುವಂತಾಗಲಿ ಎಂಬುದೇ ನನ್ನ ಆಶಯ.