ನೆನಪುಗಳು ಸಾಯುವುದಿಲ್ಲ
ಏಕೆಂದರೆ ಅವಕ್ಕೆ ಜೀವವಿಲ್ಲ
ನೆನಪುಗಳು ಬಲೂನಿನಂತೆ
ಭಾವನೆಗಳು ತುಂಬಿದ್ದಾಗ
ಹಿಗ್ಗಿ ಅರಳುತ್ತವೆ. ಆಗಲೇ
ಒಂದು ಆಕಾರ, ರೂಪ ಎಲ್ಲ!
ನೆನಪುಗಳು ಹಳೆಯ ಕಾಲದ ಚಿತ್ರ
ಈಗ ಅವು ಬರೀ ದೂರದ ಚುಕ್ಕೆ
ಚುಕ್ಕೆಗಳೇ ಚಿತ್ರವಾಗುವುದಿಲ್ಲ
ನಾವು ಜೋಡಿಸಿ ಬರೆಯಬೇಕಷ್ಟೆ
ನೆನಪುಗಳು ತುಂಬಾ ಗಟ್ಟಿ
ಅವು ಕ್ಷಣಕ್ಕೊಮ್ಮೆ ಬದಲಾಗುವುದಿಲ್ಲ
ನೆನಪಿನಲ್ಲಿ ನಿಶ್ಚಿತತೆಯಿದೆ,
ಕಹಿಯೊ ಸಿಹಿಯೋ, ಸ್ಪಷ್ಟತೆಯಿದೆ
ಜೀವನದಲ್ಲಿ ನೆನಪುಗಳು
ಈರುಳ್ಳಿಯ ಸಿಪ್ಪೆಯಿದ್ದಂತೆ
ಸಿಪ್ಪೆ ತೆಗೆದರೆ ಈರುಳ್ಳಿಯಿಲ್ಲ
ನೆನಪಿಲ್ಲದೆ ಜೀವನವಿಲ್ಲ
ನೆನಪುಗಳು ಬಾಳೆಯಂತೆ
ಉಣಿಸಬಹುದದರಲಿ ಭಾವಬುತ್ತಿಯ
ಆದರೆ ಅದನ್ನೇ ತಿನ್ನಲಾಗುವುದಿಲ್ಲ
ಬಾಳೆಯಂತೆಯೇ, ಇವಕ್ಕೂ ಒಂದೇ ಕೊನೆ!
ನೆನಪುಗಳು ಸಾಯುವುದಿಲ್ಲ
ಏಕೆಂದರೆ ಅವಕ್ಕೆ ಜೀವವಿಲ್ಲ
ವಿ.ಸೂ: ನೆನಪುಗಳ ಬಗ್ಗೆ ಬೇರೆ ಬೇರೆ ಸಮಯದಲ್ಲಿ ಗೀಚಿದ್ದ ಸಾಲುಗಳನ್ನು ಒಟ್ಟಿಗೆ ಬರೆದಿದ್ದೇನೆ, ಅಷ್ಟೆ. ಒಂದೇ ಕವಿತೆ ಎಂದುಕೊಂಡು ಓದಿದರೆ ಸಮಂಜಸವೆನಿಸಲಾರದು! ಸಾದ್ಯವಿದ್ದಷ್ಟು ಬೇರೆ ಬೇರೆಯಾಗಿಯೇ ಓದಿಕೊಳ್ಳಿ.. :)


13 comments:
ವಾಹ್! ನೆನಪುಗಳ ವರ್ಣನೆಯ ಮೆರವಣಿಗೆ ಚೆನ್ನಾಗಿದೆ.
ನೆನಪುಗಳು ಸಾಯುವುದಿಲ್ಲ
ಏಕೆಂದರೆ ಅವಕ್ಕೆ ಜೀವವಿಲ್ಲ
ಈ ಸಾಲುಗಳು ಇಷ್ಟವಾದವು..
ಜೀವವಿಲ್ಲ ಎಂದು ಹೇಳುತ್ತಲೇ ಒಂದು ಸುಂದರ ಕವಿತೆಗೆ ಜೀವ ತುಂಬಿದ್ದೀರಿ...
@sunaath & @ಸಂಧ್ಯಾ,
ಧನ್ಯವಾದಗಳು. :-)
ನಾವೂ ಹೋದರು ನಮ್ಮ ನೆನಪುಗಳನ್ನು ಹಂಚಿಕೊಂಡಿರುವುದರಿಂದ ..ಅವು ಉಳಿಯುತ್ತವೆ ...ತುಂಬಾ ಚೆನ್ನಾಗಿದೆ .ಹಾರ್ದಿಕ ಅಭಿನಂದನೆಗಳು .
ತುಂಬಾ ಚೆನ್ನಾಗಿದೆ .. ನೆನಪುಗಳಿಗೆ ಜೀವವಿದೆ , ಕವನದಲ್ಲಿ.
@Anuradha,
ಹೌದು ದೊಡ್ಡಮ್ಮ.. ನೆನಪುಗಳು ಉಳಿಯುತ್ತವೆ!
@Ishwara Bhat,
ಧನ್ಯವಾದಗಳು. :)
ನೆನಪುಗಳ ಜಾತ್ರೆ....ಚೆನ್ನಾಗಿದೆ...
@ಮೌನರಾಗ,
ತುಂಬಾ ಧನ್ಯವಾದಗಳು :-)
ನೈಸ್ ... ಆದರೆ ಕೆಲವೊಮ್ಮೆ ನೆನಪುಗಳೂ ಮರೆತು ಹೋಗುತ್ತದೆ ... ತುಂಬಾ ಚೆನ್ನಾಗಿದ್ದು
very nice.. :) first two lines are just awesome ...
@ ನನ್ನೊಳಗಿನ ಕನಸು....
ಥ್ಯಾಂಕ್ಸು.. :-)
@Soumya. B,
Thanks a lot :-)
shabdagala jodane kavanavagalaradu. thu..
Post a Comment