Tuesday, August 23, 2011

ವಿಜಯ ಕರ್ನಾಟಕದ ರೋಗ ಈಗ ಕನ್ನಡಪ್ರಭಕ್ಕೆ!

ಮಿತಿಮೀರಿದ ತಪ್ಪುಗಳು, ಅಸಂಖ್ಯ ಎಡವಟ್ಟುಗಳು, ತಪ್ಪನ್ನು ಒಪ್ಪಿಕೊಳ್ಳುವ ಕನಿಷ್ಟ ಸೌಜನ್ಯವೂ ಇರದ ಸೊಂಪಾದ’ಕರು’! ಇತ್ಯಾದಿಗಳಿಂದ ಬೇಸತ್ತು ವಿಜಯ ಕರ್ನಾಟಕ ಓದುವುದನ್ನು ನಿಲ್ಲಿಸಿದ್ದೆ. 

ಅದಾದ ಮೇಲೆ ಕನ್ನಡಪ್ರಭ ಚೆನ್ನಾಗಿದೆ ಅಂತ ಅದನ್ನು ತರಿಸುತ್ತಿದ್ದೆ. ಇತ್ತೀಚೆಗೆ ಅದರಲ್ಲೂ ವಿ.ಕ ರೋಗ ಕಾಣಿಸಿಕೊಂಡಿದೆ. ಹೆಚ್ಚೇನು ಬರೆಯುವ ಅಗತ್ಯವಿಲ್ಲ. ಇಲ್ಲಿ ಒಂದೆರಡು ಸ್ಯಾಂಪಲ್ ಇದೆ ನೋಡಿ.

೧.
ಎಚ್’ಎಸ್’ಆರ್ ಲೇಔಟ್ ೭ನೇ ಸೆಕ್ಟರ್ ೧೯ನೇ ಕ್ರಾಸ್’ನ ಮನೆಯೊಂದರಲ್ಲಿ ದಾಳಿ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೋಲೀಸರು ... ನಡೆಸಿ.. !
ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಪೋಲೀಸರು ದಾಳಿ ನಡೆಸಿದರೋ ಅಥವಾ ಅವರೇ ನಡೆಸುತ್ತಿದ್ದ ದಾಳಿಯ ಬಗ್ಗೆ ಅವರಿಗೇ ಮಾಹಿತಿ ಸಿಕ್ಕಿ ಇನ್ನೇನನ್ನೋ ನಡೆಸಿದರೊ! ಒಟ್ಟಿನಲ್ಲಿ ಇವರದ್ದೊಂದು ಬೇಜವಾಬ್ದಾರಿ ವರದಿ.

೨.

’ಅಣ್ಣಾ ತಂಡ’, ’ಅಣ್ಣಾ ಟೀಮ್’, ’ಅಣ್ಣ ಟೀಮ್’, ’ಅಣ್ಣಾ ಟೀಂ’. ಒಂದೇ ಲೇಖನದಲ್ಲಿ ನಾಲ್ಕೈದು ಹೆಸರುಗಳು! ಮತ್ತೊಂದು ಕೊರಲಿದೆ.

ಈ ಅವಾಂತರಗಳೆಲ್ಲ ಹಳೆಯ ಕೆಲವು ಬರಹಗಳನ್ನು ನೆನಪಿಸುತ್ತಿವೆ.

ಚಿತ್ರಗಳು http://www.kannadaprabha.com/

3 comments:

sunaath said...

ಸಂದೀಪ,
ನಿಮ್ಮ ಮಾತು ನಿಜ. ಕನ್ನಡಪ್ರಭಾ ಪತ್ರಿಕೆಗೆ ಹೊಸ ರೂಪ ಬಂದಿರುವದು ನಿಜವಾದರೂ ಸಹ ಕಾಗುಣಿತದ ತಪ್ಪುಗಳು ಹಾಗು ಬೇಜವಾಬುದಾರಿ ವರದಿಗಳು ಸಾಕಷ್ಟಿವೆ. ಕನ್ನಡವನ್ನು ಟೀವಿ ಮಾಧ್ಯಮವು ಕೆಡಿಸುತ್ತಿದೆ ಎಂದುಕೊಂಡರೆ, ಪತ್ರಿಕಾಮಾಧ್ಯಮವು ಈಗ ಟೀವಿಮಾಧ್ಯಮಕ್ಕೆ ಪೈಪೋಟಿ ನೀಡುತ್ತಿದೆ!

ಸಾಗರದಾಚೆಯ ಇಂಚರ said...

nimma lekhanakke Kannada prabha kke kareghante agali

Sandeepa Nadahalli said...

@sunaath,
ಹೌದೌದು.. ಪೈಪೋಟಿಗೆ ಬಿದ್ದಂತೆ ಹಾಳಾಗಿ ಹೋಗಿದ್ದಾರೆ!

@ಸಾಗರದಾಚೆಯ,
ಹಾಗೆಂದುಕೊಂಡೇ ಬರೆದಿದ್ದು. ಕಾದು ನೋಡೋಣ.