ಬಂದೆಯಾ ಬಾ ಒಳಗೆ
ಬಾಗಿಲಲೆ ನಿಲ್ಲದಿರು
ಬಾಡಿಹುದು ಮುಖವೇಕೆ
ಬಳಿಯಲ್ಲೆ ನಾನಿರಲು
ಸರಿ ತಪ್ಪು ಎಂದೆಲ್ಲ
ತಲೆ ಕೆಡಿಸಿಕೊಳ್ಳದಿರು
ಚಿಕ್ಕ ಜೀವನ ನಮದು
ಹೊತ್ತಿಲ್ಲ ಅದಕೆಲ್ಲ
ತಿರುತಿರುಗಿ ಕೇಳದಿರು
ತಿರುಳಿಲ್ಲ ವಾದದಲಿ
ಒಪ್ಪಿ ಅಪ್ಪಲು ಸುಖವು
ಇಪ್ಪ ಈ ನಾಕುದಿನ
ನನಗೆ ಬಿಡು ಎಲ್ಲವನು
ನಾ ನೋಡಿಕೊಳ್ಳುವೆನು
ಮುತ್ತ ನೀ ಕೊಡುವಾಗ
ಮೂಗಡ್ಡ ಬರದಂತೆ
ಬಂದೆಯಾ ಬಾ ಒಳಗೆ..


7 comments:
ಒಳಗೆ ಬರುವವಳು ಬರುವುದು ಯಾವಾಗ ... ಚೆನ್ನಾಗಿದೆ, ಅಭಿನಂದನೆಗಳು..
ತೆರೆಯ ಮೇಲೆ.. ;-)
ಕಾದು ನೋಡಿ :D
ಧನ್ಯವಾದಗಳು :-)
WOW!!! Just superb!!!! Loved it.
Thanks Banu akka :)
superb sir, olage baruvavalu baruvaaga ondu announce maadi :)
ಚೆನ್ನಾಗಿ ಬರದ್ಯೋ.. ಆ ದಿನನೇ reader ಅಲ್ಲಿ ಓದಿದಿದ್ದಿ.. ಕಮೆಂಟ್ ಹಾಕಲಾಗಿತ್ತಿಲ್ಲೆ :)
@Harisha,
Thanks :)
Post a Comment