Thursday, August 26, 2010

ಮೊಟ್ಟೆ - ಹಕ್ಕಿ

ಮೊಟ್ಟೆಯೊಂದು ಮಟ್ಟಿಯಲ್ಲಿ
ಪುಟ್ಟದೊಂದು ಗೂಡುಕಟ್ಟಿ
ಬೆಚ್ಚಿಬಿದ್ದ ನನ್ನ ನೋಡಿ
’ಕಿಸಕ್’ ಎಂದು ನಕ್ಕಿತು

ನಾನಂದೆ, ಏ ಮಳ್ಳು!
ನೀನು ಬರೀ ಒಂದು ಮೊಟ್ಟೆ
ಗೂಡು ಕಟ್ಟುವುದು
ಹಕ್ಕಿಯ ಕೆಲಸ, ನಿಂದಲ್ಲ!

ನೀನೇಕೆ ಗೂಡು ಕಟ್ಟಿದೆ?
ಅಲ್ಲೇನು ಹಕ್ಕಿ ಇಡ್ತೀಯಾ?
ಅಥ್ವಾ, ನಿಂಗೇ ಮುಂದೆ ಬೇಕು
ಅಂತ ಫ್ಯೂಚರ್ ಪ್ಲಾನಿಂಗ?

ಮೊಟ್ಟೆ ಗಟ್ಟಿಯಾಗಿ ಕೂಗಿ ಹೇಳಿತು:

ಹೌದು, ನಾನು ಮೊಟ್ಟೇನೆ,
ಹಕ್ಕಿ ಹಾಗೆ ಬದ್ಕೋಕೆ ಆಸೆ
ಆದ್ರೆ, ನಾ ಯಾವತ್ತೂ ಹಕ್ಕಿ ಆಗಲ್ಲ!
ನಂಗೆ ಮೊಟ್ಟೆಯಾಗಿರೋದೆ ಇಷ್ಟ

ನೆನ್ಪಿಟ್ಕೊ, ನೀನು ಮೊದ್ಲು
ಮೊಟ್ಟೇನೆ ಆಗಿದ್ದೆ,
ಈಗ ಆಚೆ ಇದೀಯ ಅಂತ
ಏನೇನೋ ಮಾತಾಡ್ಬೇಡ

ಮೊಟ್ಟೆ ಹಕ್ಕಿ ಆಗ್ಬೋದು
ಹಕ್ಕಿಗೆ ಮೊಟ್ಟೆ ಆಗಕ್ಕಾಗಲ್ಲ
ಕಟ್ಟೆ ಒಡದ್ರೆ ಕಟ್ಬೋದು, ತಿಳ್ಕ!
ಮೊಟ್ಟೆ ಒಡದ್ರೆ ಮುಗ್ದೋತು!

ನಾನು ಇನ್ನೂ ಮೊಟ್ಟೆಯಾಗಿದೀನಿ
ಅಂತ ನಿಂಗೆ ಹೊಟ್ಟೆ ಉರಿ!
ಹಾರಕ್ಕಾಗಲ್ಲ ಅನ್ನದೊಂದ್ ಬಿಟ್ರೆ
ಮೊಟ್ಟೆ ಜೀವ್ನಾನೆ ಸುಖ!
-೦-

5 comments:

ಚಿತ್ರಾ said...

ಸಂದೀಪ,
ನನಗೊಂದು ಡೌಟು . ಸುಶ್ರುತ ಮೊಟ್ಟೆ- ಆಮ್ಲೆಟ್ ಹೇಳಿ ಬರೀತ . ನೀನು ಮೊಟ್ಟೆ ಗೂಡು ಕಟ್ಟಿದ ಕವನ , ಗುರು ನೋಡಿದ್ರೆ ' ಮೊಟ್ಟೆ ಇಡುವ ಗೂಡು ...' ಅಂತ. ಇದು ಮೊಟ್ಟೆ ತಿಂಗಳಾ ? ಹಿ ಹಿ ಹಿ ...
" ಮೊಟ್ಟೆ ಹಕ್ಕಿ ಆಗ್ಬೋದು ಹಕ್ಕಿಗೆ ಮೊಟ್ಟೆ ಆಗಕ್ಕಾಗಲ್ಲ " ಅಂದಿದ್ದು ಭಾಳಾ ಸರಿ ಅನಿಸ್ತು ನೋಡು.

sunaath said...

ಚಿತ್ರಾ ಹೇಳೋದು ಸರಿ ಅನ್ಸುತ್ತೆ. ಶ್ರಾವಣ ಮಾಸ ಅಂದರೆ ಮೊಟ್ಟೆ ಮಾಸ!

Sandeepa Nadahalli said...

@ಚಿತ್ರಾ,
:-)

ಸಾಗರದಾಚೆಯ ಇಂಚರ said...

hahha nice poem

Sandeepa Nadahalli said...

@ಸಾಗರದಾಚೆಯ,
Thanks a lot :)