ಇಂದು ಈಗಿನ ನಾನು
ಇರುವುದೇ ಹೀಗೆಂದು
ಒಪ್ಪಿಕೊಂಡರೆ ಸಾಲದೆ?
ನಿನ್ನೆಗಳ ಅಗೆಯಲೇ ಬೇಕೆ?
ಝರಿಯ ಹಿಂದಿನ ಪಯಣ
ಅರಿವಿನಾಚೆಗೆ ಬಿಟ್ಟು
ಬರಿಯ ಹೃದಯದಿ ಪ್ರೀತಿಸು
ಕೈಯಲ್ಲಿ ಹಣ್ಣ ಹಿಡಿದು
ಗಿಡದ ಬುಡವನೇಕೆ ನೋಡುವೆ?
ಅಲ್ಲೇನಿದೆ ಬರೀ ಮಣ್ಣು!
ಕಣ್ಮುಚ್ಚಿ ನೀ ಹಣ್ಣ ತಿನ್ನು!
ನಿನ್ನ ಹೊಳೆವ ಕತ್ತಿಯಿಂದ
ಕೊಚ್ಚಿ ಎನ್ನ ಕೊಲ್ಲಬೇಡ
ಪ್ರೀತಿಯಿಂದ ಕಚ್ಚಿ ತಿನ್ನು
ಅಷ್ಟೆ ಸಾಕು ಹಣ್ಣಿಗೆ!
-೦-
ಇರುವುದೇ ಹೀಗೆಂದು
ಒಪ್ಪಿಕೊಂಡರೆ ಸಾಲದೆ?
ನಿನ್ನೆಗಳ ಅಗೆಯಲೇ ಬೇಕೆ?
ತಿಳಿಯಲೇಬೇಕೆ? ಕೇಳು..
ಸತ್ತ ಪ್ರೀತಿಯ ಕೊಳೆತ
ಹೆಣಗಳೆ, ಬೆಳೆದು ಬಲಿತಿಹ
ಸತ್ತ ಪ್ರೀತಿಯ ಕೊಳೆತ
ಹೆಣಗಳೆ, ಬೆಳೆದು ಬಲಿತಿಹ
ನೀತಿಗಾಗಿದೆ ಗೊಬ್ಬರ
ತೆರೆಯ ಹಿಂದಿನ ಸತ್ಯಝರಿಯ ಹಿಂದಿನ ಪಯಣ
ಅರಿವಿನಾಚೆಗೆ ಬಿಟ್ಟು
ಬರಿಯ ಹೃದಯದಿ ಪ್ರೀತಿಸು
ಕೈಯಲ್ಲಿ ಹಣ್ಣ ಹಿಡಿದು
ಗಿಡದ ಬುಡವನೇಕೆ ನೋಡುವೆ?
ಅಲ್ಲೇನಿದೆ ಬರೀ ಮಣ್ಣು!
ಕಣ್ಮುಚ್ಚಿ ನೀ ಹಣ್ಣ ತಿನ್ನು!
ನಿನ್ನ ಹೊಳೆವ ಕತ್ತಿಯಿಂದ
ಕೊಚ್ಚಿ ಎನ್ನ ಕೊಲ್ಲಬೇಡ
ಪ್ರೀತಿಯಿಂದ ಕಚ್ಚಿ ತಿನ್ನು
ಅಷ್ಟೆ ಸಾಕು ಹಣ್ಣಿಗೆ!
-೦-


15 comments:
ವಾಹ್! ವಾಸ್ತವ ಹಾಗು ಆದರ್ಶಗಳ combination ಆಗಿರುವ ಸುಂದರ ಕವನ!
mastiddu dosta nirantara bareyuttiru
@sunaath,
ಧನ್ಯವಾದಗಳು. :)
@ರಾಘು,
ಎಲ್ಲ ನಿಮ್ಮಂತವರ ಪ್ರೋತ್ಸಾಹ ದೋಸ್ತ! :)
ಕಟುವಾಸ್ತವದ ಕವನ, ಸುಂದರವಾಗಿದೆ.
No words.. its not the poem, but the pain(i dont know if i can call it a pain) behind it thats giving me no words..
Nice poem
wordings are simply great
Simple yet elegant. Good work!
Krupesh
@ಸುಪ್ತದೀಪ್ತಿ,
ಧನ್ಯವಾದಗಳು.
@Niveditha,
Chillax!! I understand..
@ಸಾಗರದಾಚೆಯ,
Thanks a lot!
@Krupesh,
Thanks much!
ಸಂದೀಪ,
ಚಂದವಾಗಿ ಮೂಡಿದೆ ಕವನ !
" ಇಂದು ಈಗಿನ ನಾನು
ಇರುವುದೇ ಹೀಗೆಂದು
ಒಪ್ಪಿಕೊಂಡರೆ ಸಾಲದೆ?
ನಿನ್ನೆಗಳ ಅಗೆಯಲೇ ಬೇಕೆ? "
ತುಂಬಾ ಅರ್ಥವತ್ತಾದ ಪ್ರಶ್ನೆ . ಇಷ್ಟವಾಯ್ತು .
ಚಿತ್ರಾ,
ತುಂಬಾ ಧನ್ಯವಾದಗಳು. :-)
ಅರ್ಥವತ್ತಾದ ಸಾಲುಗಳು.
ಸುಂದರ ಕವನ.
@ಮನದಾಳದಿಂದ,
ಧನ್ಯವಾದಗಳು :-)
ಸಂದೀಪ್,ತ ಉಂಬ ಚೆನ್ನಾಗಿ ಬರೆದಿದ್ದೀರ. 'ಕೈಯಲ್ಲಿ ಹಣ್ಣ ಹಿಡಿದು
ಗಿಡದ ಬುಡವನೇಕೆ ನೋಡುವೆ?" ತುಂಬಾ ಇಷ್ಟ ಆದ ಸಾಲುಗಳು. ಸುಂದರ ಪದ ಜೋಡಣೆ. ಶುಭವಾಗಲಿ.
-ವಿನಯ್
wooow
@Vinay.S,
ತುಂಬಾ ಧನ್ಯವಾದಗಳು :-)
@Enigma,
weee!! :)
Post a Comment